ಎಲೆಕ್ಟ್ರಾಲ್ ಬಾಂಡ್: ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಖುಲಾಸೆಗೊಂಡ ಆರೋಪಿಗಳ ಕಂಪನಿಯಿಂದ 20 ಕೋಟಿ

0
299

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಹೆಚ್ಚು ಕೋಲಾಹಲ ಸೃಷ್ಟಿಯಾಗಿದ್ದ ಸೊಹ್ರಾಬುದ್ದೀನ್ ನಕಲಿ ಎನ್‍ಕೌಂಟರ್ ಹತ್ಯೆ ಪ್ರಕರಣದಲ್ಲಿ ಖುಲಾಸೆಯಾದ ಪ್ರಕರಣದ ಆರೋಪಿಯ ಮಾಲಕತ್ವದ ಕಂಪೆನಿ ಇಲೆಕ್ಟ್ರಾಲ್ ಬಾಂಡ್ ಮೂಲಕ 20 ಕೋಟಿ ರೂಪಾಯಿ ದೇಣಿಗೆ ನೀಡಿದೆ.

ನಕಲಿ ಎನ್‍ಕೌಂಟರ್ ಪ್ರಕರಣದಲ್ಲಿ ಆರೋಪಿಯಾದ ನಂತರ ಕೋರ್ಟು ಮಿಮಲ್ ಪಟ್ನಾನಿಯ ಮಾಲಕತ್ವದ ವಂಡರ್ ಸಿಮೆಂಟ್ ಕಂಪೆನಿ ಇಲೆಕ್ಟ್ರಾಲ್ ಬಾಂಡ್ ಮೂಲಕ ಹಣ ಪಾವತಿಸಿದೆ.

ವಂಡರ್ ಸಿಮೆಂಟ್ ಮತ್ತು ಸೊಹ್ರಾಬುದ್ದೀನ್ ಶೇಕ್ ಎನ್‍ಕೌಂಟರ್ ಪ್ರಕರಣದ ನಡುವೆ ಇರುವ ಸಂಬಂಧವನ್ನು ದ ರಿಪೋರ್ಟರ್ ಕಲೆಕ್ಟೀವ್ ಬಹಿರಂಗಕ್ಕೆ ತಂದಿತ್ತು. 2005ರಲ್ಲಿ ಸೊಹ್ರಾಬುದ್ದೀನ್ ಹತ್ಯೆಯಾಗಿದ್ದು ನಂತರ ಗೃಹ ಸಚಿವ ಈಗಿನ ದೇಶದ ಗೃಹ ಸಚಿವ ಅಮಿತ್ ಶಾ, ರಾಜಸ್ತಾನದ ಗೃಹ ಸಚಿವ ಗುಲಾಬ್ ಚಂದ್ ಕಟಾರಿಯ, ಹಿರಿಯ ಐಪಿಎಸ್ ಅಧಿಕಾರಿ ಡಿಜಿ ವಂಜಾರ, ಪಿಸಿ ಪಾಂಡೆ ಸಹಿತ 38 ಆರೋಪಿಗಳನ್ನು ಸಿಬಿಐ ಆರಂಭದಲ್ಲಿ ಆರೋಪ ಪಟ್ಟಿಯಲ್ಲಿ ಸೇರಿಸಿತ್ತು.

ಅಮಿತ್ ಶಾ ಬಂಧನಕ್ಕೊಳಗಾದರೂ 2014ರಲ್ಲಿ ಸಿಬಿಐ ಕೋರ್ಟು ಆರೋಪ ಮುಕ್ತ ಮಾಡಿತು. ವಿಮಲ್ ಪಟ್ನಾನಿ ಸಹಿತ ಉಳಿದ ಆರೋಪಿಗಳನ್ನು ವಿಚಾರಣಾ ಕೋರ್ಟು ವಿವಿಧ ಹಂತದಲ್ಲಿ ಆರೋಪ ಮುಕ್ತಗೊಳಿಸಿ ಬಿಡುಗಡೆಗೊಳಿಸಿತ್ತು.

ರಾಜಸ್ಥಾನದ ಮಾರ್ಬಲ್ ವ್ಯಾಪಾರಿ ಮತ್ತು ಪ್ರಸ್ತುತ ವಂಡರ್ ಸಿಮೆಂಟ್ ಮಾಲೀಕ ವಿಮಲ್ ಪಟ್ನಿ ಅವರಿಂದ ಹಣ ವಸೂಲಿ ಮಾಡಲು ಪ್ರಯತ್ನಿಸಿದ ನಂತರ ಶೇಖ್ ಅವರನ್ನು ಕೊಲ್ಲಲಾಯಿತು ಎಂಬುದು ಸಿಬಿಐ ಪ್ರಕರಣವಾಗಿತ್ತು. ಗಾಂಧಿನಗರದ ಬಳಿ ಪೊಲೀಸ್ ಎನ್‌ಕೌಂಟರ್‌ನಲ್ಲಿ ಶೇಖ್ ಕೊಲ್ಲಲ್ಪಟ್ಟರು. ಇದಾದ ಮೂರು ದಿನಗಳ ನಂತರ ಅವರ ಪತ್ನಿ ಕೌಸರ್ ಬಿ ವಾಹನದಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಶೇಖ್ ಅವರ ಸಹವರ್ತಿಗಳಲ್ಲಿ ಒಬ್ಬರಾದ ತುಳಸಿರಾಮ್ ಪ್ರಜಾಪತಿ ಕೂಡ ಕೊಲ್ಲಲ್ಪಟ್ಟರು.

22-23ಕ್ಕೆ ವಂಡರ್ ಸಿಮೆಂಟ್ ನ ಲಾಭ ಸುಮಾರು 250 ಕೋಟಿ ರೂ. ಎಲೆಕ್ಟೋರಲ್ ಬಾಂಡ್ ಮೂಲಕ 20 ಕೋಟಿ ಪಾವತಿಸಿದ್ದರೆ, ಪಟ್ನಿ ಕುಟುಂಬದ ಇತರ ನಾಲ್ವರು 8 ಕೋಟಿ ರೂ. ಅಶೋಕ್ ಪಟ್ನಿ (ಅಧ್ಯಕ್ಷರು), ಸುರೇಶ್ ಪಟ್ನಿ (ವ್ಯವಸ್ಥಾಪಕ ನಿರ್ದೇಶಕರು), ವಿವೇಕ್ ಪಟ್ನಿ (ನಿರ್ದೇಶಕರು) ಮತ್ತು ವಿನೀತ್ ಪಟ್ನಿ (ಅಧ್ಯಕ್ಷರು) ಬಾಂಡ್‌ಗಳ ಮೂಲಕ ರಾಜಕೀಯ ಪಕ್ಷಗಳಿಗೆ ಎಂಟು ಕೋಟಿ ರೂಪಾಯಿಗಳನ್ನು ನೀಡಿದ್ದರು.