ಸಿವಿಲ್ ನ್ಯಾಯಾಧೀಶೆಯಾದ ಮಂಗಳೂರಿನ ಕಾನೂನು ಪದವೀಧರೆ ಅಸ್ರೀನಾ

0
646

ಸನ್ಮಾರ್ಗ ವಾರ್ತೆ

ಮಂಗಳೂರು,ಆಗಸ್ಟ್ 5: ಸಿವಿಲ್ ನ್ಯಾಯಾಧೀಶೆಯಾಗಿ ರಾಜ್ಯ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯವರಿಂದ ಆಗಸ್ಟ್ 3 ರಂದು ದಕ್ಷಿಣ ಕನ್ನಡ ಜಿಲ್ಲೆಯ ಅಸ್ರೀನಾ ಪ್ರಮಾಣ ವಚನ ಸ್ವೀಕರಿಸಿದರು.

ಅಸ್ರೀನಾ ಹಳೆಯಂಗಡಿಯ ಅಕ್ಬರ್ ಅಲಿ ಮತ್ತು ಅಸ್ಮತ್ ದಂಪತಿಗಳ ಪುತ್ರಿ. ದಂಪತಿಗಳು ಪ್ರಸ್ತುತ ಕೃಷ್ಣಪುರದ ಚೊಕ್ಕಬೆಟ್ಟುವಿನಲ್ಲಿ ವಾಸಿಸುತ್ತಿದ್ದಾರೆ. ಅಸ್ರೀನಾ ತಂದೆ ಅಕ್ಬರ್ ಅಲಿ ಮಂಗಳೂರಿನಲ್ಲಿ ಎಂಆರ್‌ಪಿಎಲ್ ಉದ್ಯೋಗಿಯಾಗಿದ್ದು, ತಾಯಿ ಗೃಹಿಣಿಯಾಗಿದ್ದಾರೆ.

ಹಳೆಯಂಗಡಿ ಮತ್ತು ಕಿನ್ನಿಗೋಳಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಪೂರೈಸಿದ ನಂತರ, ಅಸ್ರೀನಾ ಇಲ್ಲಿನ ಎಸ್‌ಡಿಎಂ ಕಾನೂನು ಕಾಲೇಜಿನಿಂದ ಪದವಿ ಪೂರೈಸಿದರು. ನಂತರ ಅವರು ನಗರದ ಹಿರಿಯ ವಕೀಲರಾದ ಮಯೂರ ಕೀರ್ತಿ ಮತ್ತು ಶರತ್ ಕುಮಾರ್ ಬಿ ಅವರ ಅಡಿಯಲ್ಲಿ ಕಿರಿಯ ವಕೀಲರಾಗಿ ಕೆಲಸ ಮಾಡಲು ಪ್ರಾರಂಭಿಸಿದರು.

2019 ರಲ್ಲಿ, ಅವರು ನ್ಯಾಯಾಧೀಶರಾಗಿ ನೇಮಕಗೊಳ್ಳುವ ಉದ್ದೇಶದಿಂದ ಪರೀಕ್ಷೆಗೆ ಹಾಜರಾಗಿದ್ದು ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.