ಅಸ್ಸಾಂ ಪೌರತ್ವ ವಿವಾದ: 30 ವರ್ಷ ಸೇನೆಯಲ್ಲಿ ದುಡಿದ ಸುಬೇದಾರ್ ಮುಹಮ್ಮದ್ ಸನಾವುಲ್ಲಾ ಈ ದೇಶದ ಪ್ರಜೆಯಲ್ಲ!

0
561

ಗುವಾಹಟಿ,ಮೇ 31: ದೇಶದಲ್ಲಿ ಅನಧಿಕೃತ ವಾಸವಿರುವ ವಿದೇಶಿ ಎಂದು ಕಳೆದ ಮೂವತ್ತು ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸಿದ ಮುಹಮ್ಮದ್ ಸನಾವುಲ್ಲಾರನ್ನು ಅಸ್ಸಾಂ ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ.ಇವರಿಗೆ ಪೌರತ್ವ ದಾಖಲೆಗಳಿಲ್ಲ ಎಂದು ಅಸ್ಸಾಂ ಫಾರಿನರ್ಸ್ ಟ್ರಿಬ್ಯೂನಲ್ ಕ್ರಮ ಕೈಗೊಂಡಿದೆ. 2017ರಿಂದ ಇವರು ಭಾರತ ಸೇನೆಯಿಂದ ಕಾರ್ಪಸ್ ಆಫ್ ಇಲಕ್ಟ್ರಾನಿಕ್ಸ್ ಆಂಡ್ ಮೆಕಾನಿಕಲ್ ಇಂಜಿನಿಯರ್ಸ್ ವಿಭಾಗದಿಂದ ನಿವೃತ್ತರಾಗಿದ್ದರು. ನಂತರ ಅಸ್ಸಾಂ ಗಡಿ ಭದ್ರತಾ ಪಡೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಆದರು.

ಆದರೆ ಇದೇ ವೇಳೆ ಇವರನ್ನು ಈ ದೇಶದ ಪ್ರಜೆಯಲ್ಲ ಎಂದು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಸನಾವುಲ್ಲಾ 1967ರಲ್ಲಿ ಜನಿಸಿದ್ದು ಸಣ್ಣ ಪ್ರಾಯದಲ್ಲಿಯೇ ಸೇನೆಗೆ ಸೇರ್ಪಡೆಯಾಗಿದ್ದಾರೆ. ಸನಾವುಲ್ಲಾರ ವಯಸ್ಸಿನ ವ್ಯತ್ಯಾಸ, ಹೆಸರಿನ ಅಕ್ಷರಗಳ ವ್ಯತ್ಯಾಸ, ಕೆಲವು ದಾಖಲೆಗಳ ಅಭಾವ, ಮತದಾರ ಪಟ್ಟಿಯಲ್ಲಿ ಹೆಸರು ಸೇರಿಸದ್ದನ್ನೆಲ್ಲ ಪರಿಗಣಿಸಿ ಸಬ್‌ಇನ್ಸ್‌ಪೆಕ್ಟರೊಬ್ಬರನ್ನು ಈ ದೇಶದ ಪ್ರಜೆ ಅಲ್ಲ ಎಂದು ಘೋಷಿಸಲಾಗಿದೆ.