ಇರಾನ್‍ಗೆ ಬುದ್ಧಿ ಕಲಿಸಬೇಕು- ಅಮೆರಿಕ ಬೆಂಬಲಕ್ಕೆ ನಿಂತ ಜಿಸಿಸಿ ಅರಬ್ ಶೃಂಗ

0
600

ಮಕ್ಕ,ಮೇ 31: ಮಧ್ಯಪ್ರಾಚ್ಯದಲ್ಲಿ ಅಶಾಂತಿಗೆ ಕಾರಣವಾದ ಇರಾನಿಗೆ ಬುದ್ಧಿ ಕಲಿಸಬೇಕೆಂದು ಅಮೆರಿಕ ಮಾಡುತ್ತಿರುವ ಪ್ರಯತ್ನಗಳಿಗೆ ಅರಬ್ ಶೃಂಗ ಸಭೆ ಬೆಂಬಲ ಸೂಚಿಸಿತು. ಮಕ್ಕದ ಸಫಾ ಅರಮನೆಯಲ್ಲಿ ಜಿಸಿಸಿ ಅರಬ್ ಶೃಂಗ ನಡೆಯಿತು. ಇದೇ ವೇಳೆ ಯುದ್ಧವನ್ನು ನಾವು ಬಯಸಿಲ್ಲ ಎಂದು ಅದು ಹೇಳಿದೆ. ವಲಯದ ಶಾಂತಿಗೆ ಇರಾನ್ ಬೆದರಿಕೆಯಾಗಿದೆ ಎಂದು ಸೌದಿ ದೊರೆ ಸಲ್ಮಾನ್ ಪ್ರಸ್ತಾವ ಮಂಡಿಸಿದರು. ಇರಾನನ್ನು ತಹಬದಿಗೆ ನಿಲ್ಲಿಸಲು ಜಾಗತಿಕ ದೇಶಗಳು ಒಟ್ಟಾಗಿ ಸಹಕರಿಸಬೇಕೆಂದು ದೊರೆ ಹೇಳಿದರು.

ಫೆಲಸ್ತೀನಿಗೆ ಬೆಂಬಲವನ್ನೂ ನೀಡುವುದಾಗಿ ಮತ್ತು ಸಿರಿಯದಲ್ಲಿ ಇರಾನ್‍ನ ಹಸ್ತಕ್ಷೇಪವನ್ನು ಟೀಕಿಸಿದೆ.ಇಂದು ಶುಕ್ರವಾರ ಐವತ್ತಾರು ಇಸ್ಲಾಮಿಕ್ ದೇಶಗಳ ಶೃಂಗದಲ್ಲಿ ಇರಾನ್ ಮುಖ್ಯ ಚರ್ಚೆಯಾಗಲಿದೆ. ಇರಾನ್ ವಿರುದ್ಧ ಪ್ರಸ್ತಾವ ರೂಪಿಸುವುದರಿಂದ ಇರಾಕ್ ದೂರವುಳಿಯಿತು. ಇದೇ ವೇಳೆ ಕತರ್ ಪ್ರಧಾನಿ ಮಾತೃ ಶೃಂಗದಲ್ಲಿ ಕಂಡು ಬಂದರು. ಸೌದಿ ಮಿತ್ರರು ಕಳೆದ ಎರಡು ವರ್ಷಗಳಿಂದ ಕತರ್‌ಗೆ ದಿಗ್ಬಂಧನ ಹೇರಿದ್ದಾರೆ.

ಸಮುದ್ರದಾಳಿ, ಆರೆಮ್ಕೊ ದಾಳಿ ಹಿನ್ನೆಲೆಯಲ್ಲಿ ತುರ್ತು ಜಿಸಿಸಿ ಶೃಂಗವನ್ನು ಕರೆಯಲಾಗಿತ್ತು. ಗಲ್ಫ್‌ನಲ್ಲಿ ಅಸ್ವಾಸ್ಥ್ಯ ಹರಡುವ ವಾತಾವರಣ ಇದ್ದು ಇರಾನ್ ವಿರುದ್ಧ ಅಮೆರಿಕ ನಡೆಸುತ್ತಿರುವ ಕ್ರಮಗಳನ್ನು ಶೃಂಗ ಬೆಂಬಲಿಸಿದೆ. ಆದರೆ ಯುದ್ಧ ಅವುಗಳಿಗೆ ಬೇಡ. ಸದ್ಯ ಪ್ರಸ್ತಾವದಿಂದ ಇರಾಕ್ ದೂರವುಳಿದಿದೆ.