ಒಂದು ದಿನ ಭಾರತ ಸಹಿತ ನೆರೆಯ ದೇಶಗಳೂ ಅಫ್ಘಾನಿಸ್ತಾನದಲ್ಲಿ ಭಯೋತ್ಪಾದನಾ ವಿರೋಧಿ ಹೋರಾಟ ನಡೆಸಬೇಕಾಗಿ ಬರಬಹುದು- ಡೊನಾಲ್ಡ್ ಟ್ರಂಪ್

0
467

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್,ಆ.22: ಅಫ್ಘಾನಿಸ್ತಾನದ ಭಯೋತ್ಪಾದನೆಯನ್ನು ಎದುರಿಸಲು ಭಾರತ ಸಹಿತ ನೆರೆಯ ದೇಶಗಳು ಮಧ್ಯ ಪ್ರವೇಶಿಸಬೇಕಾಗಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಸಮಯ ಬಂದಾಗ ಭಾರತ, ಇರಾನ್, ರಷ್ಯ, ಟರ್ಕಿ ಮೊದಲಾದ ದೇಶಗಳು ಭಯೋತ್ಪಾದನೆಯ ವಿರುದ್ಧ ಹೋರಾಡಬೇಕಾಗಬಹುದು ಎಂದು ಟ್ರಂಪ್ ಮುನ್ನೆಚ್ಚರಿಕೆ ನೀಡಿದರು.

ಅಫ್ಘಾನಿಸ್ತಾನದ ಭಯೋತ್ಪಾದನೆಯ ವಿರುದ್ಧ 7000 ಮೈಲು ದೂರದ ಅಮೆರಿಕ ಮಾತ್ರ ಈಗ ಹೋರಾಡುತ್ತಿದೆ. ಉಳಿದ ದೇಶಗಳು ಭಯೋತ್ಪಾದನೆಯ ವಿರುದ್ಧ ತುಂಬ ಕಡಿಮೆ ಕೆಲಸ ಮಾಡುತ್ತಿವೆ ಎಂದು ಟ್ರಂಪ್ ಆರೋಪಿಸಿದರು. ಎಂದಾದರೂ ರಷ್ಯ, ಇರಾನ್, ಟರ್ಕಿ ಅಫ್ಘಾನಿಸ್ತಾನ ಮೊದಲಾದ ದೇಶಗಳಿಗೆ ಭಯೋತ್ಪಾದನೆಯ ವಿರುದ್ಧ ಯುದ್ಧ ಮಾಡುವ ಪರಿಸ್ಥಿತಿ ಸೃಷ್ಟಿಯಾಗಲಿದೆ ಎಂದು ಟ್ರಂಪ್ ಹೇಳಿದ್ದಾರೆ.

ಐಎಸ್ ಸ್ಥಾಪಿಸಿದ ಖಿಲಾಫತ್‌ನ್ನು ನಾವು ಶೇ.100ರಷ್ಟು ನಿರ್ಮೂಲನಗೊಳಿಸಿದ್ದೇವೆ. ಸ್ವಲ್ಪ ಸಮಯಾವಧಿಯಲ್ಲಿಯೇ ನಮಗೆ ಇದನ್ನು ಸಾಧಿಸಲು ಸಾಧ್ಯವಾಯ್ತು. ಆದರೆ ಐಎಸ್ ಬೆದರಿಕೆಯಿರುವ ಈ ದೇಶಗಳು ಯಾವಾಗಲಾದರೊಮ್ಮೆ ಅದನ್ನು ಬಲವಾಗಿ ಎದುರಿಸಬೇಕಾದೀತು ಎಂದು ಟ್ರಂಪ್ ಹೇಳಿದರು. ಹಾಗಂತ ಮುಂದಿನ 19 ವರ್ಷಗಳವರೆಗೆ ಅಮೆರಿಕದ ಸೈನ್ಯ ಅಫ್ಘಾನಿಸ್ತಾನದಲ್ಲಿ ಮುಂದುವರಿಯಬೇಕೇ ಎಂದು ಟ್ರಂಪ್ ಪ್ರಶ್ನಿಸಿದರು.