ಸನ್ಮಾರ್ಗ ವಾರ್ತೆ-
ಹೊಸದಿಲ್ಲಿ, ಡಿ.11: ಪೌರತ್ವ ತಿದ್ದುಪಡಿ ಮಸೂದೆ ರಾಜ್ಯಸಭೆಯಲ್ಲಿ ಚರ್ಚೆಗೆ ಬಂದಿದ್ದು ಇದೇವೇಳೆ, ಮಸೂದೆಯು ಈಶಾನ್ಯ ರಾಜ್ಯಗಳ ಜನರನ್ನು ವಂಶೀಯವಾಗಿ ನಿರ್ಮೂಲಿಸಲಿದೆ ಎಂದು ರಾಹುಲ್ ಗಾಂಧೀ ಆರೋಪಿಸಿದ್ದಾರೆ. ಈಶಾನ್ಯ ರಾಜ್ಯಗಳ ವಿರುದ್ಧದ ದಾಳಿ ಇದು. ಈಶಾನ್ಯ ವಲಯವನ್ನು ವಂಶೀಯವಾಗಿ ನಿರ್ಮೂಲಿಸುವುದು ಮೋದಿ-ಶಾ ಸರಕಾರದ ಗುರಿಯಾಗಿದೆ. ಅದುವೇ ಅವರ ಜೀವನ ದಾರಿ, ಮಾರ್ಗವಾಗಿದೆ. ಈಶಾನ್ಯ ವಲಯದ ಜನರೊಂದಿಗೆ ತಾನಿದ್ದೇನೆ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.
ವಿವಾದಿತ ಪೌರತ್ವ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಸೋಮವಾರ ಪಾಸಾಗಿತ್ತು. ಮಸೂದೆಯ ವಿರುದ್ಧ ದೇಶಾದ್ಯಂತ ಪ್ರತಿಭಟನೆ ವ್ಯಾಪಕವಾಗಿದೆ. ಲೋಕಸಭೆಯಲ್ಲಿ ಬೆಂಬಲಿಸಿ ಮತ ಹಾಕಿದ ಪಕ್ಷಗಳೊಳಗೆಯೇ ಭಿನ್ನಮತ ಕಂಡು ಬಂದಿದೆ. ಮಸೂದೆ ರಾಜ್ಯಸಭೆಯಲ್ಲಿ ಚರ್ಚೆಗೆ ಬಂದಿದೆ.












