ಮಂಗಳೂರಿನ ನೀರುಮಾರ್ಗದಲ್ಲಿ ಬ್ಯಾರಿ ಭವನ; ಶೀಘ್ರ ಶಿಲಾನ್ಯಾಸ- ರಹೀಮ್ ಉಚ್ಚಿಲ್

0
760

ಸನ್ಮಾರ್ಗ ವಾರ್ತೆ-

ಮಂಗಳೂರು; ಡಿ.11- ಮಂಗಳೂರಿನ ನೀರುಮಾರ್ಗದಲ್ಲಿ ಬಹು ನಿರೀಕ್ಷಿತ ಬ್ಯಾರಿ ಭವನ ನಿರ್ಮಾಣಗೊಳ್ಳಲಿದ್ದು, ಇದಕ್ಕಾಗಿ ೨೫ ಸೆಂಟ್ಸ್ ಜಮೀನನ್ನು ಗುರುತಿಸಲಾಗಿದೆ. ಸರಕಾರವು 6 ಕೋಟಿ ರೂಪಾಯಿಯನ್ನು ಮಂಜೂರು ಮಾಡಿದ್ದು, ಶೀಘ್ರವೇ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶಿಲಾನ್ಯಾಸ ನೆರವೇರಿಸಲಿದ್ದಾರೆ ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ರಹೀಮ್ ಉಚ್ಚಿಲ್ ಅವರು ತಿಳಿಸಿದ್ದಾರೆ. ಅವರು ಇಲ್ಲಿನ ಸ್ಟೇಟ್ ಬಾಂಕ್ ಬಳಿಯಿರುವ ಅಕಾಡೆಮಿ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತಾಡುತ್ತಿದ್ದರು.
ಬ್ಯಾರಿ ಭವನಕ್ಕಾಗಿ ಒಟ್ಟು 8 ಕೋಟಿ ರೂಪಾಯಿಗಳ ಬೇಡಿಕೆ ಇಡಲಾಗಿತ್ತು. ಆದರೆ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದಿಂದ 6 ಕೋಟಿ ಮಂಜೂರಾಗಿದೆ. ಇದರಲ್ಲಿ 3 ಕೋಟಿ ರೂಪಾಯಿ ಬಿಡುಗಡೆಯಾಗಿದೆ ಎಂದವರು ತಿಳಿಸಿದ್ದಾರೆ. ಇದೇವೇಳೆ,
2020ರ ಒಳಗೆ ವಿಶ್ವ ಬ್ಯಾರಿ ಸಮ್ಮೇಳನವನ್ನು ನಡೆಸಲಾಗುವುದು ಎಂದ ಅವರು, 2020-21ನೇ ಶೈಕ್ಷಣಿಕ ವರ್ಷದಿಂದ ೬ನೇ ತರಗತಿಗೆ ಬ್ಯಾರಿ ಪಠ್ಯ ಪುಸ್ತಕ ಅಳವಡಿಸಲಾಗುವುದು ಮತ್ತು ಪಠ್ಯ ಪುಸ್ತಕ ರಚನಾ ಕಾರ್ಯಕ್ಕಾಗಿ ಕ್ರಮ ನಡೆಸಲಾಗಿದೆ ಎಂದವರು ಹೇಳಿದ್ದಾರೆ.