ಸಲ್ಮಾನ್ ಖಾನ್ ಅವರಿಂದ ಆಯತುಲ್ ಕುರ್ಸಿ; ಚಿತ್ರ ವೈರಲ್

0
1499

ಸನ್ಮಾರ್ಗ ವಾರ್ತೆ

ಮುಂಬಯಿ: ಅತ್ಯಂತ ಜನಪ್ರಿಯ ನಟರಲ್ಲಿ ಸಲ್ಮಾನ್ ಖಾನ್ ಒಬ್ಬರು. ಜೊತೆಗೆ ಅವರಲ್ಲಿ ಚಿತ್ರ ಬರೆಯುವ ಕಲೆಯೂ ಇದೆ. ಚಲಚಿತ್ರಗಳ ನಟನೆ ಚಿತ್ರ ರಚನೆ ಎರಡರಲ್ಲೂ ಕುಶಲ ಈ ನಟ. ಬಿಡುವು ಇದ್ದಾಗ ಇವರು ಪೆಯಿಂಟಿಗ್ ಮಾಡುತ್ತಾರೆ. ಅಮೂರ್ತ ಚಿತ್ರಗಳಿಂದ ಮಾಡನ್ ಸ್ಟ್ರೋಕ್ಸ್ ವರೆಗೆ ವಿವಿಧ ರೀತಿಯ ಶೈಲಿಯಲ್ಲಿ ಸೃಜನಾತ್ಮಕತೆಯನ್ನು ಅವರು ತೋರಿಸಿದ್ದಾರೆ.

ಸಲ್ಮಾನ್ ಖಾನ್‍ರ ಲ್ಲಿ ಇಂತಹ ಹಲವು ಚಿತ್ರಗಳಿವೆ. ಸಲ್ಮಾನ್ ಖಾನ್ ರ ಪನ್ವೇಲ್ ನಲ್ಲಿರುವ ಅದ್ದೂರಿಯ ಮನೆಯಲ್ಲಿ ರಚಿಸಲಾಗಿರುವ ಪ್ರತಿಯೊಂದು ಚಿತ್ರಗಳು ಹೆಚ್ಚು ಕುತೂಹಲ ಹಾಗೂ ಇಷ್ಟವಾಗುವಂತಹದ್ದಿದೆ. ಹಲವು ವರ್ಣ ಚಿತ್ರಗಳು ಬಹಳ ದೊಡ್ಡ ಮೊತ್ತಕ್ಕೆ ಮಾರಾಟವಾಗುತ್ತಿದೆ.

ಪವಿತ್ರ ಕುರ್ ಆನಿನ ಶ್ಲೋಕಗಳನ್ನು ಆಧರಿಸಿ ಸಲ್ಮಾನ್ ಖಾನ್ ರಚಿಸಿರುವ ಚಿತ್ರಗಳು ಈಗ ವೈರಲ್ ಆಗಿವೆ. ತನ್ನ ಸಹೋದರಿ ಅರ್ಪಿತಾ ಖಾನ್ ಮತ್ತು ಆಕೆಯ ಪತಿ ಆಯುಷ್ ಶರ್ಮಾಗೆ ಸಲ್ಮಾನ್ ನೀಡಿದ ಉಡುಗೊರೆ ಅನೇಕ ಅಭಿಮಾನಿಗಳ ಗಮನವನ್ನು ಸೆಳೆದಿದೆ. ‘ಆಯತುಲ್ ಕುರ್ಸಿ’ ಮತ್ತು ನಮಾಜ್‌ನ ವಿವಿಧ ಹಂತಗಳು ಚಿತ್ರದಲ್ಲಿವೆ. ‘ಬೂಟ್ ಇಂಡಿಯಾ’ಗೆ ನೀಡಿದ ಸಂದರ್ಶನದಲ್ಲಿ ಆಯುಷ್ ಈ ಚಿತ್ರಗಳನ್ನು ಪ್ರದರ್ಶಿಸಿದರು.

https://www.instagram.com/p/Cxf3jTxPMIX/?utm_source=ig_web_copy_link