ಇನ್ನು ನಾಲ್ಕೇ ದಿನ: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‍ರಿಗೆ ಕೊಲೆ ಬೆದರಿಕೆ

0
875

ಸನ್ಮಾರ್ಗ ವಾರ್ತೆ

ಲಕ್ನೊ: ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್‍ ರಿಗೆ ಅಜ್ಞಾತ ವ್ಯಕ್ತಿಗಳಿಂದ ಕೊಲೆ ಬೆದರಿಕೆ ಬಂದಿದ್ದು ಇನ್ನು ಯೋಗಿಗೆ ಉಳಿದಿರುವುದು ನಾಲ್ಕು ದಿನ ಮಾತ್ರ ಎಂದು ಬೆದರಿಕೆ ಸಂದೇಶದಲ್ಲಿ ಹೇಳಲಾಗಿದೆ. ವಾಟ್ಸಪ್ ಎಮರ್ಜನ್ಸಿ ನಂಬರ್ 112ಕೆ ಉತ್ತರಪ್ರದೇಶ ಪೊಲೀಸರಿಗೆ ಹೀಗೊಂದು ಫೋನ್ ಬಂದಿದೆ ಎಂದು ಪೊಲೀಸರು ಕೇಸು ದಾಖಲಿಸಿದ್ದಾರೆ. ಆರೋಪಿಯನ್ನು ಹುಡುಕಲು ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿದೆ ಎಂದು ತಿಳಿಸಿರುವ ಪೊಲೀಸರು, ಎಪ್ರಿಲ್ 29ರಂದು ಸಂಜೆ ಇಂತಹ ಸಂದೇಶ ಬಂದಿರುವುದಾಗಿ ತಿಳಿಸಿದ್ದಾರೆ.

ಕಳೆದ ವರ್ಷ ಸೆಪ್ಟಂಬರ್, ನವೆಂಬರ್, ಡಿಸೆಂಬರಿನಲ್ಲಿ ಮುಖ್ಯಮಂತ್ರಿ ಆದಿತ್ಯನಾಥ್‍ ರಿಗೆ ನಿರಂತರ ಬೆದರಿಕೆ ಸಂದೇಶ ಬಂದಿತ್ತು. ನವೆಂಬರಿನಲ್ಲಿ 15 ವರ್ಷದ ಹುಡುಗ ಪೊಲೀಸರಿಗೆ ಕೊಲೆ ಬೆದರಿಕೆ ಸಂದೇಶ ಕಳುಹಿಸಿದ್ದ. ನಂತರ ತನಿಖೆಯಲ್ಲಿ ಹುಡುಗನ್ನು ಹುಡುಕಿ ಹಿಡಿದು ಜುವೈನಲ್ ಹೋಮ್‍ಗೆ ಕಳುಹಿಸಲಾಗಿತ್ತು. 2017ರಿಂದ ಮುಖ್ಯಮಂತ್ರಿ ಆದಿತ್ಯನಾಥ್‍ ರಿಗೆ ವಿವಿಐಪಿ ಝೆಡ್ ಪ್ಲಸ್ ಸುರಕ್ಷತೆ ನೀಡಲಾಗಿದೆ. ಜೊತೆಯಲ್ಲಿ 25ರಿಂದ 28 ಕಮಾಂಡೋಗಳಿರುತ್ತಾರೆ.

LEAVE A REPLY

Please enter your comment!
Please enter your name here