ಮುಂಬೈ, ಜು. 9: ಸಹೋದರಿ ಸುನೈನ ಮುಸ್ಲಿಂ ಯುವಕನನ್ನು ಪ್ರೀತಿಸಿದ್ದರಲ್ಲಿ ಕುಟುಂಬಕ್ಕೆ ಅಭ್ಯಂತರವಿಲ್ಲ ಎಂದು ನಟ ಹೃತಿಕ್ ರೋಶನ್ ಹೇಳಿದ್ದಾರೆ. ಇದು ನಮ್ಮ ಕುಟುಂಬಕ್ಕೆ ಸಂಬಂಧಿಸಿರುವ ಖಾಸಗಿ ವಿಚಾರವಾಗಿದೆ. ಸಹೋದರಿಯ ಈಗಿನ ಪರಿಸ್ಥಿತಿಯಲ್ಲಿ ಅವಳ ಕುರಿತು ಹೆಚ್ಚು ಹೇಳಲು ಸಾಧ್ಯವಿಲ್ಲ. ಹೆಚ್ಚಿನ ಕುಟುಂಬಗಳು ಇಂತಹ ಸಮಸ್ಯೆಯನ್ನು ಎದುರಿಸುತ್ತವೆ. ಇದು ಅಲ್ಲದೆ ಧರ್ಮವು ಕುಟುಂಬಕ್ಕೆ ಸಮಸ್ಯೆಯಾಗಿಲ್ಲ. ಇಷ್ಟು ವರ್ಷದಲ್ಲಿ ಒಮ್ಮೆ ಕೂಡ ಕುಟುಂಬದೊಳಗೆ ಧರ್ಮ ಚರ್ಚಿಸಲ್ಪಟ್ಟಿಲ್ಲ ಎಂದು ಹೃತಿಕ್ ರೋಷನ್ ಹೇಳಿದ್ದಾರೆ.
ಮುಸ್ಲಿಂ ಯುವಕನ್ನು ಪ್ರೀತಿಸಿದ್ದಕ್ಕೆ ಹೃತಿಕ್ ರೋಶನ್ ಮತ್ತು ತಂದೆ ರಾಕೇಶ್ ರೋಶನ್ ಸೇರಿ ಸುನೈನಾರನ್ನು ಹೊಡೆದಿದ್ದಾರೆ ಎಂದು ನಟಿ ಕಂಗಣಾ ರಾಣವತ್ ರ ಸಹೋದರಿ ರಂಗೊಲಿ ಚಂದೇಲಾ ಬಹಿರಂಗಪಡಿಸಿದ್ದರು. ಇದು ವಿವಾದ ಸೃಷ್ಟಿಯಾಗಿತ್ತು. ಪಿಂಕ್ ವಿಲ್ಲ ಮ್ಯಾಗಝಿನ್ ಗೆ ನೀಡಿದ ಸಂದರ್ಶನದಲ್ಲಿ ಸುನೈನಾ ಇದನ್ನು ಒಪ್ಪಿಕೊಂಡಿದ್ದರು. ಕಳೆದ ವರ್ಷ ತಾನು ಮುಸ್ಲಿಂ ಯುವಕನನ್ನು (ರುಹೈಲ್) ಪ್ರೀತಿಸಿದ್ದೆ. ಇದನ್ನು ತಿಳಿದ ತಂದೆ ಹೊಡೆದರು. ರುಹೈಲ್ನನ್ನು ಭಯೋತ್ಪಾದಕ ಎಂದು ಹೇಳಿ ಹೊಡೆದಿದ್ದಾರೆ. ಈ ವಿಷಯದಲ್ಲಿ ಹೆಚ್ಚು ಹೇಳುವುದಿಲ್ಲ. ಅವರು ರುಹೈಲ್ನನ್ನು ಒಪ್ಪಿಕೊಳ್ಳಬೇಕು. ಅವರೆಲ್ಲರೂ ಸೇರಿ ತನ್ನ ಜೀವನ ನರಕಸದೃಶ್ಯ ಮಾಡಿದ್ದಾರೆ. ನಾನು ರುಹೈಲ್ ಪರಸ್ಪರ ಭೇಟಿಯಾಗುವುದನ್ನು ನಿಷೇಧಿಸಿದ್ದಾರೆ. ಆತ ಒಬ್ಬ ಮುಸ್ಲಿಂ ಎನ್ನುವುದು ಅದಕ್ಕೆ ಕಾರಣವಾಗಿದೆ ಎಂದು ಸುನೈನಾ ಹೇಳಿದ್ದರು.
ನರಕ ಸದೃಶ್ಯ ಜೀವನ ಮುಂದುವರಿಯುತ್ತಿದೆ. ಜಿಗುಪ್ಸೆ ಹುಟ್ಟಿಸಿದೆ ಎಂದು ಸುನೈನಾ ಟ್ವೀಟ್ ಮಾಡಿದ್ದಾರೆ. ಸುನೈನಾ ಬೆಪೊಳರ್ ಡಿಸೋಡರ್ ನಿಂದ ಬಳಲುತ್ತಿದ್ದಾರೆ ಎಂಬ ವರದಿ ಕೆಲವು ದಿವಸಗಳ ಹಿಂದೆ ಪ್ರಕಟವಾಗಿತ್ತು. ಈ ಸುದ್ದಿ ಆಧಾರರಹಿತ ಎಂದು ಸುನೈನಾ ಹೇಳಿದ್ದರು.












