ತಲಪಾಡಿ ಗಡಿಯಲ್ಲಿ ಕೇರಳಕ್ಕೆ ಹೀಗೊಂದು ಸ್ವಾಗತ ಕೋರುವ ರಸ್ತೆ..

0
839

 

ಈ ದೃಶ್ಯ ನಿಮಗೆ ಕಾಣ ಸಿಗೋದು ಮಂಗಳೂರು-ಕಾಸರಗೋಡು ರಾಷ್ಟೀಯ ಹೆದ್ದಾರಿಯ ತಲಪಾಡಿ ಟೋಲ್ ಪ್ಲಾಝಾ ಮುಗಿದು Welcome To Kerala ಎಂದು ಬೋರ್ಡ್ ಕಾಣುವ ತಲಪಾಡಿ ಪ್ರದೇಶದ ಕೇರಳದ ಗಡಿಯ ಬಳಿ. ರಸ್ತೆ ಎಂಬುದು ಇತ್ತೋ ಇಲ್ಲವೋ ಎಂಬ ಪರಿಸ್ಥಿತಿ ಈ ಮಳೆಗಾಲದಲ್ಲಿ ನಿರ್ಮಾಣವಾಗಿದೆ.

ಕಳೆದ ವರ್ಷ ಕೇರಳ ರಾಜ್ಯ ಮಾಧ್ಯಮಗಳು ತಲಪಾಡಿಯಿಂದ ಕಾಸರಗೋಡುವರೆಗಿನ ರಾಷ್ಟ್ರೀಯ ಹೆದ್ದಾರಿಯ ದುರ್ಗತಿಯ ಕುರಿತು ವರದಿ ಮಾಡಿದ್ದವಾದರೂ ಹೆದ್ದಾರಿಯ ದುರಸ್ಥಿಗೆ ಶಾಶ್ವತ ಪರಿಹಾರ ಇದುವರೆಗೂ ದೊರತಿಲ್ಲ‌. ಸಾಮಾನ್ಯ ದುರಸ್ಥಿ ಕಾರ್ಯಗಳನ್ನು ಸ್ಥಳೀಯ ವ್ಯವಸ್ಥೆಗಳು ನಡೆಸುತ್ತವೆಯಾದರೂ ಮಳೆಗಾಲದ ಆರಂಭದ ದಿನದಲ್ಲೇ ರಸ್ತೆಯು ಹದಗೆಟ್ಟು ಹೋಗುತ್ತಿದ್ದು ದ್ವಿಚಕ್ರ ವಾಹನಗಾರರಿಗೆ ರಸ್ತೆಯಲ್ಲಿರುವ ಹೊಂಡಗಳು ಅಪಾಯದ ಕರೆಗಂಟೆಯಂತಾಗಿವೆ. ದೈನಂದಿನ ವ್ಯವಹಾರಕ್ಕೆ ಸೇರಿದಂತೆ ಬೇರೆ ಬೇರೆ ಪ್ರದೇಶದಿಂದ ಬರುವ ಪ್ರವಾಸಿಗರು, ವಿಪರೀತ ಘನ ವಾಹನ(ಲೋಡ್ ಗಾಡಿ)ಗಳು ಸೇರಿದಂತೆ ಪ್ರತಿನಿತ್ಯ ಸಾವಿರಾರು ವಾಹನಗಳು ಈ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದು ಸಂಭಾವ್ಯ ಅಪಘಾತಗಳಿಗೆ ಕಡಿವಾಣ ಹಾಕಲು ಸರಕಾರ ಮುಂದಾಗಬೇಕಿದೆ.

ವರದಿ: ಇರ್ಷಾದ್ ವೇಣೂರ್