ಫೆಲಸ್ತೀನಿಗೆ ಬೆಂಬಲ, ಇಸ್ರೇಲಿಗೆ ಬಹಿಷ್ಕಾರ ನೈತಿಕ ಜವಾಬ್ದಾರಿ: ನೆಲ್ಸನ್ ಮಂಡೇಲರ ಮೊಮ್ಮಗನ ಹೇಳಿಕೆ

0
890

ಲಂಡನ್, ಜು. 9: ಫೆಲಸ್ತೀನ್‍ಗೆ ಬೆಂಬಲ ಮತ್ತು ಇಸ್ರೇಲ್ ಬಹಿಷ್ಕಾರ ನೈತಿಕ ಜವಾಬ್ದಾರಿಯಾಗಿದೆ ಎಂದು ದಕ್ಷಿಣ ಆಫ್ರಿಕದ ಸಂಸದ ಮತ್ತು ನೆಲ್ಸನ್ ಮಂಡೇಲರ ಮೊಮ್ಮಗ ಎನ್‍ಕೊಸಿ ಸವಲಿವೆಲಿಲ್ ಮಂಡೇಲ ಹೇಳಿದರು. ಲಂಡನ್‍ನ ಬ್ರಿಟೀಶ್ ಎನ್‍ಜಿಒ ಫ್ರಂಟ್ ಆಫ್ ಅಲ್ ಅಕ್ಸಾ(ಎಫ್‍ಒಎ) ಆಯೋಜಿಸಿದ ಫೆಲಸ್ತೀನ್ ಎಕ್ಸ್ ಪೊದಲ್ಲಿ ಅವರು ಮಾತಾಡುತ್ತಿದ್ದರು. ಫೆಲಸ್ತೀನ್ ವಿಮೋಚನಾ ಹೋರಾಟವನ್ನು ನಮ್ಮ ಕಾಲದ ಅತಿದೊಡ್ಡ ನೈತಿಕ ವಿಷಯವೆಂದು ಎನ್‍ಕೊಸಿ ಮಂಡೇಲಾ ಹೇಳಿದ್ದರು.

ಇದು ನನ್ನ ಆಶಯ ಕೂಡ ಆಗಿದೆ. ಫೆಲಸ್ತೀನಿಯನ್ ಕಾಲ ಮತ್ತು ಇತಿಹಾಸ ಹಾಗೂ ಸಂಸ್ಕøತಿಯನ್ನು ಎತ್ತಿಹಿಡಿಯುವ ಎಕ್ಸ್ ಪೊ ಅಭಿನಂದನೆಗೆ ಅರ್ಹವಾಗಿದೆ. ನಾನು ಒಂದು ವಿಷಯ ಎಲ್ಲರಿಗೂ ಕೇಳುವಂತೆ ಹೇಳುತ್ತಿದೇನೆ. ಫೆಲಸ್ತೀನಿನ ಮಕ್ಕಳು ಮಹಿಳೆಯರು ದಿಟ್ಟವಾಗಿ ಪ್ರತಿರೋಧಿಸುವ ಹೋರಾಟ ಫೆಲಸ್ತೀನ್ ವಿಮೋಚನೆಯ ಹೋರಾಟವಾಗಿದೆ.

ಇದರೊಂದಿಗೆ ಅಂತಾರಾಷ್ಟ್ರಮಟ್ಟದಲ್ಲಿ ಬಹಿಷ್ಕಾರವೂ ಸೇರಿ ಜನಾಂಗೀಯ ವಾದಿಗಳಾದ ಇಸ್ರೇಲ್‍ಗೆ ನೋವು ಉಂಟು ಮಾಡುತ್ತಿದೆ ಎಂದು ಎನ್‍ಕೊಸಿ ಮಂಡೆಲ ಹೇಳಿದರು. ಮುಸ್ಲಿಮರು ಮತ್ತು ಕ್ರೈಸ್ತರ ವಿರುದ್ಧ ತಾರತಮ್ಯ ಎಸಗುವ ಐವತ್ತಕ್ಕೂ ಹೆಚ್ಚು ಕಾನೂನುಗಳು ಇಸ್ರೇಲಿನಲ್ಲಿದೆ. ಯಹೂದಿ ರಾಷ್ಟ್ರ ಎಂದು ಸ್ವಯಂ ಘೋಷಿಸಿದ ಇಸ್ರೇಲ್ ಪ್ರಜಾಪ್ರಭುತ್ವ ದೇಶವೆಂದು ಹೇಳುತ್ತಿದೆ. 1948ರಲ್ಲಿ ದೇಶ ಸ್ಥಾಪನೆಯಾಧ ಬಳಿಕ 1966ರವರೆಗೆ ಫೆಲಸ್ತೀನ್ ಕ್ರೂರವಾದ ಸೈನಿಕಾಡಳಿತದ ದಮನಕ್ಕೆ ಒಳಗಾಯಿತು. 1948ರ ಬಳಿಕ ಯಹೂದಿಯರಿಗಾಗಿ 600 ನಗರಗಳು ಸ್ಥಾಪನೆಯಾಯಿತು. ಫೆಲಸ್ತೀನಿಯರಿಗಾಗಿ ಒಂದು ನಗರವೂ ಆಗಿಲ್ಲ. ಫೆಲಸ್ತೀನಿಯರಿಗೆ ಕಟ್ಟಡ ಕಟ್ಟುವುದಕ್ಕೆ ಅನುಮತಿ ಕೂಡ ಇಲ್ಲ ಎಂದು ಅವರು ಹೇಳಿದರು.