ಸಂಸ್ಕೃತ ಭಾಷೆಯಲ್ಲಿ ಮಾತಾಡಿದರೆ ಮಧುಮೇಹ, ಕೊಲೊಸ್ಟ್ರಾಲ್ ಬರುವುದಿಲ್ಲ- ಬಿಜೆಪಿ ಸಂಸದ

0
436

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಡಿ. 13: ಸಂಸ್ಕೃತ ಭಾಷೆ ಮಾತಾಡಿದರೆ ದೇಹದ ನಾಡಿ ವ್ಯವಸ್ಥೆ ಹೆಚ್ಚು ಉತ್ತೇಜಕವಾಗುತ್ತದೆ ಮತ್ತು ಅನಾರೋಗ್ಯವನ್ನು ತಡೆಯಬಹುದು ಎಂದು ಬಿಜೆಪಿಯ ಸಂಸದ ಎಂ ಪಿ ಗಣೇಶ್ ಸಿಂಗ್ ಹೇಳಿದ್ದಾರೆ. ಆದ್ದರಿಂದ ದಿನಾಲೂ ಸಂಸ್ಕೃತ ಮಾತಾಡುವುದನ್ನು ರೂಢಿಸಬೇಕೆಂದು ಅವರು ಹೇಳಿದರು. ಸಂಸ್ಕೃತ ವಿಶ್ವವಿದ್ಯಾನಿಲಯ ಮಸೂದೆಯ ಕುರಿತು ಅವರು ಮಾತಾಡುತ್ತಾ ಹೀಗೆ ಹೇಳಿದ್ದಾರೆ.

ಅಮೆರಿಕದ ಸಂಶೋಧನಾ ಸಂಸ್ಥೆಯ ಅಧ್ಯಯನದಲ್ಲಿ ದಿನಾಲೂ ಸಂಸ್ಕೃತ ಮಾತಾಡುವವರ ನಾಡಿ ವ್ಯೂಹ ಉತ್ತೇಜಕವಾಗುತ್ತದೆ ಅದು ಮಧುಮೇಹ ಮತ್ತು ಕೊಲೆಸ್ಟರಾಲ್ ತಡೆಯುತ್ತದೆ ಎಂದು ತಿಳಿದು ಬಂದಿದೆ. ಕೆಲವು ಇಸ್ಲಾಮಿಕ್ ಭಾಷೆಗಳ ಸಹಿತ ಜಗತ್ತಿನ 97 ಭಾಷೆಗಳು ಸಂಸ್ಕೃತದಿಂದ ಆಗಿವೆ. ಸಂಸ್ಕೃತ ಕಂಪ್ಯೂಟರ್ ಪ್ರೋಗ್ರಾಮಿಂಗ್ ಮಾಡಿದರೆ ಅದು ಇದುವರೆಗಿನ ಅತ್ಯಂತ ಉತ್ತಮ ಮತ್ತು ಲೋಪರಹಿತದ್ದಾಗುವುದು ಎಂದು ನಾಸಾ ಹೇಳಿದೆ ಎಂದು ಗಣೇಶ್ ಸಿಂಗ್ ಹೇಳಿದರು.

ಸಂಸ್ಕೃತ ಭಾಷೆಯಂತೆ ಹಳೆಯ ಇನ್ನೊಂದು ಭಾಷೆಯಿಲ್ಲ. ಒಂದೇ ವಾಕ್ಯವನ್ನು ಹಲವು ರೀತಿಯಲ್ಲಿ ಓದುವ ವಿಶೇಷತೆ ಅದಕ್ಕಿದೆ ಎಂದು ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ ಹೇಳಿದರು. ಆಂಗ್ಲಭಾಷೆಯ ಬ್ರದರ್, ಕೌ ರೂಪುಗೊಂಡಿರುವುದು ಸಂಸ್ಕೃತದಿಂದ. ಪರಂಪರಾಗತ ಭಾಷೆಯಾದ ಸಂಸ್ಕೃತ ಪ್ರಚಾರ ಮಾಡಬೇಕಾಗಿದೆ ಎಂದು ಸಾರಂಗಿ ಹೇಳಿದರು.