ಉಯಿಘರ್ ಜನಾಂಗೀಯ ಹಿಂಸಾಚಾರಗಳ ಕುರಿತು ವರದಿ: ಚೀನಾದಲ್ಲಿ ಬಿಬಿಸಿ ವರ್ಲ್ಡ್ ನ್ಯೂಸ್‌ಗೆ ನಿಷೇಧ

0
391

ಸನ್ಮಾರ್ಗ ವಾರ್ತೆ

ಬೀಜಿಂಗ್: ಚೀನಾದಲ್ಲಿ ಉಯಿಘರ್ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರಗಳನ್ನು ವರದಿ ಮಾಡಿದ ಬೆನ್ನಿಗೆ ಮಾರ್ಗಸೂಚಿಗಳನ್ನು ಉಲ್ಲಂಘಿಸಿರುವುದಾಗಿ ಆರೋಪಿಸಿ ಚೀನಾದಲ್ಲಿ ಬಿಬಿಸಿ ವರ್ಲ್ಡ್ ನ್ಯೂಸ್‌ಗೆ ನಿಷೇಧ ಹೇರಲಾಗಿದೆ.

ಚೀನಾದ ಪ್ರಸಾರ ನಿಯಂತ್ರಕವು ಈ ನಿರ್ಣಯದ ಕುರಿತು ಘೋಷಿಸಿದ್ದು, ಬಿಬಿಸಿ ನೆಟ್‌ವರ್ಕ್ ನಿಯಮ ಉಲ್ಲಂಘನೆ ಮಾಡಿದ ಕಾರಣಕ್ಕೆ ದೇಶದಲ್ಲಿ ನಿಷೇಧಿಸಲಾಗುತ್ತಿದೆಯೆಂದು ಗುರುವಾರ ರಾತ್ರಿ ಬೀಜಿಂಗ್ ರೇಡಿಯೋ ಘೋಷಿಸಿದೆ. ‘ಸುದ್ದಿಗಳು ನಿಜಾಂಶ ಮತ್ತು ಪಾರದರ್ಶಕವಾಗಿರಬೇಕು’, ‘ಚೀನಾದ ಅಂತಾರಾಷ್ಟ್ರೀಯ ಹಿತಾಸಕ್ತಿ’ಗೆ ಧಕ್ಕೆ ತರುವಂತಿರಬಾರದು ಎಚ್ಚರಿಕೆಯನ್ನು ಈ ಸಂದರ್ಭದಲ್ಲಿ ಅದು ನೀಡಿದೆ.

ಕಾನೂನನ್ನು ಉಲ್ಲಂಘನೆಯ ಆರೋಪದಡಿಯಲ್ಲಿ ಬ್ರಿಟನ್‌ನಲ್ಲಿ ಚೀನಾದ ಪ್ರಸಾರ ಸಿಜಿಟಿಎನ್‌ನ ಪರವಾನಗಿಯನ್ನು ರದ್ದುಪಡಿಸಿದ ಕೆಲವೇ ದಿನಗಳಲ್ಲಿ ಈ ನಿರ್ಧಾರಕ್ಕೆ ಬಂದಿದೆ. ಲಂಡನ್‌ನಿಂದ ಸೆನ್ಸಾರ್‌ಶಿಪ್ ಹಾಕಿದ ಕುರಿತು ಚೀನಾ ಆಕ್ರೋಶ ವ್ಯಕ್ತಪಡಿಸಿತ್ತು. ಇದಲ್ಲದೇ, ಬ್ರಿಟನ್ ಕೂಡ ಬೇಹುಗಾರಿಕೆಯ ಆರೋಪದಡಿಯಲ್ಲಿ ಚೀನಾದ ಹುವೈ 5G ನೆಟವರ್ಕ್‌ನ್ನು ನಿಷೇಧಿಸಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಬಿಬಿಸಿ ವಕ್ತಾರ ಚೀನಾದ ನಡೆ ಬೇಸರ ತರಿಸಿದೆ. ಈಗಾಗಲೇ ಚೀನಾದ ಪ್ರತಿಷ್ಠಿತ ಹೋಟೆಲ್‌ಗಳಲ್ಲಿ ನಮಗೆ ನಿಷೇಧ ಹೇರಲಾಗಿದ್ದು, ನಾವು ಇಡೀ ವಿಶ್ವದಿಂದ ಅತ್ಯಂತ ಪ್ರಮಾಣಿಕ, ತಾರತಮ್ಯ ರಹಿತ ಸುದ್ದಿ ಪ್ರಕಟಿಸುತ್ತಿದ್ದೇವೆ ಎಂದು ಹೇಳಿದ್ದಾರೆ.