ಚೀನ: ಇಸ್ಲಾಮ್ ದಮನದಲ್ಲಿ ಕಮ್ಯುನಿಸಂ

0
899

ಮುಸ್ಲಿಮರ ಮನಸ್ಸಿನಿಂದ ಇಸ್ಲಾಮನ್ನು ತೊಳೆದು ಬಿಡಲು ಚೀನ ಸರ್ವಶಕ್ತಿ ಹಾಕುತ್ತಿದೆ. ಚೀನ ಅತಿಕ್ರಮಣ ಮಾಡಿದ ತುರ್ಕಿಸ್ಥಾನದಲ್ಲಿ ಬೇರೆ ಬೇರೆ ಕಾರಣಗಳನ್ನು ಮುಂದೊಡ್ಡಿ ಕಠಿಣ ಪೀಡನೆಗಳಿಗೆ ಚೀನ ಮುಸ್ಲಿಮರನ್ನು ಗುರಿಪಡಿಸು ತ್ತಿದೆ. ಅಲ್ಲಾಹನು ಕಲ್ಪಿಸಿದ ದೀನಿ ಕರ್ಮಗಳನ್ನು ನಿರ್ವಹಿಸುವುದರಲ್ಲಿ ಮುಸ್ಲಿಮರನ್ನು ತಡೆಯುವುದಕ್ಕೆ ಇದೆಲ್ಲ ಸೀಮಿತವಾಗಿಲ್ಲ. ಬದಲಾಗಿ ತಮ್ಮ ವಿಶ್ವಾಸ ನಂಬಿಕೆಯ ಧರ್ಮ ಇಸ್ಲಾಮನ್ನೇ ತೊರೆದು ಬಿಡಬೇಕು ಮತ್ತು ಧರ್ಮ ನಿರಪೇಕ್ಷ ಕಮ್ಯೂನಿಸಂನ್ನು ನಂಬಬೇಕೆಂದು ಅದು ಪೂರ್ವ ತುರ್ಕಿಮೇನಿಸ್ತಾನದ ಜನರಿಗೆ ತಂತ್ರ ಪೂರ್ವ ಒತ್ತಡ ಹಾಕುತ್ತಿರುವುದು ಚೀನದ ಗಂಭೀರ ಮತ್ತು ನಿಂದಾತ್ಮಕ ನಡೆಯಾಗಿದೆ.

ಯಾಕೆ ಇವರಿಗೆಲ್ಲ ಇಸ್ಲಾಮಿನಲ್ಲಿ ವಿರೋಧ? ಎಲ್ಲಿ ಹೋದರೂ ಧರ್ಮ ನಿರಪೇಕ್ಷರು ಮತ್ತು ಇತರ ಧರ್ಮಾಂಧರು ಇಸ್ಲಾಮಿಗೆ ಹೆದರುತ್ತಿರು ವುದು ತಮ್ಮ ಅಸ್ತಿತ್ವದ ಕುರಿತ ಅತಂತ್ರವನ್ನು ಆರ್ಥ ಮಾಡಿಕೊಂಡಿರುವುದರಿಂದ ಆಗಿರುತ್ತದೆ ಎಂದು ನಾವು ತಿಳಿದಿರಬೇಕು. ಚೀನ ಕೂಡ ಹೀಗೆ ಇಸ್ಲಾಮಿಗೆ ಹೆದರುತ್ತಿದೆಯೇ. ಹೌದು ಅದು ಚೀನದ ಆಡಳಿತಗಾರರು ಬಹಿರಂಗ ವಾಗಿಯೇ ಮುಸ್ಲಿಮರ ಮೇಲೆ ದೌರ್ಜನ್ಯವೆಸಗು ತ್ತಿದ್ದಾರೆ. ಮುಸ್ಲಿಮರು ಏನು ಮಾಡದಿದ್ದರೂ ಇಸ್ಲಾಮಿನ ಕುರಿತು ಅವರಲ್ಲಿ ತಳಮಟ್ಟದಲ್ಲಿ ಹೆದರಿಕೆ ಮಡುಗಟ್ಟಿದೆ. ತಮ್ಮ ದೌರ್ಜನ್ಯಗಳನ್ನು ಅಲ್ಲಿನ ಸರಕಾರ ನಿರಾಕರಿಸುತ್ತಿಲ್ಲ. ತಾನು ಸಶಕ್ತ ಎಂದು ಜಗತ್ತಿನ ಮುಂದೆ ತೋರಿಸಿಕೊಳ್ಳುವುದರಲ್ಲಿ ಅದಕ್ಕೆ ಅಗತ್ಯವಾಗಿದೆ. ಚೈನೀಸ್ ಸರಕಾರ ಮುಸ್ಲಿಮರನ್ನು ದಿಗ್ಬಂಧನದಲ್ಲಿರಿಸಿದೆ. ದಶಲಕ್ಷ ಜನರನ್ನು ಹೊಂದಿರುವ ಉಯುಗುರ್ ವಂಶೀಯರು ಜೈಲಿ ನಲ್ಲಿ ಇರಿಸಲಾದಂತೆ ತಡೆದಿರಿಸಿದ ಸ್ಥಿತಿಯಲ್ಲಿ ಜೀವಿಸುತ್ತಿದ್ದಾರೆ ಎನ್ನುವುದನ್ನು ಸೂಚಿಸುವಂಥ ಹಲವಾರು ವರದಿಗಳು ಇವೆ ಎಂದು ವಿಶ್ವಸಂಸ್ಥೆಯ ಅಧೀನದಲಿ ್ಲರುವ ಮಾನವಹಕ್ಕು ವೇದಿಕೆಯೇ ಬಹಿರಂಗಪಡಿಸಿದೆ.

ಉಯುಗುರ್ ವಂಶದ ಎರಡು ದಶಲಕ್ಷ ಮುಸ್ಲಿಮ್ ಅಲ್ಪಸಂಖ್ಯಾತರು ಪೂರ್ವ ಟರ್ಕಿಯ ಶಿಂಜಿಯಾಂಗ್ ಪ್ರದೇಶದ ರಾಜಕೀಯ ಬಂಧಿ ಖಾನೆಗೆ ಹೋಗಲು ದಿಗ್ಬಂಧಿತರಾಗಿದ್ದಾರೆ ಎಂದು ವಿಶ್ವಸಂಸ್ಥೆಯ ಜನಾಂಗೀಯ ನಿಮೂರ್ಲನ, ತಾರ ತಮ್ಯ ಸಮತಿಯ ಸದಸ್ಯ ಜೊ ಮ್ಯಾಕ್‍ಡೊಗಲ್ ಹೇಳುತ್ತಿದ್ದಾರೆ. ಅವರು ಹೀಗೆ ಹೇಳುತ್ತಿದ್ದಾರೆ: ಉಯುಗುರ್ ವಂಶದವರು ವಾಸಿಸುತ್ತಿರುವ ಸ್ಥಳವನ್ನು ಒಂದು ಬೃಹತ್ ಜೈಲು ಪಾಳಯ ದಂತಾಗಿ ಬದಲಿಸಲಾಗಿದೆ ಎನ್ನುವ ಅನೇಕ ವರದಿಗಳು ಬಂದಿದ್ದು ನಾವು ತುಂಬ ಆತಂಕಕ್ಕೊಳ ಗಾದೆವು. ಧಾರ್ಮಿಕ ಭಯೋತ್ಪಾದ ನೆಯನ್ನು ದಮನಿಸುವ ಮತ್ತು ಸಮಾಜದ ಸುಸ್ಥಿರತೆ ಸಂರಕ್ಷಿಸುವ ನೆಪದಲ್ಲಿ ಹಕ್ಕುಗಳಿಲ್ಲದ ಕ್ಷೇತ್ರವಾಗಿ ಉಯುಗುರ್ ವಂಶೀಯರು ವಾಸವಿರುವ ಪ್ರದೇಶ ಗಳನ್ನಾಗಿ ಚೀನ ಮಾಡಿದೆ.

ಚೀನದ ಕಮ್ಯುನಿಸ್ಟ್ ಕೋಟೆಯಲ್ಲಿ ಮುಸ್ಲಿಮರ ಅಸ್ತಿತ್ವ ಕಿರಿಕಿರಿ ಎಂದು ಆಡಳಿತಗಾರರಿಗೆ ಅನಿಸು ತ್ತಿದ್ದರೂ ಮುಸ್ಲಿಮರು ಅಲ್ಲಿ ತಮ್ಮ ಅಸ್ತಿತ್ವ ಮತ್ತು ಚಿಹ್ನೆಗಳನ್ನು ಈವರೆಗೂ ಕಾಪಾಡಿಕೊಂಡು ಬಂದಿ ದ್ದಾರೆ. ಮುಸ್ಲಿಮರನ್ನು ದಮನಿಸಿ ಇಸ್ಲಾಮ್‍ನನ್ನು ಚೀನದಿಂದ ಗಂಟೆಮೂಟೆ ಕಟ್ಟಿಸಬಹುದೆನ್ನುವ ಆಡಳಿತಗಾರರ ಕನಸು ಈವರೆಗೆ ಈಡೇರಿಲ್ಲ. ಆದರೆ ಅವರು ಅದಕ್ಕೆ ಯತ್ನಿಸುತ್ತ ನಿರಂತರ ಮುಂದುರಿಯುತ್ತಿದ್ದಾರೆ. ಮುಸ್ಲಿಮರನ್ನು ದಮನಿಸಿ ದರೆ ಇಸ್ಲಾಮ್ ಚೀನದಿಂದ ಓಡಿ ಹೋಗುತ್ತದೆ ಎನ್ನುವುದು ಎಂತಹ ಮೂರ್ಖ ಸಿದ್ಧಾಂತವಾಗಿದೆ. ಯಾಕೆಂದರೆ ಇಸ್ಲಾಮ್ ಅಲ್ಲಾಹನ ಮೂಲಕ ಅಸ್ತಿತ್ವವನ್ನು ಉಳಿಸಿಕೊಂಡಿರುವ ಧರ್ಮ. ದೇವನೇ ಅದನ್ನು ರಕ್ಷಿಸುವುದಾದರೆ ಚೀನದ ಆಡಳಿತಗಾರರು ಎಷ್ಟು ಯಶಸ್ವಿಯಾಗಬಹುದು? ಮುಸ್ಲಿಮರ ದಮನವೊಂದನ್ನು ಬಿಟ್ಟು ಚೀನದಿಂದ ಇನ್ನೇನೂ ಸಾಧ್ಯವಿಲ್ಲ. ಅಂದರೆ ಇಸ್ಲಾಮನ್ನು ಚೀನದಿ ಂದ ಬಡಿದೋಡಿಸಲು ಅವರಿಂದ ಸಾಧ್ಯವಿಲ್ಲ. ಈ ಹಿಂದೆ ಅಂದಾಲೂಸ್ ಅರ್ಥಾತ್ ಸ್ಪೈನ್‍ನಲ್ಲಿ ಒಬ್ಬನೆ ಒಬ್ಬ ಮುಸ್ಲಿಮ್ ಇರಬಾರದೆಂದು ಶಿಲುಬೆ ಯುದ್ಧಕೋರರು ಮಾಡಿದ್ದ ಪ್ರಯತ್ನ ಯಶಸ್ವಿಯಾಗಿಲ್ಲ. ಆಡಳಿತ ಅವರ ಕೈಗೆ ಬಂದಿರ ಬಹುದು. ಆದರೆ ಈಗಲೂ ಅಲ್ಲಿ ಮುಸ್ಲಿಮರಿದ್ದಾರೆ. ರಷ್ಯದ ಕಮ್ಯುನಿಸಂ ಚೀನದ ಅದೇ ಹಾದಿ ಈ ಹಿಂದೆ ಅನುಸರಿಸಿ ವಿಫಲವಾಗಿದೆ. ಅಲ್ಲಿಯೂ ಮುಸ್ಲಿಮರು ಇದ್ದಾರೆ. ಮುಸ್ಲಿಮರು ಎನ್ನುವವರು ಜಗತ್ತಿನೆಲ್ಲ ಕಡೆಯೂ ಇದ್ದಾರೆ. ಇದರಿಂದ ಚೀನ ಹೇಗೆ ಹೊರತಾಗಲು ಸಾಧ್ಯ?

ಮುಸ್ಲಿಮರ ವಿರುದ್ಧ ಪ್ರತೀಕಾರದ ಕುರಿತು ಎಲ್ಲ ಷಡ್ಯಂತ್ರಗಳು ನಡೆಯುತ್ತಿವೆ. ಚೀನದ ಕಮ್ಯುನಿಸಸ್ಟ್ ಪಾರ್ಟಿಯ ಮುಖ ಪತ್ರಿಕೆ ಆಗ್ರಹಿಸಿರುವಂತೆ ಮಸೀದಿಗಳನ್ನು ಧ್ವಂಸ ಮಾಡುವ ಕಾನೂನಿಗೆ ಸಿಂಧುತ್ವ ನೀಡುವ ಕೆಲಸ ಚೀನ ಸರಕಾರ ಆರಂಭಿಸಿದೆ ಎಂದು ತಿಳಿದು ಬಂದಿದೆ. ದೇಶದ ಉತ್ತರ ಭಾಗದ ಮುಸ್ಲಿಮ್ ಬಹು ಸಂಖ್ಯಾತ ಪ್ರದೇಶದ ಐತಿಹಾಸಿಕ ಪ್ರಾಮುಖ್ಯವಿರುವ ಮಸೀದಿಯನ್ನು ನಾಶಪಡಿಸುವ ಯೋಜನೆಯಲ್ಲಿ ಚೀನದ ಅಧಿಕಾರಿಗಳು ದೃಢವಾಗಿ ನಿಂತಿದ್ದಾರೆ. ಕಾನೂನಿನ ಅಧಿಕಾರಕ್ಕಿಂತ ಮೇಲೆ ಯಾವ ಧರ್ಮವೂ ಇಲ್ಲ ಎಂದು ಅವರು ಹೇಳುತ್ತಿದ್ದಾರೆ.

ಗ್ಲೋಬಲ್ ಟೈಂಸ್ ಪತ್ರಿಕೆ ಅದರ ಅಡಿಟೋರಿ ಯಲ್‍ನಲ್ಲಿ ದೇಶದಲ್ಲಿ ಎಲ್ಲ ಧರ್ಮದವರಿಗೂ ಅವರ ಧರ್ಮ ಕಾನೂನಿಗಿಂತ ಮೇಲಲ್ಲ ಎನ್ನುವ ಸಂದೇಶವನ್ನು ಸರಕಾರ ನೀಡುತ್ತಿದೆ ಎಂದು ಬರೆದಿದೆ. ಮಸೀದಿ ಧ್ವಂಸ ಮಾಡುವುದು ಆ ಪ್ರದೇಶದ ಜನರಲ್ಲಿ ಆಕ್ರೋಶ ಸೃಷ್ಟಿಗೆ ಖಂಡಿತ ಕಾರಣವಾಗಬಹುದು. ಇದೇ ವೇಳೆ ಸ್ಥಳೀಯಾ ಡಳಿತ ಅದಕ್ಕೆ ನಿಷ್ಕ್ರಿಯತೆಯನ್ನು ತೋರಿಸುತ್ತಿದೆ ಮತ್ತು ಚೀನದ ಕಾನೂನಿಗಿಂತ ಮೇಲಿನ ಅಧಿ ಕಾರ ಧರ್ಮಗಳಿವೆ ಎಂಬ ಚಿಂತನೆಗೆ ಪೋಷಣೆ ನೀಡುತ್ತಿದೆ” ಎಂದು ಪತ್ರಿಕೆ ಬರೆಯಿತು.
ಉತ್ತರ ಚೀನದ ಮುಸ್ಲಿಮ್ ಬಹುಸಂಖ್ಯಾತ ಪ್ರದೇಶದ ಸ್ವಯಮಾಡಳಿತ ಪ್ರದೇಶ ಸಿಂಗ್ಸಿಯದಲ್ಲಿ ಇತ್ತೀಚೆಗೆ ನವೀಕರಿಸಿದ ಪ್ರಾಚೀನ ಮಸೀದಿ ಯನ್ನು ಧರಾಶಾಯಿಯನ್ನಾಗಿಸುವ ಸರಕಾರದ ಕ್ರಮದ ವಿರುದ್ಧ ಪ್ರತಿಭಟಿಸುತ್ತಾ ನೂರಾರು ಮುಸ್ಲಿಮರು ಬೀದಿಗಿಳಿದರು. ಚೀನದ ನಿರ್ಮಾಣ ಶೈಲಿಯಲ್ಲಿ ರುವ 600 ವರ್ಷ ಹಳೆಯ ಮಸೀದಿ ಇದು. ಇದೇ ಫೋಕ್ಯೋ ನಗರದ ಫೋಕ್ಯೊ ಮಸೀದಿಯ ಮುಂದೆ ನೂರಾಖೋಯ್ ವಂಶದ ಮುಸ್ಲಿಮರು ಪ್ರತಿಭಟನೆ ನಡೆಸಿದರು. ಈ ಹಿಂದೆಯೂ ಚೀನ ಕ್ರಾಂತಿಯನ್ನು ವಿಫಲಗೊಳಿಸಿದ್ದು ಇಲ್ಲಿ. ಸರಕಾರದ ತೀರ್ಮಾನದ ವಿರುದ್ಧ ಮುಸ್ಲಿಮರು ತಮ್ಮ ಪ್ರತಿ ಭಟನೆಯನ್ನು ವ್ಯಕ್ತಪಡಿಸಿದರು. ಒಂದು ವರ್ಷ ಮೊದಲು ನಾಶಪಡಿಸಲಾದ ಇಲ್ಲಿನ ಮಸೀದಿ ಯನ್ನು ಮರು ನಿರ್ಮಾಣಗೊಳಿಸಲಾಗಿತ್ತು.

ಐತಿಹಾಸಿಕ ಪ್ರಾಮುಖ್ಯತೆಯನ್ನು ಹೊಂದಿರುವ ಮಸೀದಿಯನ್ನು ನಾಶಪಡಿಸಲು ನೀಡಿದ ಕಾರಣ ಸರಕಾರ ಅದನ್ನು ನಿರ್ಮಿಸು ಅನುಮತಿ ಪಡೆದಿಲ್ಲ ಎಂಬುದಾಗಿದೆ ಸಿಂಗ್ಸಿಯ ಪ್ರದೇಶದಲ್ಲಿ ಇದಕ್ಕಿಂತ ಮೊದಲು ಅಷ್ಟು ದೊಡ್ಡ ಪ್ರತಿಭಟನೆ ಕಂಡು ಬಂದಿರಲಿಲ್ಲ ಎಂದು ಸೌತ್ ಚೀನ ಮಾರ್ನಿಂಗ್ ಪತ್ರಿಕೆ ತಿಳಿಸಿತ್ತು. ಎಲ್ಲ ರೀತಿಯ ಅಂತಾರಾಷ್ಟ್ರೀಯ ಮಾನದಂಡಗಳು ಮತ್ತು ನಿಬಂಧನೆಗಳನ್ನು ಉಲ್ಲಂಘಿಸಿ ಚೀನದ ಸರಕಾರ ಮಸೀದಿ ಒಡೆದು ಹಾಕಲು ಮುಂದಾಯಿತು. ಮುಸ್ಲಿಮ್ ರಾಷ್ಟ್ರಗಳು, ಸರಕಾರಗಳು ಚೀನದ ಈ ಕ್ರಮಕ್ಕೆ ಕಡಿವಾಣ ತೊಡಿಸಲು ಮುಂದೆ ಬರಬೇಕಾದ ಅನಿವಾರ್ಯತೆ ಇದೆ.

ಜಡವಾದ ಮುಸ್ಲಿಮ್ ಕೂಟ ಬಡವಾಗಿ ಹೋಗುತ್ತಿರುವುದಕ್ಕೆ ಈ ದಿನಗಳಲ್ಲಿ ದೊಡ್ಡ ಉದಾಹರಣೆ ಇರುತ್ತಾ ಉಯುಗುರ್ ವಂಶೀಯರ ಬಯಕೆ, ಆವರಿಗೆ ಸ್ವಾತಂತ್ರ್ಯ ದಕ್ಕಿಸಿಕೊಡುವವರು ಯಾರು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಚೀನ ಮುಸ್ಲಿಮರನ್ನು ದಮನಿಸಿ ಇಡೀ ದೇಶವನ್ನು ಕಮ್ಯುನಿಸಂನಿಂದ ಹೊದಿಯಲು ಪ್ರಯತ್ನಿಸುತ್ತಿದೆ. ಧರ್ಮವಾದಿಗಳನ್ನು ದಮನಿಸುವ ತಂತ್ರ ಎಷ್ಟೇ ನಡೆದರೂ ಚೀನದಲ್ಲಿ ಅದನ್ನು ಪ್ರತಿರೋಧಿಸುವವರ ಸಂಖ್ಯೆಯು ಅಷ್ಟೇ ಇದೆ.