ಚೀನಾ ವಸ್ತುಗಳಿಗೆ ನಿಷೇಧ ಎನ್ನುತ್ತಲೇ 2022ರಲ್ಲಿ ದುಪ್ಪಟ್ಟು ವಸ್ತುಗಳನ್ನು ಆಮದು ಮಾಡಿಕೊಂಡ ಭಾರತ!

0
9

ಸನ್ಮಾರ್ಗ ವಾರ್ತೆ

ಚೀನಾದ ವಿರುದ್ಧ ಮಾತನಾಡುತ್ತಲೇ ಈ ವರ್ಷ ಚೀನಾದಿಂದ ಅತೀ ಹೆಚ್ಚು ಮೌಲ್ಯದ ವಸ್ತುಗಳನ್ನು ಭಾರತ ಆಮದು ಮಾಡಿಕೊಂಡಿದೆ. 2021ಕ್ಕೆ ಹೋಲಿಸಿದರೆ 2022ನೇ ಆರ್ಥಿಕ ವರ್ಷದಲ್ಲಿ ಆಮದು ಪ್ರಮಾಣ ಶೇ.45.51ರಷ್ಟು ಏರಿಕೆಯಾಗಿದೆ.

ಈ ವರ್ಷ ಚೀನಾದಿಂದ ಆಮದು ಮಾಡಿಕೊಂಡ ವಸ್ತುಗಳ ಮೌಲ್ಯ 7.02 ಟ್ರಿಲಿಯನ್ ರೂಪಾಯಿಗೆ ಏರಿಕೆಯಾಗಿದೆ ಎಂದು ವಾಣಿಜ್ಯ ಸಚಿವಾಲಯದ ಅಂಕಿಅಂಶಗಳು ತಿಳಿಸಿವೆ. ಕಳೆದ ವರ್ಷ ಭಾರತ ಚೀನಾದಿಂದ 4.82 ಟ್ರಿಲಿಯನ್ ಮೌಲ್ಯದ ಸರಕುಗಳನ್ನು ಆಮದು ಮಾಡಿಕೊಂಡಿತ್ತು.

ಚೀನಾದಿಂದ ಅತಿದೊಡ್ಡ ಆಮದುಗಳಲ್ಲಿ ಖನಿಜ ಇಂಧನಗಳು, ಖನಿಜ ತೈಲಗಳು, ರಾಸಾಯನಿಕಗಳು, ರಸಗೊಬ್ಬರ, ಪ್ಲಾಸ್ಟಿಕ್, ಕಬ್ಬಿಣ ಮತ್ತು ಉಕ್ಕು, ವಿದ್ಯುತ್ ಯಂತ್ರೋಪಕರಣಗಳು ಮತ್ತು ಉಪಕರಣಗಳು ಮತ್ತು ವೈದ್ಯಕೀಯ ಉಪಕರಣಗಳು ಸೇರಿವೆ.

ಚೀನಾದಿಂದ ಆಮದಿನ ಗಮನಾರ್ಹ ಹೆಚ್ಚಳದ ಕುರಿತು ಪ್ರತಿಕ್ರಿಯಿಸಿದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಫೈನಾನ್ಸ್ ಅಂಡ್ ಪಾಲಿಸಿ ಪ್ರೊಫೆಸರ್ ಲೇಖಾ ಎಸ್.ಚಕ್ರವರ್ತಿ,“ದ್ವಿಪಕ್ಷೀಯ ರಾಜಕೀಯ ಉದ್ವಿಗ್ನತೆಯ ನಡುವೆಯೂ ಚೀನಾದಿಂದ ಆಮದು ಶೇ.45ರಷ್ಟು ಏಕೆ ಹೆಚ್ಚಾಗಿದೆ ಎಂಬುದು ವಿಪರ್ಯಾಸ. ಚೀನಾದ ಮೇಲಿನ ಆಮದು ಅವಲಂಬನೆ ಹೆಚ್ಚಳ ಹಠಾತ್ ಬೆಳವಣಿಗೆಯಲ್ಲ. ಸಾಂಕ್ರಾಮಿಕ ಕಾಲದಲ್ಲಿ ಹೆಚ್ಚು ಆಮದು ಮಾಡಿಕೊಳ್ಳಲಾಗಿದೆ ಎಂದಿದ್ದಾರೆ.

ನಾವು ಚೀನಾದಿಂದ ಸಿದ್ಧಪಡಿಸಿದ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಿದ್ದರೆ, ಇದು ಕಳವಳಕ್ಕೆ ಕಾರಣವಾಗಬಹುದು ಎಂದು ಹಿರಿಯ ಅರ್ಥಶಾಸ್ತ್ರಜ್ಞ ಆಕಾಶ್ ಜಿಂದಾಲ್ ಹೇಳಿದ್ದಾರೆ.

LEAVE A REPLY

Please enter your comment!
Please enter your name here