ಕೊರೊನಾ: ಅಮೃತಾನಂದಮಯಿ ಆಶ್ರಮದಲ್ಲಿ ದರ್ಶನ ಸ್ಥಗಿತ

0
463

ಸನ್ಮಾರ್ಗ ವಾರ್ತೆ
ಕೊಲ್ಲಂ, ಮಾ. 6: ದೇಶದಲ್ಲಿ ಕೊರೊನಾ ಭಯ ಇದ್ದು ಇಂತಹ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಅಮೃತಾನಂದಮಯಿ ಆಶ್ರಮದಲ್ಲಿ ದರ್ಶನ ನಿಲ್ಲಿಸಲಾಗಿದೆ ಎಂದು ದಿ ಹಿಂದೂ ವರದಿ ಮಾಡಿದೆ. ಆರೋಗ್ಯ ಸಚಿವಾಲಯದ ನಿರ್ದೇಶನ ಬರುವವರೆಗೆ ದರ್ಶನ ನಿಲ್ಲಿಸಲು ತೀರ್ಮಾನಿಸಲಾಗಿದೆ. ಕೊಲ್ಲಂ ಮಠದಲ್ಲಿ ಒಂದು ದಿವಸ ಸುಮಾರು 3000 ಮಂದಿಗೆ ದರ್ಶನ ನೀಡಲಾಗುತ್ತಿತ್ತು. ಆರೋಗ್ಯ ಸಚಿವಾಲಯದ ಸೂಚನೆ ಮೇರೆಗೆ ದೇಶಿ ಮತ್ತು ವಿದೇಶಿ ಭಕ್ತರಿಗೆ ಮಠದಲ್ಲಿ ದರ್ಶನ ನೀಡುವುದು ಬೇಡ ಎಂದು ತೀರ್ಮಾನಿಸಲಾಗಿದೆ ಎಂದು ಮಠದ ನೋಟಿಸಿನಲ್ಲಿ ತಿಳಿಸಲಾಗಿದೆ ಎಂದು ದಿ ಹಿಂದು ವರದಿ ಮಾಡಿದೆ.

ಹಗಲು ಸಮಯದಲ್ಲಿ ನಿಷೇಧ ಮಾತ್ರವಲ್ಲ ರಾತ್ರೆ ವಾಸಕ್ಕೆ ನಿಷೇಧವಿದೆ. ಕಳೆದ ಬುಧವಾರದವರೆಗೆ ಮಠದೊಳಗೆ ಪ್ರವೇಶ ನಿಷೇಧ ಇರಲಿಲ್ಲ. ಜಿಲ್ಲಾಡಳಿತ ಮತ್ತು ಆರೋಗ್ಯ ಸಚಿವಾಲಯ ಆಶ್ರಮದ ಅಧಿಕಾರಿಗಳನ್ನು ಭೇಟಿಯಾಗಿ ವೈರಸ್ ಹರಡುವ ಸಾಧ್ಯಯಿದ್ದುದರಿಂದ ದರ್ಶನದಿಂದ ದೂರವಿರಬೇಕೆಂದು ಸೂಚಿಸಿತ್ತು. ಎಲ್ಲ ದಿವಸ ಬೆಳಗ್ಗೆ ಒಂಬತ್ತು ಗಂಟೆಯಿಂದ ಅಮ್ಮನ ದರ್ಶನ ಮಧ್ಯರಾತ್ರೆಯವರೆಗೆ ಮುಂದುವರಿಯುತ್ತಿತ್ತು.