ಸನ್ಮಾರ್ಗ ವಾರ್ತೆ
ದಿಲ್ಲಿ: ರೈತರ ಪ್ರತಿಭಟನೆ ನಡೆಯುತ್ತಿರುವ ದಿಲ್ಲಿಯ ಸಿಂಘು ಗಡಿಯಲ್ಲಿ ರೈತರ ಮೇಲೆ ಒಂದು ವಿಭಾಗ ಜನರು ದಾಂಧಲೆ ನಡೆಸಿದೆ. ರೈತರ ಹೋರಾಟ ಕೊನೆಗೊಳಿಸಬೇಕೆಂದು ಆಗ್ರಹಿಸಿ ಒಂದು ವಿಭಾಗ ಜನರು ಗುಂಪುಗೂಡಿ ಪ್ರತಿಭಟನಾ ಸ್ಥಳಕ್ಕೆ ನುಗ್ಗಿತ್ತು.
ಈ ಗುಂಪು ರೈತರ ಟೆಂಟ್ಗಳನ್ನು ಹರಿದು ಹಾಕಿದರು. ರೈತರ ಮೇಲೆ ಕಲ್ಲೆಸೆದರು. ಹಲ್ಲೆ ನಡೆಸಿದವರು ರೈತರಲ್ಲ ಭಯೋತ್ಪಾದಕರೆಂದು ಪ್ರತಿಭಟನಕಾರರು ಹೇಳುತ್ತಿದ್ದರು. ಈ ಗುಂಪು ಸ್ಥಳೀಯರದಲ್ಲ ಆರೆಸ್ಸೆಸ್ಸಿನ ಗುಂಪು ಎಂದು ರೈತರು ಆರೋಪಿಸಿದ್ದಾರೆ.
ಘರ್ಷಣೆ ತೀವ್ರಗೊಂಡಿರುವ ಸ್ಥಳಕ್ಕೆ ಆಗಮಿಸಿದ ಪೊಲೀಸರು ಲಾಠಿ ಚಾರ್ಜು ಮಾಡಿದ್ದಾರೆ. ಅಶ್ರುವಾಯು ಸಿಡಿಸಿದ್ದಾರೆ. ನಾವು ಸ್ಥಳೀಯರು ಎಂದು ಹೇಳಿಕೊಂಡು ಒಂದು ವಿಭಾಗ ಪ್ರತಿಭಟನ ಸ್ಥಳಕ್ಕೆ ಬಂದಿದ್ದರು. ನಂತರ ರೈತರ ವಿರುದ್ಧ ಘೋಷಣೆ ಕೂಗಿದರು. ಸ್ಥಳದಲ್ಲಿ ಭಾರೀ ಪೋಲೀಸ್ ಪಡೆಯನ್ನು ವಿನ್ಯಾಸಿಸಲಾಗಿದೆ. ಸಿಂಘು ಗಡಿಯಿಂದ ಘರ್ಷಣೆಯನ್ನು ವರದಿ ಮಾಡದಂತೆ ಪತ್ರಕರ್ತರಿಗೆ ಪೊಲೀಸರು ನಿಷೇಧ ಹೇರಿದ್ದಾರೆ. ದೃಶ್ಯಗಳನ್ನು ಸೆರೆ ಹಿಡಿಯದಂತೆ ಪೊಲೀಸರು ತಡೆದಿದ್ದಾರೆ.
#WATCH: Scuffle breaks out at Singhu border where farmers are protesting against #FarmLaws.
Group of people claiming to be locals have been protesting at the site demanding that the area be vacated. pic.twitter.com/XWBu9RlwLP
— ANI (@ANI) January 29, 2021












