ಸಿಂಘು ಗಡಿಯಲ್ಲಿ ರೈತರ ಮೇಲೆ ದಾಳಿ: ಅವರು ಸ್ಥಳೀಯರಲ್ಲ, ಗೂಂಡಾಗಳು; ಹೊರಗಿನಿಂದ ಕರೆತರಲಾಗಿತ್ತು: ಪ್ರಶಾಂತ್ ಭೂಷಣ್

0
721

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ರೈತರ ಪ್ರತಿಭಟನೆಯು ನಡೆಯುತ್ತಿರುವ ಸಿಂಘು ಗಡಿಯಲ್ಲಿ ರೈತರ ಮೇಲೆ ದಾಳಿ ನಡೆಸಿರುವುದು ಗೂಂಡಾಗಳೆಂದು ಹಿರಿಯ ವಕೀಲ ಪ್ರಶಾಂತ್ ಭೂಷಣ್ ಹೇಳಿದರು.

ಅವರು ಸ್ಥಳೀಯರಲ್ಲ, ಗೂಂಡಾಗಳು, ರೈತರ ಮೇಲೆ ಕಲ್ಲೆಸೆಯಲು ಸಿಂಘು ಗಡಿಗೆ ಕರೆತರಲಾಗಿತ್ತು ಎಂದು ಪ್ರಶಾಂತ್ ಭೂಷಣ್ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿ ವೀಡಿಯೊವನ್ನು ಅವರು ರಿಟ್ವೀಟ್ ಮಾಡಿದ್ದಾರೆ. ರೈತರ ಹೋರಾಟ ನಿಲ್ಲಿಸಬೇಕೆಂದು ಆಗ್ರಹಿಸಿ ಜನರ ಒಂದು ಗುಂಪು ಪ್ರತಿಭಟನೆಯ ಸ್ಥಳಕ್ಕೆ ಬಂದು ರೈತರ ಮೇಲೆ ಹಲ್ಲೆ ಮಾಡಿದೆ.

ಈ ತಂಡದಲ್ಲಿ ಸುಮಾರು 200 ಮಂದಿ ಮಾತ್ರ ಇದ್ದರು. ಅಲ್ಲಿ ನೆರೆದಿದ್ದ 3000 ಮಂದಿ ಪೊಲೀಸರು ನೋಡುತ್ತಿದ್ದಂತೆ ಗೂಂಡಾಗಳು ದಾಳಿ ನಡೆಸಿದ್ದಾರೆ. ಇವರನ್ನು ತಡೆಯಲು ಪೊಲೀಸರು ಯತ್ನಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಪ್ರತಿಭಟನೆ ಮಾಡುತ್ತಿರುವುದು ರೈತರಲ್ಲ, ಭಯೋತ್ಪಾದಕರೆಂದು ಘೋಷಣೆ ಕೂಗಿದ ದುಷ್ಕರ್ಮಿಗಳ ಗುಂಪು ರೈತರ ಮೇಲೆ ಹಲ್ಲೆ ನಡೆಸಿ ಬೆದರಿಕೆಯೊಡ್ಡಿತ್ತು.