24 ಗಂಟೆಗಳಲ್ಲಿ 9838 ಹೊಸ ಸೋಂಕಿತರು: ಈಗ ದೇಶದಲ್ಲಿ ಒಟ್ಟು 2,26,713 ಕೊರೋನ ಪ್ರಕರಣಗಳು

0
533

ಸನ್ಮಾರ್ಗ ವಾರ್ತೆ

ನವ ದೆಹಲಿ,ಜೂ.5: ದೇಶದಲ್ಲಿ ಕೊರೋನ ವೈರಸ್‌ ಸೋಂಕಿತರ ಸಂಖ್ಯೆಯು 2 ಲಕ್ಷ 26 ಸಾವಿರ 713 ಕ್ಕೆ ಏರಿದೆ. Covid19india.org ಮತ್ತು ರಾಜ್ಯ ಸರ್ಕಾರಗಳಿಂದ ಪಡೆದ ಮಾಹಿತಿಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ 9838 ಹೊಸ ಪ್ರಕರಣಗಳು ವರದಿಯಾಗಿವೆ. ಇದಕ್ಕೂ ಮುನ್ನ ಬುಧವಾರ 9638 ರೋಗಿಗಳು ಪತ್ತೆಯಾಗಿದ್ದವು. ರೋಗಿಗಳ ಸಂಖ್ಯೆ ಮಹಾರಾಷ್ಟ್ರದಲ್ಲಿ 77 ಸಾವಿರ, ತಮಿಳುನಾಡಿನಲ್ಲಿ 27 ಸಾವಿರ ಮತ್ತು ದೆಹಲಿಯಲ್ಲಿ 25 ಸಾವಿರಕ್ಕೆ ತಲುಪಿದೆ.

ಆರೋಗ್ಯ ಸಚಿವಾಲಯವು ಶುಕ್ರವಾರ ಬೆಳಿಗ್ಗೆ ಪ್ರತ್ಯೇಕ ಅಂಕಿಅಂಶಗಳನ್ನು ನೀಡಿತು. ಇದರ ಪ್ರಕಾರ, 24 ಗಂಟೆಗಳಲ್ಲಿ 9,851 ಪ್ರಕರಣಗಳು ವರದಿಯಾಗಿದ್ದು, 273 ಜನರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ದೇಶದಲ್ಲಿ ಈವರೆಗೆ 2 ಲಕ್ಷ 26 ಸಾವಿರ 770 ಪ್ರಕರಣಗಳು ವರದಿಯಾಗಿವೆ. ಈ ಪೈಕಿ 1 ಲಕ್ಷ 10 ಸಾವಿರದ 960 ಸಕ್ರಿಯ ಪ್ರಕರಣಗಳಿದ್ದು, 1 ಲಕ್ಷ 9 ಸಾವಿರದ 462 ಪ್ರಕರಣಗಳನ್ನು ಗುಣಪಡಿಸಲಾಗಿದೆ. ಅದೇ ಸಮಯದಲ್ಲಿ, ಒಟ್ಟು 6348 ಜನರು ಸಾವನ್ನಪ್ಪಿದ್ದಾರೆ ಎಂದಿದೆ.

 

 

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.