ಸಾರಿಗೆ ನೌಕರರ ವೇತನ ಬಿಡುಗಡೆಗೆ ವೆಲ್ಫೇರ್ ಪಾರ್ಟಿ ಆಗ್ರಹ

0
539

ಸನ್ಮಾರ್ಗ ವಾರ್ತೆ

ಬೆಂಗಳೂರು: ಕೆ‌.ಎಸ್.ಆರ್.ಟಿ.ಸಿ ಹಾಗೂ ವಾಯವ್ಯ ಮತ್ತು ಈಶಾನ್ಯ ರಸ್ತೆ ಸಾರಿಗೆ ನಿಗಮಗಳ ನೌಕರರಿಗೆ ಮೇ ತಿಂಗಳ ಮತ್ತು ಲಾಕ್‌ಡೌನ್ ಸಮಯದಲ್ಲಿನ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕು’ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಉಪಾಧ್ಯಕ್ಷ ಶ್ರೀಕಾಂತ್ ಸಾಲಿಯಾನ್ ಆಗ್ರಹಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿದವರು,ರಾಜ್ಯ ಸರಕಾರ ಲಾಕ್ ಡೌನ್ ಹೇರಿ ದುರ್ಬಲ ವರ್ಗಗಳಿಗೆ ಪರಿಹಾರಧನವನ್ನು ವಿತರಿಸುವುದು ದೂರದ ಮಾತು. ತನ್ನದೇ ಸರಕಾರದ ಅಧೀನದಲ್ಲಿರುವ ಸಾರಿಗೆ ನೌಕರರಿಗೆ ಸಂಬಳವನ್ನು ನೀಡದೆ ಶೋಷಣೆ ಮಾಡುತ್ತಿರುವುದು ನಿಜಕ್ಕೂ ಕಳವಳಕಾರಿ ಯಾದ ಸಂಗತಿ ಯಾಗಿದೆ. ಏಪ್ರಿಲ್ ನಲ್ಲಿ ನಡೆದ ಸಾರಿಗೆ ನೌಕರರ ಮುಷ್ಕರವನ್ನು ಮುಂದಿಟ್ಟುಕೊಂಡು ಈ ರೀತಿಯ ಸೇಡಿನ ಕ್ರಮವನ್ನು ಸರಕಾರ ಮಾಡಲು ಹೊರಟಿರುವುದು ನಿಜಕ್ಕೂ ಖೇದಕರ ಎಂದು ಟೀಕಿಸಿದ್ದಾರೆ.

ಸಾರಿಗೆ ಇಲಾಖೆಯ 1.25 ಲಕ್ಷ ನೌಕರರಿಗೆ ಕಳೆದ ಮೇ ತಿಂಗಳ ಮತ್ತು ಲಾಕ್‌ಡೌನ್ ಸಮಯದಲ್ಲಿನ ಸಂಬಳ ಇನ್ನು ನೀಡದೆ ಸತಾಯಿಸುತ್ತಿದೆ ಸರಕಾರದ ಈ ಧೋರಣೆಯಿಂದ ಲಕ್ಷಾಂತರ ನೌಕರರ ಕುಟುಂಬಗಳ ಒಪ್ಪತ್ತಿನ ಊಟಕ್ಕೂ ಸಂಚಕಾರ ತಂದಿದೆ ಎಂದು ಆಕ್ರೋಶ ಶ್ರೀಕಾಂತ್ ಸಾಲಿಯಾನ್ ವ್ಯಕ್ತಪಡಿಸಿದರು.