ಜಿದ್ದಾ: ಯಾಂಬು ಫ್ರೆಂಡ್ಸ್ ನಿಂದ ಅನಿವಾಸಿಗಳಿಗೆ ಈದ್ ಟ್ರೋಫಿ ಕ್ರಿಕೆಟ್ ಪಂದ್ಯಾಕೂಟ; ಬ್ಲಾಕ್ ಸ್ಟೋನ್ ತಂಡ ಚಾಂಪಿಯನ್

0
4844

ಸನ್ಮಾರ್ಗ ವಾರ್ತೆ

ಜಿದ್ದಾ: ಈದುಲ್ ಅಝ್ಹಾ ಹಬ್ಬದ ಪ್ರಯುಕ್ತ ಯಾಂಬು ಫ್ರೆಂಡ್ಸ್ ವತಿಯಿಂದ ಅಶ್ರಫ್ ಬಂಟ್ವಾಳ ಇವರ ನೇತೃತ್ವದಲ್ಲಿ ಕ್ರಿಕೆಟ್ ಪಂದ್ಯಾಕೂಟವು ಅಲ್ ಹಷ್ಮಿಯಾ ಕ್ರಿಡಾಂಗಣದಲ್ಲಿ ನಡೆಯಿತು. ಎಚ್ ಎಂ ಆರ್ ಇಂಜಿನಿಯರಿಂಗ್ ಹಾಗೂ ಮಜೀದ್ ಅಲ್ ಹರಬಿ ಇವರ ಮುಖ್ಯ ಪ್ರಾಯೋಜಕತ್ವ ಮತ್ತು ಝೂಮ್ ಟೆಕ್, ಬಿನ್ ಫಹದ್ ಇಂಜಿನಿಯರಿಂಗ್, ಐಕಾನ್ ಕ್ಯಾಂಪ್ ಹಾಗೂ ಕ್ಯಾಟರಿಂಗ್ ಸರ್ವಿಸ್, ಮಂಗಳೂರು ಚಾಲೆಂಜರ್ಸ್, ಬ್ಲಾಕ್ ಸ್ಟೋನ್, ನ್ಯೂ ಇಂಟಿಯೇಟಿವ್, ಅರಾಟ್ಕೊ, ಅಲ್ ಪಲಾಹ್, ಅಲ್ ಅಹ್ಮದಿ, ಇಂಡಿಯನ್ ಫೆಟರ್ನಿಟಿ ಫೋರಮ್ ಹಾಗೂ ಇಂಡಿಯನ್ ಸೋಷಿಯಲ್ ಫೋರಮ್ ಯಾಂಬು ಇವರ ಸಹಕಾರದೊಂದಿಗೆ ಕ್ರೀಡಾಕೂಟ ಬಹಳ ಯಶಸ್ವಿಯಾಗಿ ನೆರವೇರಿತು.

ಯಾಂಬೊದ ಪ್ರತಿಷ್ಠಿತ 12 ತಂಡಗಳು ಭಾಗವಹಿಸಿದ್ದ ಈ ಪಂದ್ಯಾಕೂಟದ ಫೈನಲ್ ಪಂದ್ಯದಲ್ಲಿ ಬ್ಲಾಕ್ ಸ್ಟೋನ್ ತಂಡವು ಅಲ್ ಕೊನಯಿನ್ ತಂಡವನ್ನು ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತು. ಬ್ಲಾಕ್ ಸ್ಟೋನ್ ತಂಡದ ಕಪ್ತಾನ ಸಯೀದ್ ಫೈನಲ್ ಪಂದ್ಯದ ಪಂದ್ಯ ಶ್ರೇಷ್ಠ ಪ್ರಶಸ್ತಿ ಜಯಿಸಿದರೆ ತಂಡದ ಇನ್ನೋರ್ವ ಆಟಗಾರ ಅನ್ಸಾರ್ ಬಲ್ಕುಂಜೆ ಉತ್ತಮ ಎಸೆತಗಾರ ಪ್ರಶಸ್ತಿ ತನ್ನದಾಗಿಸಿಕೊಂಡರು. ಕ್ರೀಡಾಕೂಟದ ಉದ್ದಕ್ಕೂ ಉತ್ತಮ ದಾಂಡುಗಾರಿಕೆ ನಡೆಸಿ ಕೊನಯಿನಿ ತಂಡವನ್ನ ಪ್ರಶಸ್ತಿ ಹಂತಕ್ಕೆ ಪ್ರವೇಶಿಸಲು ಪ್ರಮುಖ ಪಾತ್ರ ವಹಿಸಿದ ಅಲ್ತಾಫ್ ಉತ್ತಮ ದಾಂಡುಗಾರಿಕೆ ಪ್ರಶಸ್ತಿ ತನ್ನದಾಗಿಸಿಕೊಂಡರು.

ಪಂದ್ಯಾಕೂಟದ ಸಮಾರೋಪ ಸಮಾರಂಭದಲ್ಲಿ ನಝೀರ್ ಬಿನ್ ಫಹದ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ನಿಸಾರ್ ಉಪ್ಟಳ ನೆರವೇರಿಸಿ ಪ್ರವಾಸಿಯಾಗಿ ಇಲ್ಲಿ ನೆಲೆಸಿರುವ ಸಹೋದರರಿಗೆ ಮನರಂಜನೆ ನೀಡುವ ಉದ್ದೇಶದಿಂದ ಈ ಕ್ರೀಡಾಕೂಟವನ್ನು ಆಯೋಜಿಸಲಾಗಿದ್ದು, ಇಂತಹ ಮನೋರಂಜನೆಯ ಭಾಗವಾಗಿ ಇನ್ನೂ ಮುಂದಕ್ಕೆ ಉತ್ತಮ ಕ್ರಿಡಾಕೂಟ ಆಯೋಜಿಸುವುದಾಗಿ ತಿಳಿಸಿದರು.

ವೇದಿಕೆಯಲ್ಲಿ ಝೂಮ್ ಟೆಕ್ ಮಾಲಕ ಹಸನ್ ಉಪ್ಪಳ, ರಶೀದ್ ಬ್ಲಾಕ್ ಸ್ಟೋನ್ ಮೂಡಬಿದ್ರಿ, ಝಮೀರ್ ಕನ್ನಂಗಾರ್, ಸೂಜ ಹಾಗೂ ಲಬೀಬ್ ಉಜಿರೆ ಉಪಸ್ಥಿತರಿದ್ದರು. ರಕ್ತದಾನ ಬಗ್ಗೆ ಜನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬ್ಲಡ್ ಡೋನರ್ಸ್ ಮಂಗಳೂರು ಸಂಸ್ಥೆಯ ಲೋಗೊ ಅವಳವಡಿ ಜಾಗೃತಿ ಮೂಡಿಸಲಾಯಿತು. ಕಾರ್ಯಕ್ರಮನ್ನು ಹಫೀಝ್ ಇಸ್ಮಾಯಿಲ್ ನಿರೂಪಿಸಿ, ರೆಹಾನ್ ಗಂಜಿಮಠ ವಂದಿಸಿದರು.