ರೈತರ ಮಾರಣಹೋಮ: ಉ. ಪ್ರದೇಶ ಸರಕಾರದ ವಿರುದ್ಧ ಬಿಜೆಪಿ ಸಂಸದ ವರುಣ್ ಗಾಂಧಿ ಕಿಡಿ

0
1177

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಲಕೀಂಪುರ ರೈತರ ಮಾರಣಹೋಮದ ಬಳಿಕ ಉತ್ತರಪ್ರದೇಶ ಸರಕಾರದ ವಿರುದ್ಧ ಬಿಜೆಪಿ ಸಂಸದ ವರುಣ್ ಗಾಂಧಿ ಕಟು ಟೀಕೆ ಮಾಡಿದ್ದಾರೆ. ಕೊಲೆಯ ಹೊಣೆಯನ್ನು ವಹಿಸಿಕೊಂಡು ನ್ಯಾಯ ಲಭ್ಯಗೊಳಿಸಬೇಕೆಂದು ಅವರು ಆಗ್ರಹಿಸಿದರು.

ವೀಡಿಯೊದಲ್ಲಿ ಎಲ್ಲವೂ ಸ್ಪಷ್ಟವಾಗಿದೆ.ಕೊಲೆ ಮಾಡಿ ಪ್ರತಿಭಟನಾಕಾರರನ್ನು ಸ್ತಬ್ಧಗೊಳಿಸಲು ಸಾಧ್ಯವಿಲ್ಲ. ಕ್ರೌರ್ಯ, ಅಹಂಕಾರ ಪ್ರತಿಫಲಿಸುವ ದೃಶ್ಯಗಳು ಪ್ರತಿಯೊಬ್ಬ ರೈತನ ಮನಸ್ಸಿನಲ್ಲಿ ವ್ಯಾಪಿಸುವ ಮೊದಲು ನಿರಪರಾಧಿ ರೈತರ ರಕ್ತ ಸುರಿಸಿದ ಜವಾಬ್ದಾರಿ ಹೊತ್ತು ನ್ಯಾಯ ಕೊಡಬೇಕೆಂದು ವರುಣ್ ಗಾಂಧಿ ಟ್ವೀಟ್ ಮಾಡಿದರು. ಜೊತೆಗೆ ರೈತರ ಮೇಲೆ ಲಕೀಂಪುರದಲ್ಲಿ ಕೇಂದ್ರ ಸಚಿವರ ವಾಹನ ಹರಿಸುವ ದೃಶ್ಯವನ್ನು ಹಂಚಿಕೊಂಡಿದ್ದಾರೆ.