ದೇಶದಲ್ಲಿ 24 ಗಂಟೆಗಳಲ್ಲಿ 2.6 ಲಕ್ಷ ಮಂದಿಗೆ ಕೊರೋನ

0
520

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ದೇಶದಲ್ಲಿ 24 ಗಂಟೆಗಳಲ್ಲಿ 2,64,202 ಹೊಸ ಕೊರೋನ ಪ್ರಕರಣಗಳು ವರದಿಯಾಗಿವೆ. ಏಳು ತಿಂಗಳಲ್ಲೇ ಗರಿಷ್ಠ ಸಂಖ್ಯೆ ಇದಾಗಿದ್ದು ಪರೀಕ್ಷೆಯ ಪಾಸಿಟಿವಿಟಿ ದರ ಶೇ.14.7ರಷ್ಟು ಆಗಿದೆ. ರೋಗದಿಂದ ಗುಣಮುಖಗೊಳ್ಳುವ ದರ ಶೇ.95.2ಆಗಿದೆ. ದೇಶದಲ್ಲಿ ಕೊರೋನದಿಂದ ಸೇ. 12.7 ಲಕ್ಷ ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೇಶದಲ್ಲಿ ಒಟ್ಟು 5753 ಒಮಿಕ್ರಾನ್ ರೋಗಗಳು ದೃಢಪಟ್ಟಿವೆ.

ಅತ್ಯಂತ ಹೆಚ್ಚು ಕೊರೋನ ಪ್ರಕರಣಗಳು ಮಹಾರಾಷ್ಟ್ರದಲ್ಲಿ ದೃಢಪಟ್ಟಿವೆ. ಒಂದು ದಿವಸದಲ್ಲಿ ನಲ್ವತ್ತು ಸಾವಿರಕ್ಕೂ ಹೆಚ್ಚು ಮಂದಿಗೆ ಕೊರೋನ ದೃಢಪಟ್ಟಿದೆ. ದಿಲ್ಲಿಯ ಪ್ರಕರಣಗಳಲ್ಲಿ ಪ್ರತಿದಿನವೂ ಏರಿಕೆ ಕಂಡು ಬರುತ್ತಿದ್ದು ಇಂದು 28,000ಕ್ಕೂ ಹೆಚ್ಚು ಮಂದಿಗೆ ಕೊರೋನ ದೃಢೀಕರಿಸಲ್ಪಟ್ಟಿದ್ದು ಪಾಸಿಟಿವಿಟಿ ದರ ಶೇ. 28ಕ್ಕೆ ತಲುಪಿದೆ. ಪಶ್ಚಿಮ ಬಂಗಾಳದಲ್ಲಿ ಪಾಸಿಟಿವಿಟಿ ದರವು ಶೇ.32.13 ಆಗಿದೆ.

ಉತ್ತರಪ್ರದೇಶ, ಬಿಹಾರ, ಹರಿಯಾಣ, ಕೇರಳ ಮುಂತಾದ ರಾಜ್ಯಗಳಲ್ಲಿ ಕೊರೋನ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ರೋಗಿಗಳ ಸಂಖ್ಯೆ ಹೆಚ್ಚುತ್ತಿರುವಾಗಲೂ ರಾಷ್ಟ್ರೀಯ ಲಾಕ್‌ಡೌನ್ ಇಲ್ಲ ಎಂಬ ಸೂಚನೆಯನ್ನು ಪ್ರಧಾನಿ ನರೇಂದ್ರ ಮೋದಿ ನಿನ್ನೆ ಘೋಷಿಸಿದರು ಜನರಿಗೆ ತೊಂದರೆಯಾಗದಂತೆ ಕೊರೋನ ನಿಯಂತ್ರಣ ಹೇರಬೇಕೆಂದು ಅವರು ಆಗ್ರಹಿಸಿದರು.