ಕೈದಿಗಳ ಸಾಮೂಹಿಕ ಹತ್ಯಾಕಾಂಡ ಪ್ರಕರಣ: ಶ್ರೀಲಂಕದಲ್ಲಿ ಜೈಲು ಮುಖ್ಯಸ್ಥನಿಗೆ ಮರಣದಂಡನೆ

0
29

ಸನ್ಮಾರ್ಗ ವಾರ್ತೆ

ಕೊಲಂಬೊ: 2012ರಲ್ಲಿ ಕೊಲಂಬೊದ ವೆಲಿಕ್ಕಡ ಜೈಲಿನಲ್ಲಿ 27 ಕೈದಿಗಳನ್ನು ಸಾಮೂಹಿಕ ಹತ್ಯೆಗೈದ ಪ್ರಕರಣದಲ್ಲಿ ಉನ್ನತ ಜೈಲು ಅಧಿಕಾರಿಗೆ ಮರಣದಂಡನೆ ವಿಧಿಸಿ ತೀರ್ಪು ನೀಡಲಾಗಿದೆ. ಕೊಲಂಬೊ ಹೈಕೋರ್ಟ್ ಬುಧವಾರ ಜೈಲು ಕಮಿಷನರ್ ಎಮಿಲ್ ಲಮಾಹೆವಗೆ ಪ್ರಕರಣದಲ್ಲಿ ತಪ್ಪಿತಸ್ಥನೆಂದೂ ಅವರ ಅಪರಾಧ ಸಾಬೀತುಗೊಂಡಿದೆ ಎಂದು ತೀರ್ಪು ನೀಡಿತು. ಸಹ ಆರೋಪಿ ಪೊಲೀಸ್ ಕಮಾಂಡೊ ಮೊಸಸ್ ರಂಗಜೀವರನ್ನು ಖುಲಾಸೆಗೊಳಿಸಿತು.

2019ರಲ್ಲಿ ಇಬ್ಬರ ವಿರುದ್ಧ ಹತ್ಯಾರೋಪ ಹೊರಿಸಲಾಗಿತ್ತು. ಒಟ್ಟು 27 ಕೈದಿಗಳು ಗುಂಡಿಗೆ ಬಲಿಯಾಗಿದ್ದರು. ಎಂಟು ಮಂದಿಯ ವಿರುದ್ಧ ಮಾತ್ರ ಸಾಕ್ಷ್ಯವನ್ನು ಸಂಗ್ರಹಿಸಲಾಗಿತ್ತು. ಜೈಲಿನಲ್ಲಿ ನಡೆದ ಗಲಾಟೆಯನ್ನು ದಮನಿಸುವುದಕ್ಕೆ ಆಯುಧ ಇರುವ ಕೋಣೆಯಿಂದ ಆಯುಧ ತೆಗೆದುಕೊಂಡಿದ್ದಾರೆ ಎಂದು ಆರೋಪಿ ಕೈದಿಗಳನ್ನು ನಿರಾಯುಧರನ್ನಾಗಿ ಮಾಡಿ ಪೊಲೀಸ್ ಕಮಾಂಡೊಗಳನ್ನು ಉಪಯೋಗಿಸಿ ಕೊಲೆ ಮಾಡಲಾಗಿತ್ತು.

ಸ್ಟೇಟ್ ಪ್ರಾಸಿಕ್ಯೂಟರ್ ಹೇಳುವ ಪ್ರಕಾರ ಎಂಟು ಕೈದಿಗಳ ಹೆಸರೆತ್ತಿ ಕರೆದು ಹತ್ಯೆ ಮಾಡಲಾಗಿತ್ತು. ಇತರರು ಗುಂಡೇಟಿ ಬಿದ್ದು ಅಸುನೀಗಿದ್ದರು. ಕೋರ್ಟಿನ ದಾಖಲೆಗಳ ಪ್ರಕಾರ ಜೈಲ್ ಗಾರ್ಡ್ ಮೇಲೆ ಗುಂಡು ಹಾರಿಸಲು ಶ್ರಮಿಸಿದರೆಂದು ಬಿಂಬಿಸಲು ಆಯುಧಗಳನ್ನು ಉಪಯೋಗಿಸಲಾಗಿತ್ತು ಎಂದು ಹೇಳುತ್ತಿವೆ. ಆದರೆ ಕೊಲೆ ಮಾಡಲು ಆದೇಶಿಸಿದ್ದು ಎಂದು ಅವರು ಹೇಳಿಲ್ಲ. ಕೊಲೆಯಾದವರು ರಾಷ್ಟ್ರೀಯ ಮ್ಯೂಸಿಯಂ ದೇವಾಲಯಗಳಲ್ಲಿ ಕಳ್ಳತನ ಮಾಡಿ ಸಿಕ್ಕಿಬಿದ್ದವರಾಗಿದ್ದು ಘಟನೆಯ ಕುರಿತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖಂಡನೆಗೆ ಒಳಗಾಗಿತ್ತು.

LEAVE A REPLY

Please enter your comment!
Please enter your name here