12ನೇ ಮಹಡಿಯಿಂದ ಕೆಳಗೆ ಬಿದ್ದ 2 ವರ್ಷದ ಮಗುವನ್ನು ಕ್ಯಾಚ್ ಹಿಡಿದು ರಕ್ಷಿಸಿದ ಡೆಲಿವರಿ ಬಾಯ್: ವಿಡಿಯೋ ವೈರಲ್

0
2643

ಸನ್ಮಾರ್ಗ ವಾರ್ತೆ

ವಿಯೆಟ್ನಾಂ: ಹನ್ನೆರಡನೆ ಮಹಡಿಯಿಂದ ಕೆಳಗೆ ಬಿದ್ದ ಎರಡು ವರ್ಷದ ಹೆಣ್ಣು ಮಗುವನ್ನು ಸುರಕ್ಷಿತ ಬಾಹುಗಳಲ್ಲಿ ರಕ್ಷಿಸಿ ವಿಯೆಟ್ನಾಂನ ಡೆಲಿವರಿ ಬಾಯ್ ಒಬ್ಬ ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಹೀರೋ ಆಗಿದ್ದಾನೆ.
ಹನ್ನೆರಡನೆ ಮಹಡಿಯಿಂದ ಕೆಳಗೆ ಬಿದ್ದ ಎರಡು ವರ್ಷದ ಹೆಣ್ಣು ಮಗುವನ್ನು ರಕ್ಷಿಸಿದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಡೆಲಿವರಿ ಬಾಯ್ ಹೂಯೆರ್ ಹೊಂಗ್‍ಮಾನ್‍ರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ.

ಕಳೆದ ರವಿವಾರ ವಿಯೆಟ್ನಾಂ ನಗರ ಹನೊಯಿಯ ಒಂದು ಫ್ಲಾಟ್ ನ ಮುಂದೆ ಡೆಲಿವರಿ ಬಾಯ್ ಹಾಂಗ್‍ಮಾನ್ ಡೆಲಿವರಿಗೆಂದು ಬಂದಿದ್ದರು. ಡೆಲಿವರಿ ಟ್ರಕ್‍ನಲ್ಲಿ ಕಾದಿರುವಾಗ ಹನ್ನೆರಡನೆ ಮಾಳಿಗೆಯ ಬಾಲ್ಕನಿಯಲ್ಲಿ ಒಂದು ಮಗು ಒಂದೇ ಕೈಯಲ್ಲಿ ತೂಗಾಡುತ್ತಿರುವುದು ಕಂಡು ಬಂತು. ಮಗುವಿನ ತಾಯಿ ಮಗುವನ್ನು ರಕ್ಷಿಸಲು ಬೊಬ್ಬೆ ಹೊಡೆಯುತ್ತಿದ್ದರು.
ಮಗು ಕೈಬಿಟ್ಟದ್ದು ಕೆಳಗೆ ಬಿದ್ದದ್ದು ನೊಡಿ ಹಾಂಗ್‍ಮಾನ್ ಏನನ್ನೂ ಯೋಚಿಸದೆ ಓಡಿ ಬಂದು ಮಗುವನ್ನು ಕೈಯಲ್ಲಿ ಕ್ಯಾಚ್ ಹಿಡಿದೇ ಬಿಟ್ಟರು. ಅದೃಷ್ಟಕ್ಕೆ ಮಗುವಿಗೆ ದೊಡ್ಡ ಗಾಯಗಳಾಗಿಲ್ಲ. ಸುರಕ್ಷಿತ ಬಾಹುಗಳಲ್ಲಿ ಹಿಡಿಯುವ ಮೂಲಕ ಹಾಂಗ್‍ಮಾನ್‍ ಮಗುವಿನ ಜೀವ ಕಾಪಾಡಿದ್ದಾನೆ. ಮಗು ಬೀಳುತ್ತಿರುವ ವಿಡಿಯೋವನ್ನು ಹತ್ತಿರದ ಕಟ್ಟಡದವರು ಸೆರೆ ಹಿಡಿದಿದ್ದು, ರಕ್ಷಿಸುವ ವಿಡಿಯೋ ಸಿಸಿಟಿವಿಯಲ್ಲಿ ದಾಖಲಾಗಿದೆ.

ಒಂದು ಜೀವ ಉಳಿಸಿದ ಸುಂದರ ದೃಶ್ಯಗಳನ್ನು ನಾವು ಕಂಡೆವು ಎಂದು ಟ್ವಿಟರ್‍ನಲ್ಲಿ ಹಲವು ಮಂದಿ ಕಮೆಂಟ್ ಮಾಡಿದ್ದಾರೆ. ಹೆದರಿಕೆ ಹುಟ್ಟಿಸುವ ದೃಶ್ಯವಾದರೂ ರಕ್ಷಕನಿಗೆ ಸೆಲ್ಯೂಟ್ ಮಾಡುತ್ತೇವೆ ಎಂದು ದೃಶ್ಯ ನೋಡಿದ ಜನರು ಹೇಳಿದ್ದಾರೆ. ಇದೇ ವೇಳೆ, ಮಕ್ಕಳ ವಿಷಯದಲ್ಲಿ ಮನೆಯವರು ಹೆಚ್ಚಿನ ಗಮನ ಇರಿಸಬೇಕೆಂದು ಕೆಲವರು ಹೇಳಿದ್ದಾರೆ.