ಸನ್ಮಾರ್ಗ ವಾರ್ತೆ
ಹೊಸದಿಲ್ಲಿ : ಸ್ವತಂತ್ರ ದೇಶ ಎಂಬ ಸ್ಥಾನದಿಂದ ಭಾರತ ಹಿಂದೆ ಸರಿದಿದೆ ಎಂದು ಅಮೆರಿಕದ ಮಾನವ ಹಕ್ಕು ಸಂಘಟನೆ ಫ್ರೀಡಂ ಹೌಸ್ ವರದಿ ವಿವರಿಸಿದೆ. ಸ್ವತಂತ್ರ ದೇಶವಾಗಿದ್ದ ಭಾರತದಲ್ಲಿ ಆಂಶಿಕ ಸ್ವಾತಂತ್ರ್ಯ ಇರುವ ದೇಶದ ಸಾಲಿಗೆ ಕುಸಿದಿದೆ ಎಂದ ಫ್ರೀಡಂ ಹೌಸ್ ವಾರ್ಷಿಕ ವರದಿಯಲ್ಲಿ ಬೊಟ್ಟು ಮಾಡಿದೆ.
ನರೇಂದ್ರ ಮೋದಿಯ ಭಾರ ಸರ್ವಾಧಿಕಾರದೆಡೆಗೆ ಹೋಗುತ್ತಿದೆ ಎಂದು ಅದು ಆರೋಪಿಸಿದೆ. ಮೋದಿ ಸರಕಾರ ಬಂದ ಮೇಲೆ ರಾಜಕೀಯ ಹಕ್ಕುಗಳೂ, ಪೌರ ಸ್ವಾತಂತ್ರ್ಯದ ಕುಸಿತವಾಗಿದೆ. ಮಾನವಹಕ್ಕು ಸಂಘಟನೆಗಳ ಮೇಲೆ ಭಾರೀ ಒತ್ತಡ ಹೇರಲಾಗುತ್ತಿದೆ. ಅಕಾಡಮೇಶ್ಯನ್ಗಳನ್ನು ಮತ್ತು ಪತ್ರಕರ್ತರನ್ನು ಬೆದರಿಸಲಾಗುತ್ತಿದೆ. ಮುಸ್ಲಿಮರನ್ನು ಗುರಿಯಾಗಿಟ್ಟು ಜನರ ಗುಂಪಿನಿಂದ ಕೊಲೆ ಕೃತ್ಯಗಳು ನಡೆಯುತ್ತಿದೆ ಎಂದು ಫ್ರೀಡಂ ಹೌಸ್ ವರದಿ ಹೇಳುತ್ತದೆ.
2019ರಲ್ಲಿ ಮೋದಿ ಪುನಃ ಅಧಿಕಾರಕ್ಕೆ ಬಂದ ನಂತರ ಇಂತಹ ಸರ್ವಾಧಿಕಾರಿ ಪ್ರವೃತ್ತಿಯಲ್ಲಿ ಹೆಚ್ಚಳವಾಗಿದ್ದು, ಸಿಎಎ ವಿರೋಧಿ ಪ್ರತಿಭಟನೆಯನ್ನು ವರದಿಯಲ್ಲಿ ಬೊಟ್ಟು ಮಾಡಲಾಗಿದೆ. ನ್ಯಾಯಾಂಗದ ಕಾರ್ಯ ನಿರ್ವಹಣೆಗೆ ಇದು ಬಾಧಿಸುತ್ತಿದೆ ಎಂದು ವರದಿ ತಿಳಿಸಿದೆ.
ಉಕ್ಕಿನ ಮುಷ್ಠಿಯಲ್ಲಿ ಕೊರೊನ ಮಹಾಮಾರಿಯ ವಿರುದ್ಧ ಲಾಕ್ಡೌನ್ ಘೋಷಣೆಯಾಗಿತ್ತು. ಲಕ್ಷಾಂತರ ವಲಸೆ ಕಾರ್ಮಿಕರಿಗೆ ಇದು ಅಪಾಯಕಾರಿಯಾಗಿ ಬಾಧಿಸಿತು. ಕೊರೊನ ಹರಡುವ ನೆಪದಲ್ಲಿ ಮುಸ್ಲಿಮರನ್ನು ದೂಷಿಸಲಾಯಿತು. ಅವರ ವಿರುದ್ಧ ಜನರ ಗುಂಪಿನ ದಾಳಿಯವರೆಗೂ ನಡೆಯಿತು. ಎಂದು ಡೆಮಾಕ್ರಸಿ ಅಂಡರ್ ಸೀಜ್ ಎಂಬ ತಲೆಬರಹದಲ್ಲಿ ಪ್ರಕಟವಾದ ವರದಿಯಲ್ಲಿದೆ.
ಲವ್ ಜಿಹಾದ್ ಅನ್ನು ಕೂಡ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ. ವಿವಾದಿತ ಲವ್ ಜಿಹಾದ್ ಕಾನೂನಿನ ಅಡಿಯಲ್ಲಿ ಮುಸ್ಲಿಂ ಯುವಕರನ್ನು ಬಂಧಿಸಲಾಗುತ್ತಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.












