ಫೆಲೆಸ್ತೀನಿಯರ ಜನಾಂಗ ಹತ್ಯೆಗೆ ಮೈಕ್ರೋಸಾಫ್ಟ್ ನೆರವು: ಪ್ರತಿಭಟಿಸಿದ ಮಾಜಿ ಉದ್ಯೋಗಿ ವಾನಿಯ

0
432

ಸನ್ಮಾರ್ಗ ವಾರ್ತೆ

ಗಾಝಾದ ಮೇಲೆ ಇಸ್ರೇಲ್‌ನ ಕ್ರೌರ್ಯವನ್ನು ಬೆಂಬಲಿಸುತ್ತಿದೆ ಎಂದು ಹೇಳಿ ಮೈಕ್ರೋಸಾಫ್ಟ್‌ನ ವಿರುದ್ಧ ಮಾಜಿ ಉದ್ಯೋಗಿ ಪ್ರತಿಭಟನೆ ನಡೆಸಿದ್ದಾರೆ. ಮೈಕ್ರೋಸಾಫ್ಟ್ 50ನೇ ವಾರ್ಷಿಕ ಕಾರ್ಯಕ್ರಮದಲ್ಲಿ ಈ ಮಾಜಿ ಉದ್ಯೋಗಿ ಫೆಲಸ್ತೀನ್ ಪರ ಮಾತಾಡಿದ್ದಾರೆ. ಮೈಕ್ರೋಸಾಫ್ಟ್‌ನ ಸಿ ಇ ಓ ಸತ್ಯ ನಾದೆಲ್ಲ, ಮಾಜಿ ಸಿಇಒಗಳಾದ ಬಿಲ್ ಗೇಟ್ಸ್, ಸ್ಟೀವ್ ಬಾಲ್ ಮರ್ ಮುಂತಾದವರ ವಿರುದ್ಧ ಆರೋಪವನ್ನು ವ್ಯಕ್ತಪಡಿಸಿದ್ದಾರೆ.

ಗಾಝಾದಲ್ಲಿ ಜನಾಂಗ ಹತ್ಯೆ ನಡೆಸುವುದಕ್ಕೆ ಮೈಕ್ರೋಸಾಫ್ಟ್ ನ ತಂತ್ರಜ್ಞಾನವನ್ನು ಇಸ್ರೇಲ್ ಬಳಸಿಕೊಂಡಿದೆ ಎಂದು ಮೈಕ್ರೋಸಾಫ್ಟ್‌ನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದ ವಾನಿಯ ಅಗರ್ವಾಲ್ ಆರೋಪಿಸಿದ್ದಾರೆ. ಗಾಝಾದಲ್ಲಿ 50,000 ಕ್ಕಿಂತಲೂ ಅಧಿಕ ಮಂದಿಯನ್ನು ಕೊಂದಿರುವುದಕ್ಕೆ ಮೈಕ್ರೋಸಾಫ್ಟ್‌ನ ತಂತ್ರಜ್ಞಾನಗಳು ನೆರವಾಗಿವೆ. ನೀವೆಂತಾ ಮನುಷ್ಯರು? ಫೆಲಸ್ತೀಯರ ರಕ್ತವನ್ನು ಸಂಭ್ರಮಿಸುತ್ತಿರುವ ನಿಮಗೆ ನಾಚಿಕೆಯಾಗುವುದಿಲ್ಲವೇ ಎಂದವರು ಮೈಕ್ರೋಸಾಫ್ಟ್ ಸಿಇಒ ಅವರನ್ನು ಉದ್ದೇಶಿಸಿ ಪ್ರಶ್ನಿಸಿದ್ದಾರೆ. ಮಾತ್ರ ಅಲ್ಲ ಇಸ್ರೇಲ್ ಜೊತೆಗಿನ ಸಂಬಂಧವನ್ನು ಮೈಕ್ರೋಸಾಫ್ಟ್ ಕಡಿದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಇದೇ ಸಂದರ್ಭದಲ್ಲಿ ಅವರನ್ನು ಸೆಕ್ಯೂರಿಟಿ ಗಾರ್ಡುಗಳು ಸಭೆಯಿಂದ ಹೊರಗೆ ಕೊಂಡೊಯ್ದರು. ಆ ಬಳಿಕ ಪ್ಯಾನೆಲ್ ಚರ್ಚೆ ಆರಂಭವಾದರೂ ಈ ಪ್ರತಿಭಟನೆಯ ಬಗ್ಗೆ ಸಿಇಒಗಳು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

ಇಸ್ರೇಲ್‌ನ ರಕ್ಷಣಾ ಸಚಿವಾಲಯದೊಂದಿಗೆ ಮೈಕ್ರೋಸಾಫ್ಟ್ 133 ಮಿಲಿಯನ್ ಡಾಲರ್ ನ ಒಪ್ಪಂದಕ್ಕೆ ಸಹಿ ಹಾಕಿತ್ತು ಮಾತ್ರ ಅಲ್ಲ ಫೆಲೆಸ್ತೀನ್ ವಿರುದ್ಧದ ಇಸ್ರೇಲ್ ಹೋರಾಟಕ್ಕೆ ತನ್ನ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದ ಮೂಲಕ ನೆರವನ್ನು ನೀಡಿತ್ತು.