ಮಾತಾಪಿತರು ಮಾಡುವ ಹನ್ನೊಂದು ತಪ್ಪುಗಳು

0
340

✍️ ಜಾಸಿಮುಲ್ ಮುತವ್ವ

ಮಕ್ಕಳನ್ನು ಪೋಷಣೆ ಒಂದು ಕಲೆ. ನಾವು ನಮ್ಮ ಮಕ್ಕಳನ್ನು ಪರಂಪರಾಗತ ರೀತಿಯಲ್ಲಿ ಬೆಳೆಸುತ್ತಿದ್ದೇವೆ. ಮುಂಗೋಪಿ ಸುತ್ತೇವೆ. ಆಕ್ರೋಶ ವ್ಯಕ್ತಪಡಿಸುತ್ತೇವೆ. ತಂದೆ-ತಾಯಂದಿರ ತಪ್ಪು ಧೋರಣೆಗಳಿಂದಾಗಿ ಮಕ್ಕಳ ಭವಿಷ್ಯವು ಹಾಳಾದ ಬಗ್ಗೆಯೂ ವಿವರ ನನ್ನಲ್ಲಿದೆ. ಮಕ್ಕಳನ್ನು ಪರಿಪಾಲಿಸುವ ಕಲೆ ಎಂದರೆ ಶಿಸ್ತುಬದ್ಧವಾಗಿ ಮೌಲ್ಯಯುತ ಸಿದ್ಧಾಂತಗಳನ್ನು ಆಧಾರವಾಗಿರಿಸಿ ನಾವು ತರಬೇತಿಗೊಂಡು ಗಳಿಸಬೇಕಾದ ಜ್ಞಾನವಾಗಿದೆ.

ಆತ್ಮಸಂಸ್ಕರಣೆಗೆ ಅನುಗುಣವಾದ ರೀತಿ ನೀತಿಗಳನ್ನು ವಿವರಿಸಿದ ಕುರ್‌ಆನ್ ಸೂಕ್ತಗಳು ಈ ತರಬೇತಿಗಾಗಿದೆ. ಹಾಗೆಯೇ ಪ್ರವಾದಿ ಚರಿತ್ರೆಯು ಸಮಸ್ಯೆಗಳ ಪರಿಹಾರಕ್ಕೆ ಬೇಕಾದ ಪ್ರಾಯೋಗಿಕವಾದ ಶಿಕ್ಷಣವನ್ನು ಕಲಿಸುತ್ತದೆ. ಬದುಕಿನ ಅನುಭವಗಳಿಂದಲೂ ಹಲವು ಪಾಠಗಳು ಲಭ್ಯವಾಗುತ್ತವೆ. ಆದರೆ ನಾವು ಇವೆಲ್ಲದರ ಬಗ್ಗೆ ನಿರ್ಲಕ್ಷ್ಯ ತಾಳಿ ನಮ್ಮ ತಿಳುವಳಿಕೆಗೆ ಅನುಗುಣವಾಗಿ ಮತ್ತು ಅಭ್ಯಾಸದ ಚಟುವಟಿಕೆಗಳನ್ನು ಮುಂದುವರಿಸುತ್ತಿದ್ದೇವೆ. ಇದು ಖೇದಕರ. ಮಾತಾಪಿತರಲ್ಲಿ ಘಟಿಸುವಂತಹ ಹನ್ನೊಂದು ಪ್ರಮಾದಗಳ ಬಗ್ಗೆ ನಾನು ಇಲ್ಲಿ ವಿವರಿಸುತ್ತೇನೆ.

ಬ್ಯಾಂಕುಗಳಲ್ಲಿಟ್ಟಿರುವ ಸಿಸಿ ಕ್ಯಾಮೆರಾದಂತೆ ದಿನದ ಇಪ್ಪತ್ತನಾಲ್ಕು ಗಂಟೆಗಳ ಕಾಲವೂ ಮಕ್ಕಳ ಬಗ್ಗೆ ಸೂಕ್ಷ್ಮವಾಗಿ ನಿಗಾ ಇಡಬಾರದು. ಮಕ್ಕಳ ಪ್ರತಿಯೊಂದು ಚಲನವಲನವನ್ನೂ ನಾವು ದಿನವೂ ದಾಖಲಿಸಿಡ ಬಾರದು. ಇದು ಹಲವು ಕೆಟ್ಟ ಫಲಗಳಿಗೆ ಕಾರಣವಾಗುತ್ತದೆ. ಆತ್ಮವಿಶ್ವಾಸದ ಕೊರತೆ, ಅನಾದರ, ಆದೇಶಗಳನ್ನು ಪಾಲಿಸುವುದರಲ್ಲಿ ಕಳ್ಳಾಟ ಮುಂತಾದ ಗುಣಗಳು ಮಕ್ಕಳಲ್ಲಿ ಬೆಳೆದು ಬರುವುದು. ಮಕ್ಕಳನ್ನು ಅವರಷ್ಟಕ್ಕೆ ಸ್ವಲ್ಪ ಬಿಟ್ಟು ಸ್ವಲ್ಪ ನಿಗಾ ಇಡಬೇಕು. ಅಥವಾ ದೂರ ನಿಂತು ಅವರ ಬದುಕಿನ ರೀತಿ ನೀತಿಗಳ ಬಗ್ಗೆ ಒಂದು ನಿಲುವು ತಾಳಬೇಕು.

ಮಕ್ಕಳ ಆಹಾರ, ಬಟ್ಟೆ ಬರೆಗಳ ಆಯ್ಕೆ, ಆಟ ಮನರಂಜನೆ, ಅಭಿರುಚಿ, ಹವ್ಯಾಸ ಮುಂತಾದ ಎಲ್ಲಾ ವಿಚಾರಗಳ ಬಗ್ಗೆಯೂ ಮಧ್ಯೆ ಪ್ರವೇಶಿಸುವುದು. ಇದರಿಂದ ಮಕ್ಕಳಲ್ಲಿ ಚಂಚಲತೆಯ ವ್ಯಕ್ತಿತ್ವ ಸೃಷ್ಟಿಯಾಗುವುದು. ಯಾವುದೇ ಒಂದು ನಿರ್ಧಾರ ತಾಳಲು ಅವರು ಅಸಮರ್ಥರಾಗುವರು. ಕೆಲ ಸಣ್ಣ ಪುಟ್ಟ ಸಲಹೆಗಳೊಂದಿಗೆ ಅವರಿಗೆ ಸ್ಪಷ್ಟವಾದ ತೀರ್ಮಾನ ಕೈಗೊಳ್ಳಲು ಅವಕಾಶ ನೀಡುವುದು ಸರಿಯಾದ ರೀತಿಯಾಗಿದೆ.

ಏಕೈಕ ಪುತ್ರ ಅಥವಾ ಪುತ್ರಿ ಜನ್ಮಜಾತ ರೋಗ ಅಥವಾ ಅಂಗವಿಕಲತೆಗೆ ಒಳಗಾಗಿದ್ದರೆ ಅಂತಹ ಮಕ್ಕಳ ಬಗ್ಗೆ ವಿಪರೀತ ಗಮನ ಹರಿಸುವುದು. ಇದು ಮಕ್ಕಳಲ್ಲಿ ಹಠಮಾರಿತನ ಹಾಗೂ ತಂದೆ ತಾಯಂದಿರ ಆದೇಶಗಳ ಬಗ್ಗೆ ಧಿಕ್ಕಾರದ ಮನೋಭಾವ ಉದ್ಭವಿಸಲು ಕಾರಣ ವಾಗುವುದು. ಜೊತೆಗೆ ಮಕ್ಕಳಲ್ಲಿ ಅಹಂಕಾರ ಮತ್ತು ಆತ್ಮವಂಚನೆಯಂತಹ ದುರ್ಗುಣಗಳು ಬೆಳೆಯುವುದು.

ಮಕ್ಕಳ ಮೇಲೆ ಆರಾಧನಾ ಕರ್ಮಗಳ ಬಗ್ಗೆ ತೀವ್ರ ಒತ್ತಡ ಹೇರುವುದು. ಆ ಬಗ್ಗೆ ಅವರಲ್ಲಿ ಕಠಿಣ ನಿಲುವು ತಾಳುವುದು. ಈ ಧೋರಣೆಗಳು ಅವರಲ್ಲಿ ಧರ್ಮದ ಬಗ್ಗೆ ಅನಾಸಕ್ತಿ ಹುಟ್ಟಲು ಕಾರಣವಾಗುತ್ತದೆ. ಫಜ್ರ್ ನಮಾಝ್‌ಗೆ ಆರು ವರ್ಷದ ಮಗನನ್ನು ಹೊಡೆದು ಎಬ್ಬಿಸುವ ತಂದೆಯ ಬಗ್ಗೆ ನನಗೆ ಗೊತ್ತು. ಇಂತಹ ರೀತಿಯಿಂದ ಮಗು ಮಾತಾಪಿತರ ಮುಂದೆ ಮಾತ್ರ ನಮಾಝ್ ನಿರ್ವಹಿಸುತ್ತದೆ. ಧರ್ಮದ ಬಗ್ಗೆ ಮಕ್ಕಳಲ್ಲಿ ಅನುರಾಗ ಹುಟ್ಟಿಸುವಂತೆ ಮಾಡಿರಿ. ಇದು ರೂಢಿಸಿಕೊಳ್ಳಬೇಕಾದ ಕಲೆಯಾಗಿದೆ.

ಮಕ್ಕಳಿಂದ ತಪ್ಪು ಸಂಭವಿಸಿದೆ ಎಂದು ಅರಿತ ಕೂಡಲೇ ಹಿಂದೆ ಮುಂದೆ ನೋಡದೆ ಸಿಡುಕುವುದು. ತಕ್ಷಣ ವಿಚಾರಣೆ, ಆರೋಪ, ಶಿಕ್ಷೆಗೆ ಮುಂದಾಗುವುದು. ಆ ನಂತರ ನಮ್ಮಿಂದ ತಪ್ಪಾಗಿದೆ ಎಂಬುದು ಅರಿವಿಗೆ ಬರುತ್ತದೆ. ಇದು ಮಕ್ಕಳ ಮನದಲ್ಲಿ ತಂದೆ ತಾಯಂದಿರ ಬಗ್ಗೆ ದ್ವೇಷ, ಅಸಹನೆ ಉದ್ಭವಿಸಲು ಕಾರಣವಾಗುವುದು. ಕ್ರಮೇಣ ಸಂಬAಧದಲ್ಲಿ ಬಿರುಕು ಉಂಟಾಗುವುದು.

ಮಕ್ಕಳಲ್ಲಿರುವ ಸಂಶೋಧನಾ ಗುಣ, ಹೊಸದನ್ನು ಕಂಡುಹಿಡಿಯುವ ಉತ್ಸಾಹಕ್ಕೆ ತಣ್ಣೀರೆರಚುವಂತೆ ದಮನಿ ಸುವುದು. ಒಂದು ಹೊಸ ಬಗೆಯ ವೈವಿಧ್ಯತೆಯ ಏನನ್ನಾದರೂ ತಯಾರಿಸುವ ಸಿದ್ಧತೆಯಲ್ಲಿರುವಾಗ ಅವರನ್ನು ಹೊಡೆದೋಡಿಸಿದ ಮಾತೆಯೂ ಇದ್ದಾರೆ. ತಾಯಿಯಾದವಳು ಮಕ್ಕಳೊಂದಿಗೆ ಪ್ರೀತಿಯಿಂದ ಮಾತನಾಡಿ ಅವರನ್ನು ಪ್ರೋತ್ಸಾಹಿಸಬೇಕು.

ನಮ್ಮ ಬಾಲ್ಯ ಕಾಲದಲ್ಲಿ ಸಾಧಿಸಲಾಗದ್ದನ್ನು ಮಕ್ಕಳ ಮೂಲಕ ಸಾಕ್ಷಾತ್ಕರಿಸಲು ನೋಡುವ ಮಾತಾಪಿತರು ಇದ್ದಾರೆ. ಮಕ್ಕಳ ಅಭಿರುಚಿಗೆ ಅನುಗುಣವಾಗಿ ನಮ್ಮ ಆಶಯವನ್ನು ಹೊಂದಿಸಬೇಕೆಂಬ ಚಿಂತೆಯೇ ಇರುವುದಿಲ್ಲ. ಇಂಗ್ಲಿಷ್ ಭಾಷೆ ಅರಿಯದ ಓರ್ವ ಮಾತೆ ತನ್ನ ಮಕ್ಕಳಿಗೆ ಆ ಭಾಷೆ ಕಲಿಯಲು ಒತ್ತಡ ಹೇರುವ ಮೂಲಕ ತನ್ನ ಬಯಕೆ ಈಡೇರಿಸುತ್ತಾರೆ. ಇಂದು ಆ ಮಾತೆ ವಿಷಾದಿಸುತ್ತಿದ್ದಾರೆ. ಮಕ್ಕಳಿಗೆ ಅರಬಿ ಓದಲು ಬರುವುದಿಲ್ಲ, ಕುರ್‌ಆನ್ ಓದಲೂ ತಿಳಿಯದು. ಅಷ್ಟೇ ಅಲ್ಲ, ಕುರ್‌ಆನ್ ಕಂಠ ಪಾಠ ಮಾಡಲು ಸಾಧ್ಯವಾಗದಿದ್ದ ತಂದೆಯೋರ್ವರು ಮಕ್ಕಳು ಕುರ್‌ಆನ್ ಕಂಠಪಾಠ ಮಾಡಿ ಕೇಳಿಸಬೇಕೆಂದು ಒತ್ತಡ ಹಾಕುತ್ತಿದ್ದರು. ಆ ತಂದೆಯು ಮಕ್ಕಳಿಗೆ ಕಂಠ ಪಾಠ ಮಾಡಲು ಇರಬೇಕಾದ ಸಾಮರ್ಥ್ಯದ ಬಗ್ಗೆ ಅರಿಯಲೇ ಇಲ್ಲ. ನಂತರ ಮಕ್ಕಳಲ್ಲಿ ಧರ್ಮದ ಬಗ್ಗೆಯೇ ಅಸಹನೆ ಹುಟ್ಟಿತು.

ಮಕ್ಕಳ ಸುತ್ತಲೂ ಬೇಲಿ ಹಾಕಿ ಸಂರಕ್ಷಿಸುವಂತಹ ರೀತಿಯು ಪಕ್ವತೆಯಿಲ್ಲದ, ಎಲ್ಲದಕ್ಕೂ ಹೆದರುತ್ತಾ ಅನು ಮಾನದಿಂದ ನೋಡುತ್ತಾ ಇರುವ ಸಂತತಿಯನ್ನಷ್ಟೇ ಸೃಷ್ಟಿಸಬಹುದು. ಮಕ್ಕಳಿಗೆ ಯಾವುದೇ ಗುರಿ, ವ್ಯಾಮೋಹ ಇರುವುದಿಲ್ಲ. ಯಾವುದೇ ಹೊಣೆಗಾರಿಕೆಯಿಂದ ಅವರು ಜಾರಿಕೊಳ್ಳುವರು. ಕೆಲವೊಮ್ಮೆ ಅವರಲ್ಲಿ ಪಥಭ್ರಷ್ಟತೆ ಸಂಭವಿಸುವ ಸಾಧ್ಯತೆಯೂ ಇದೆ. ಆದ್ದರಿಂದ,

ಮಕ್ಕಳಲ್ಲಿ ಸಂತುಲಿತವಾದ ನೀತಿಯನ್ನು ಅನುಸರಿಸಬೇಕು. ಮಕ್ಕಳನ್ನು ತಂದೆ ತಾಯಂದಿರು ಸ್ವಂತ ಕಾಲಲ್ಲಿ ನಿಲ್ಲುವಂತೆ ಮಾಡಬೇಕು. ಬದುಕು ಪೂರ್ತಿ ಮಕ್ಕಳು ನಮ್ಮನ್ನೇ ಆಶ್ರಯಿಸುವವರಂತೆ ಮಾಡುವುದಲ್ಲ.

ಹೆಣ್ಣುಮಕ್ಕಳು ಮತ್ತು ಗಂಡು ಮಕ್ಕಳೊಂದಿಗಿನ ವ್ಯವಹಾರ, ವರ್ತನೆಯಲ್ಲಿ, ವಿವೇಚನೆಯಲ್ಲಿ ವ್ಯತ್ಯಾಸ ಕಂಡುಬರುತ್ತಿದೆ. ನಮ್ಮ ಸಮಾಜದಲ್ಲಿ ಇದು ಸಾಮಾನ್ಯವಾಗಿದೆ. ನ್ಯಾಯಯುತವಾದ ವರ್ತನೆ ತೋರುವುದು ಸರಿಯಾದುದಾಗಿದೆ. ಇಂತಹ ಕೆಲವು ತಪ್ಪು ನಿರ್ಣಯಗಳು ಗಂಡು ಮಕ್ಕಳು ಮತ್ತು ಹೆಣ್ಣುಮಕ್ಕಳ ಮಧ್ಯೆ ಕಂದರ, ದ್ವೇಷ ಸೃಷ್ಟಿಸಲಷ್ಟೇ ಸಹಾಯಕವಾಗಬಹುದು.

ಮಕ್ಕಳ ಬಟ್ಟೆ, ಫೋನ್, ಕಂಪ್ಯೂಟರ್, ಮತ್ತಿತರ ಅಧ್ಯಯನೋಪಕರಣಗಳನ್ನು ನಿರಂತರ ಪರಿಶೀಲಿಸಿ ತಪ್ಪು ಕಂಡುಹಿಡಿಯುವ ಉದ್ದೇಶದಿಂದ ಪತ್ತೇದಾರಿಕೆ ನಡೆಸು ವುದು. ಇದು ಪೋಷಕರು ಮತ್ತು ಮಕ್ಕಳ ನಡುವಿನ ವಿಶ್ವಾಸಕ್ಕೆ ಧಕ್ಕೆ ತರುತ್ತದೆ. ಅವರ ಅನುಮತಿ ಪಡೆದೇ ಇಂತಹವುಗಳನ್ನು ಪರೀಕ್ಷಿಸಬಹುದು.

ಮಕ್ಕಳ ಭಾವನೆಯನ್ನು ಅರ್ಥೈಸದೆ ಅವರನ್ನು ಇತರರ ಮುಂದೆ ತಾತ್ಸಾರದಿಂದ ನಿಂದಿಸುವುದು. ಹೀಗೆ ಮಾಡಿದ ಮಾತಾಪಿತರ ಬಗ್ಗೆ ಮುಂದೆ ಮಕ್ಕಳಲ್ಲಿ ಪ್ರತೀಕಾರ ಭಾವನೆ ಬೆಳೆಯುವುದು.