ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಮಾ. 11: ಕೊರೊನಾ ವೈರಸ್ ಹರಡಿದ ಫ್ರಾನ್ಸ್, ಜರ್ಮನಿ, ಸ್ಪೈನ್ಗಳ ಪ್ರಜೆಗಳಿಗೆ ಭಾರತ ಪ್ರವೇಶಿಸದಂತೆ ನಿಷೇಧ ಹೇರಲಾಗಿದೆ. ವೀಸಾ ಸಿಕ್ಕಿ ಈವರೆಗೆ ಇಲ್ಲಿ ಬಂದಿಲ್ಲದವರಿಗೆ ಕಾಯಂ, ಇ ವೀಸಾಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇಟಲಿ, ಇರಾನ್ ದೇಶಗಳಿಂದ ಬರುವವರಿಗೆ ವೀಸಾಕ್ಕೆ ನಿಯಂತ್ರಣವನ್ನೂ ಹೇರಲಾಗಿದೆ. ಮಾರ್ಚ್ 3 ಅದಕ್ಕಿಂತ ಮೊದಲು ವೀಸಾಗಳು ಮತ್ತು ಇ-ವೀಸಾಗಳು ಸಿಕ್ಕಿದ್ದು ಈವರೆಗೆ ಭಾರತ ಪ್ರವೇಶಿಸದಿರುವ ಇಟಲಿ, ಇರಾನ್ ದೇಶಗಳ ವೀಸಾಗಳು ಮತ್ತು ಜಪಾನ್, ದಕ್ಷಿಣ ಕೊರಿಯಾ ಪ್ರಜೆಗಳ ಆನ್ಲೈನ್ ಅರೈವಲ್ ವೀಸಾಗಳನ್ನು ತಾತ್ಕಾಲಿಕವಾಗಿ ರದ್ದು ಪಡಿಸಲಾಗಿದೆ. ಚೀನ, ಇರಾನ್, ಇಟಲಿ, ದಕ್ಷಿಣ ಕೊರಿಯ, ಜಪಾನ್, ಫ್ರಾನ್ಸ್, ಜರ್ಮನಿ, ಸ್ಪೈನ್ ಗೆ ಹೋಗಿಬಂದ ವಿದೇಶಿ ಪ್ರಜೆಗಳಿಗೆ ಫೆಬ್ರವರಿ ಒಂದು ಅಥವಾ ಅದಕ್ಕಿಂತ ಮುಂಚೆ ಭಾರತ ವೀಸಾ ನೀಡಿದ್ದರೆ ಅದನ್ನು ತಾತ್ಕಾಲಿಕವಾಗಿ ಸ್ಥಗಿತವಾಗಿರಿಸಲಾಗಿದೆ.
ಆಕಾಶ, ಜಲ, ನೆಲಮಾರ್ಗಗಳಲ್ಲಿ ಪ್ರಯಾಣಿಸುವುದಕ್ಕೂ ನಿಯಂತ್ರಣವಿದೆ. ತುರ್ತು ಪರಿಸ್ಥಿತಿಯಲ್ಲಿ ಭಾರತಕ್ಕೆ ಬರಬೇಕಾದವರಿಗೆ ಅದಕ್ಕೆ ಸಂಬಂಧಿಸಿದ ವೀಸಾಕ್ಕಾಗಿ ದೂತವಾಸಗಳು ಕಾನ್ಸುಲೇಟ್ಗಳನ್ನು ಸಂಪರ್ಕಿಸಬಹುದು. ಮಾರ್ಚ್ ಐದರವರೆಗೆ ಇಟಲಿಯ, ದಕ್ಷಿಣ ಕೊರಿಯದ ಪ್ರಜೆಗಳಿಗೆ ತುರ್ತು ವೀಸಾ ನೀಡಲಾಗುವುದಾದರೂ ಆಯಾ ದೇಶದ ಲ್ಯಾಬ್ನಿಂದ ಕೊರೊನಾ ಇಲ್ಲವೆನ್ನುವ ಮೆಡಿಕಲ್ ಸರ್ಟಿಫಿಕೆಟ್ ಅವರಲ್ಲಿ ಇರಬೇಕಾಗಿದೆ.












