ಧ್ರುತಗತಿಯಲ್ಲಿ ನಿರುದ್ಯೋಗ: ನಾಲ್ಕು ತಿಂಗಳಲ್ಲಿ ಗರಿಷ್ಠ

0
602

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಮಾ. 2: ಭಾರತದಲ್ಲಿ ನಿರುದ್ಯೋಗ ದರ ಫೆಬ್ರವರಿಯಲ್ಲಿ ಹೆಚ್ಚಳವಾಗಿದೆ. ನಿರುದ್ಯೋಗ ದರ7. 78ಕ್ಕೇರಿಕೆಯಾಗಿದೆ. ಜನವರಿಯಲ್ಲಿ 7.16ರಷ್ಟಿತ್ತು. 2019 ಅಕ್ಟೋಬರ್ ನಿಂದ ಅತ್ಯಂತ ಉನ್ನತ ದರ ಇದು ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯ ಇಕಾನಮಿ (ಸಿಎಂಐಇ) ಲೆಕ್ಕಗಳು ಬಹಿರಂಗಪಡಿಸಿವೆ. ಭಾರತದ ನಿರುದ್ಯೋಗ ದರ ಹೆಚ್ಚಳ ಅರ್ಥವ್ಯವಸ್ಥೆಯನ್ನು ಪ್ರತಿಕೂಲವಾಗಿ ಬಾಧಿಸಿದೆ. ಕಳೆದ ಆರು ವರ್ಷಕ್ಕೆ ಹೋಲಿಸಿದರೆ ಭಾರತದಲ್ಲಿ ನಿರುದ್ಯೋಗದ ಸಂಖ್ಯೆಯಲ್ಲಿ ಭಾರೀ ಹೆಚ್ಚಳವು 2019ರ ಕೊನೆಯ ಮೂರು ತಿಂಗಳಲ್ಲಿ ದಾಖಲಾಗಿದೆ. ಜಾಗತಿಕ ಮಟ್ಟದಲ್ಲಿ ಕೊರೊನಾ ವೈರಸ್ ಮಾರುಕಟ್ಟೆ, ಅರ್ಥವ್ಯವಸ್ಥೆಗೆ ಪ್ರತಿಕೂಲವಾಗಿ ಪರಿಣಮಿಸಿದ್ದು ಉದ್ಯೋಗ ದರ ಇಳಿಕೆಗೆ ಕಾರಣವಾಗಿದೆ.

ಗ್ರಾಮೀಣ ಕ್ಷೇತ್ರದಲ್ಲಿ ಜನರಲ್ಲಿ ನಿರುದ್ಯೋಗ ಅಪಾಯಕಾರಿಯಾಗಿದೆ. ಇಲ್ಲಿ ಶೇ.7.37 ನಿರೋದ್ಯೋಗ ದರವಾಗಿದೆ. ಈ ಹಿಂದೆ ಶೇ. 5.97 ಇತ್ತು. ನಗರ ಪ್ರದೇಶಗಳಲ್ಲಿ ಜನವರಿಯಲ್ಲಿ ನಿರುದ್ಯೋಗ ದರ ಶೇ. 9.70 ಇತ್ತು. ಈಗ ಅದು ಶೇ. 8.65ರಷ್ಟಿದೆ.