ಸನ್ಮಾರ್ಗ ವಾರ್ತೆ
ಜೈಪುರ: ಕೊರೋನಕ್ಕೆ ಮದ್ದು ಕಂಡು ಹಿಡಿದಿದ್ದೇವೆ ಎಂದು ಹೇಳಿದ ಯೋಗ ಗುರು ಬಾಬಾ ರಾಮದೇವ, ಪತಂಜಲಿಯ ಸಿಇಓ ಆಚಾರ್ಯ ಬಾಲಕೃಷ್ಣ ಸಹಿತ ಐದು ಮಂದಿ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ. ಜೈಪುರ ಪೊಲೀಸರು ಇವರ ವಿರುದ್ಧ ಎಫ್‍ಐಆರ್ ಹಾಕಿದ್ದಾರೆ. ಪತಂಜಲಿಯ ಕೊರೊನಿಲ್ ಮದ್ದು ಕೊರೋನ ರೋಗ ಗುಣಪಡಿಸುವುದು ಎಂದು ಜನರಿಗೆ ತಪ್ಪು ಸಂದೇಶ ನೀಡಿದ ಆರೋಪ ಹೊರಿಸಲಾಗಿದೆ.
ಬಾಬಾ ರಾಮದೇವ ಪತಂಜಲಿಯ ಕೊರೊನಿಲ್ ಲಾಂಚ್ ಮಾಡಿದ ಬೆನ್ನಿಗೆ ಆಯುಷ್ ಮಂತ್ರಾಲಯ ವಿವರ ಕೇಳಿತ್ತು. ತದನಂತರ ಜ್ಯೋತಿನಗರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಿಕೊಳ್ಳಲಾಗಿದೆ. ರಾಮದೇವ, ಬಾಲಕೃಷ್ಣ, ವಿಜ್ಞಾನಿ ಅನುರಾಗ್ ವಷ್ರ್ನಿ, ನಿಂಸ್ ಅಧ್ಯಕ್ಷ ಬಲ್‍ಬೀರ್ ಸಿಂಗ್ ತೊಮರ್, ನಿರ್ದೇಶಕ ಅನುರಾಗ್ ತೋಮರ್ ವಿರುದ್ಧ ಎಫ್‍ಐಆರ್ ಸೆಕ್ಷನ್ 420- ವಂಚನೆ ಆರೋಪ ಹೊರಿಸಲಾಗಿದೆ.
ಏಳು ದಿವಸಗಳಿಂದ ಕೊರೋನ ರೋಗ ಗುಣಮುಖವಾಗಲಿದೆ ಎಂದು ರಾಮದೇವ್‌ರವರ ಪತಂಜಲಿ ಹೇಳಿತ್ತು. ಒಂದು ವಾರದಿಂದ ಶೇ100ರಷ್ಟು ರೋಗ ಗುಣಮುಖರಾಗಬಹುದು ಎಂದು ರಾಮದೇವ್ ಹೇಳಿದ್ದರು. 100 ರೋಗಿಗಳಿಗೆ ಮದ್ದು ಕೊಟ್ಟು ನೋಡಿದ್ದೇವೆ. ಅವರಲ್ಲಿ ಶೇ. 69 ಮಂದಿ ಮೂರು ದಿವಸಗಳಲ್ಲಿ ಗುಣಹೊಂದಿದ್ದಾರೆ. ಏಳು ದಿವಸದಲ್ಲಿ ಶೇ. 100ರಷ್ಟು ಗುಣಮುಖರಾಗುತ್ತಾರೆ. ಸರಿಯಾದ ಅಧ್ಯಯನದಿಂದ ಮದ್ದು ಕಂಡು ಹುಡುಕಿದ್ದೇವೆ ಎಂದು ರಾಮದೇವ್ ಹೇಳಿದ್ದರು.
ಆದರೆ, ಯಾವ ಆಸ್ಪತ್ರೆಗಳಲ್ಲಿ ಸಂಶೋಧನೆ ಮಾಡಿದಿರಿ, ಇಂತಹ ಪರೀಕ್ಷೆ ಮಾಡಿ ನೋಡಲು ಇನ್‍ಸ್ಟಿಟ್ಯೂಟ್ ಎಥಿಕ್ಸ್ ಕಮಿಟಿಯ ಅನುಮತಿ ಪಡೆದಿದ್ದಿರಾ, ಇದನ್ನು ಕ್ಲಿನಿಕಲ್ ಪರೀಕ್ಷೆ ಮಾಡಲು ರಿಜಿಸ್ಟ್ರೇಶನ್ ಮಾಡಿದ್ದೀರಾ ಎಂದು ಸರಕಾರವು ಪತಂಜಲಿಯೊಂದಿಗೆ ಪ್ರಶ್ನಿಸಿತ್ತಲ್ಲದೇ, ಔಷಧಿ ಮಾರಾಟವನ್ನು ತಡೆಹಿಡಿದಿತ್ತು.
ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












