ಸನ್ಮಾರ್ಗ ವಾರ್ತೆ
ಬಿಹಾರ,ಜೂ.28: ಬಿಹಾರದೊಂದಿಗೆ ಗಡಿ ಹಂಚಿಕೊಂಡಿರುವ ನೇಪಾಳದ ಭಾಗಗಳಲ್ಲಿ ಚೀನಾದ ಟೆಂಟ್‌ಗಳು ಕಂಡು ಬಂದಿದ್ದು, ಇವುಗಳಲ್ಲಿ ನೇಪಾಳಿ ಮಿಲಿಟರಿ ಸೇನೆಯು ಠಿಕಾಣಿ ಹೂಡಿರುವುದಾಗಿ ವರದಿಯಾಗಿದೆ. ಈ ಟೆಂಟ್‌ಗಳನ್ನು ಕ್ವಾರಂಟೈನ್ ಕೇಂದ್ರಗಳ ಹೆಸರಿನಲ್ಲಿ ಬಳಸಿಕೊಳ್ಳಲಾಗುತ್ತಿದ್ದು, ನೇಪಾಳ ಸೇನಾ ಕಾರ್ಯಾಚರಣೆಗಳನ್ನು ನಡೆಸುತ್ತಿರುವುದು ವರದಿಯಾಗಿದೆ.
ನೇಪಾಳಿ ಜವಾನರು ಬಿಹಾರ ಗಡಿಯಲ್ಲಿ ಚೀನಾದ ಸುಮಾರು 400 ಡೇರೆಗಳಲ್ಲಿ ತಂಗಿದ್ದಾರೆ. 2015 ರ ಭೂಕಂಪದ ಸಂದರ್ಭದಲ್ಲಿ ಚೀನಾ ಈ ಗುಡಾರಗಳನ್ನು ನೇಪಾಳಕ್ಕೆ ಪರಿಹಾರ ಸಾಮಗ್ರಿಗಳಲ್ಲಿ ಒದಗಿಸಿತ್ತು. ಈಗ ಅವುಗಳನ್ನು ಚೆಕ್ ಪೋಸ್ಟ್‌ಗಳನ್ನು ರಚಿಸಲು ಬಳಸಿಕೊಳ್ಳಲಾಗುತ್ತಿದೆ. ಗಡಿಯಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಸಹ ನೇಪಾಳ ಅಳವಡಿಸಿದೆ.
ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












