ಸನ್ಮಾರ್ಗ ವಾರ್ತೆ
ಹಿರೇ ಹಟ್ಟಿಹೊಳಿ ನೆರೆ ಸಂತ್ರಸ್ತರ 28 ಮನೆಗಳ ನಿರ್ಮಾಣ ಯೋಜನೆ ನಿಧಿ ಸಂಗ್ರಹದ ಗುರಿ ಶೀಘ್ರ ಪೂರ್ಣಗೊಳಿಸಲು ನಿರ್ಧಾರ
ಮಂಗಳೂರು: ಹ್ಯೂಮಾನಿಟೇರಿಯನ್ ರಿಲೀಫ್ ಸೊಸೈಟಿ (HRS) ಕೋಸ್ಟಲ್ ಝೋನ್ನ HRS Cadres Meet ಹಿದಾಯತ್ ಸೆಂಟರ್ ನಲ್ಲಿ ಅಲ್ಲಾಹನ ಅಪಾರ ಅನುಗ್ರಹದಿಂದ ಯಶಸ್ವಿಯಾಗಿ ನಡೆಯಿತು.
ಸಭೆಯಲ್ಲಿ ಬೆಳಗಾವಿ ಜಿಲ್ಲೆಯ ಹಿರೇ ಹಟ್ಟಿಹೊಳಿ ಗ್ರಾಮದ ನೆರೆ ಸಂತ್ರಸ್ತರಿಗಾಗಿ HRS ವತಿಯಿಂದ ಕೈಗೆತ್ತಿಕೊಳ್ಳಲಾಗಿರುವ 28 ಮನೆಗಳ ನಿರ್ಮಾಣ ಯೋಜನೆ ಕುರಿತು ವಿವರವಾದ ಚರ್ಚೆ ನಡೆಯಿತು. HRS ರಾಜ್ಯ ಡೈರೆಕ್ಟರ್ ಕೆ.ಎಂ. ಅಶ್ರಫ್ ಅವರು ಯೋಜನೆಯ ಪ್ರಗತಿ, ಮುಂದಿನ ಕಾರ್ಯಯೋಜನೆ ಹಾಗೂ ನಿಧಿ ಸಂಗ್ರಹದ ಕುರಿತು ಡಾಕ್ಯುಮೆಂಟರಿ ಮೂಲಕ ಮಾಹಿತಿ ನೀಡಿದರು.
ಹಿರೇ ಹಟ್ಟಿಹೊಳಿ ವಸತಿ ಯೋಜನೆಗಾಗಿ ಕೋಸ್ಟಲ್ ಝೋನ್ಗೆ ನಿಗದಿಪಡಿಸಲಾಗಿರುವ ನಿಧಿ ಸಂಗ್ರಹದ ಗುರಿಯನ್ನು ಶೀಘ್ರವಾಗಿ ಪೂರ್ಣಗೊಳಿಸುವ ಕುರಿತು ಸಭೆಯಲ್ಲಿ ನಿರ್ಧರಿಸಲಾಯಿತು.
ಇದೇ ಸಂದರ್ಭದಲ್ಲಿ Fire Fight – 2 Days Training Camp ಹಾಗೂ Volunteers – 10 Days Training Camp ಆಯೋಜಿಸುವ ಬಗ್ಗೆಯೂ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಝೋನಲ್ ಲೀಡರ್ ಅಮೀರ್ ಸಿದ್ದೀಕ್ ಕುದ್ರೋಳಿ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು. ವಿವಿಧ ಪ್ರದೇಶಗಳಿಂದ ಆಗಮಿಸಿದ್ದ HRS ಗ್ರೂಪ್ ಲೀಡರ್ಗಳು ತಮ್ಮ ಅಭಿಪ್ರಾಯ ಹಾಗೂ ಸಲಹೆಗಳನ್ನು ಹಂಚಿಕೊಂಡರು.
ಮಂಗಳೂರು ವಲಯದ ಕ್ಯಾಪ್ಟನ್ ಮುನೀರ್ ಪದರಂಗಿ ಹಾಗೂ ಸಹ ಕ್ಯಾಪ್ಟನ್ ಮುಹಮ್ಮದ್ ಸಲೀಮ್, ಉಡುಪಿ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಲೀಮ್ ಬೋಳಂಗಡಿ ಅವರ ಕಿರಾಅತ್ನೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಸರ್ಫರಾಜ್ ಕಾರ್ಯಕ್ರಮವನ್ನು ನಿರೂಪಿಸಿದರು.












