ಯಾವುದೇ ಮುಸ್ಲಿಂ ಕುಟುಂಬದೊಂದಿಗೆ ಇದು ಸಂಭವಿಸಬಹುದು: ವಿದ್ಯಾರ್ಥಿ ಕಾರ್ಯಕರ್ತೆ ಅಫ್ರೀನ್ ಫಾತಿಮ

0
300

ಸನ್ಮಾರ್ಗ ವಾರ್ತೆ

ಪ್ರಯಾಗ್ ರಾಜ್: “ಒಟ್ಟಾರೆ ಬಳಲಿದ್ದೇನೆ. ಏನು ಮಾಡಬೇಕು, ಯಾರಿಗೆ ಕರೆ ಮಾಡಬೇಕೆಂದು ಗೊತ್ತಾಗುತ್ತಿಲ್ಲ. ಇದು ಒಂದು ಕೆಟ್ಟಕನಸ್ಸಿನಂತೆ ಅನಿಸುತ್ತಿದೆ”. ಜೂನ್ 12ರಂದು ಬೆಳಗ್ಗೆ ಓರ್ವ ಸಂಬಂಧಿಕರಿಗೆ ಫೋನ್‍ನಲ್ಲಿ ಮಾತಾಡುವ ವೇಳೆ ಅಫ್ರೀನ್ ಫಾತಿಮ(24) ಹೀಗೆ ಹೇಳಿದ್ದರು. ಬಿಜೆಪಿಯ ಮತ್ತು ಅವರ ಆನ್‍ಲೈನ್ ಪಡೆಯ ಕಟು ಟೀಕಾಕಾರೆ, ಜವಾಹರಲಾಲ್ ವಿಶ್ವವಿದ್ಯಾನಿಲಯದ ಆ ಲಿಂಗ್ವಿಸ್ಟಿಕ್ಸ್ ಪಿಜಿ ವಿದ್ಯಾರ್ಥಿನಿಯ ಪಾಲಿಗೆ ಜೂನ್ 12ನೇ ತಾರೀಖು ಈ ದುಃಸ್ವಪ್ನವನ್ನು ನಿಜವಾಯಿತು.

ಉತ್ತರಪ್ರದೇಶದ  ಅಲಹಾಬಾದನ್ನು ಯೋಗಿ ಸರಕಾರ ಪ್ರಯಗ್ ರಾಜ್ ಎಂದು ಬದಲಿಸಿದ್ದು, ಅಲಾಹಾಬಾದಿನಲ್ಲಿದ್ದ ಅಫ್ರಿನಾ ಫಾತಿಮಾರ ಮನೆಯನ್ನು ಮುನ್ಸಿಪಾಲಿಟಿಯ ಬುಲ್ಡೋಝರ್‌ಗಳು ಕೆಡವಿ ಹಾಕಿದವು. ಸರಕಾರವನ್ನು ಬೆಂಬಲಿಸುವ ಚ್ಯಾನೆಲ್‍ಗಳು ಮನೆಯ ವಿಶೇಷಗಳನ್ನು ಹೊಕ್ಕು ಅದರೊಳಗಿನಿಂದ ಸಿಕ್ಕಿದ ಧ್ವಜ, ಪೋಸ್ಟರ್‌ಗಳನ್ನು ಪ್ರದರ್ಶಿಸುತ್ತಿವೆ. “ಅನ್ಯಾಯ ಕಾನೂನು ಆಗುವಾಗ ಪ್ರತಿಭಟನೆ ಹೊಣೆಗಾರಿಕೆಯಾಗಿ ಬದಲಾಗುತ್ತದೆ” ಎಂದು ಅವುಗಳಲ್ಲೊಂದು ಪೋಸ್ಟರ್ ಹೇಳುತ್ತದೆ.

ಪ್ರಯಾಗ್ರಾಜ್‍ನಲ್ಲಿ ನಡೆದ ಪ್ರತಿಭಟನೆಯ ಸಂಘಟಕ ಎಂದು ಆರೋಪಿಸಿ ಪೌರ ಸಮೂಹದ ಪರಿಚಿತ ಮುಖ ಜಮಾಅತೆ ಇಸ್ಲಾಮಿ ಹಿಂದ್ ಸದಸ್ಯ ಜಾವೇದ್ ಮುಹಮ್ಮದ್‍ರನ್ನು ಪೊಲೀಸರು ಬಂಧಿಸಿದ್ದಾರೆ. ಬಿಜೆಪಿ ಮಾಜಿ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮಳ ಆಕ್ಷೇಪದ ವಿರುದ್ಧ ದೇಶದ ಹಲವು ಕಡೆಗಳಲ್ಲಿ ಪ್ರತಿಭಟನೆ ನಡೆದಿತ್ತು. ಆದರೆ ಪ್ರಯಾಗ್ ರಾಜ್‍ನ ಪ್ರತಿಭಟನೆ ಮಾತ್ರ ಹಿಂಸಾತ್ಮಕವಾಗಿತ್ತು.

ಐದು ವರ್ಷಗಳಿಂದ ಅಫ್ರಿನಾ ವಿದ್ಯಾರ್ಥಿ ಚಟುವಟಿಕೆಗಳಲ್ಲಿ ಭಾಗಿಯಾಗಿ ಹಲವು ಸಮಸ್ಯೆಗಳನ್ನು ಎದುರಿಸಿದ್ದಾರೆ. ಸರಕಾರ ಹುಡುಕಿ ಬರುವಾಗ ಏನು ಮಾಡಬಹುದು ಎಂಬ ಕುರಿತು ವೆಲ್ಫೇರ್ ಪಾರ್ಟಿ ನಾಯಕ ಮತ್ತು ಆಡಳಿತಕೂಟ ಟೀಕಾಕಾರನಾದ ತಂದೆಯೊಂದಿಗೆ ಜೊತೆ ನಿಂತು ಅಫ್ರಿನಾ ಮಂದಹಾಸ ಬೀರಿದ್ದರು.

ಆದರೆ ಸರಕಾರ ತಂದೆಯನ್ನು ಮಾತ್ರವಲ್ಲ, ತಾಯಿ, ಸಹೋದರಿಯನ್ನು ಹುಡುಕಿಕೊಂಡು ಮನೆಗೆ ಬಂತು. ಈ ಕ್ರಮದ ಮೂಲಕ ಹಗೆ ತೀರಿಸಿಕೊಳ್ಳಲಾಗುತ್ತಿದೆ ಎಂದು ಅಫ್ರೀನ್ ಹೇಳುತ್ತಾರೆ. ಜಾವೇದ್ ಮುಹಮ್ಮದ್‍ರ ವಿರುದ್ಧ ಯಾವ ಆರೋಪಗಳನ್ನು ಹೊರಿಸಲಾಗಿದೆ ಎಂದು ಸ್ಪಷ್ಟವಾಗಿಲ್ಲ. ಅವರು ನೈನಿ ಸೆಂಟ್ರಲ್ ಜೈಲಿನಲ್ಲಿ ಇದ್ದಾರೆ ಎಂದು ವರದಿಯಾಗಿದೆ. ತಾಯಿ ಮತ್ತು ತಂಗಿಯನ್ನು ಕಸ್ಟಡಿಯಲ್ಲಿದ್ದಾರಾ ಎಂಬುದು ಸ್ಪಷ್ಟವಾಗಿಲ್ಲ.

ಅನಧಿಕೃತ ನಿರ್ಮಾಣ ಎಂಬ ಸುಳ್ಳು ಕಥೆ

24 ಗಂಟೆಯಾಗಿಯೂ ತಂದೆಯನ್ನು ಎಲ್ಲಿಗೆ ಕರೆದುಕೊಂಡು ಹೋದರೆಂಬುದು ತಿಳಿದಿಲ್ಲ ಎಂದು ನಮ್ಮೊಂದಿಗೆ ಮಾತಾಡುವಾಗ ಅಫ್ರೀನ ಹೇಳಿದರು. ತಾಯಿ, ತಂಗಿಯನ್ನು ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ ಎಂದು ಮಾತ್ರ ಗೊತ್ತಾಗಿದೆ. ಮನೆ ಅನಧಿಕೃತವಾಗಿ ಕಟ್ಟಲಾಗಿತ್ತು ಆದ್ದರಿಂದ ಕೆಡವಿದ್ದೆಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಇದು ಸುಳ್ಳು. ಜೂನ್ 11ರಂದು ಮನೆಯ ಮುಂದೆ ನೋಟಿಸು ಅಂಟಿಸಿದ್ದು ಮಾಧ್ಯಮಗಳಲ್ಲಿ ಸುದ್ದಿಯಾಗುವವರೆಗೆ ನಮಗೆ ಯಾವುದೆ ವಿವರ ಸಿಕ್ಕಿರಲಿಲ್ಲ. ಅಲ್ಪಸಂಖ್ಯಾತರ ವಿರುದ್ಧ ಬಿಜೆಪಿ ಸರಕಾರ ವರ್ತನೆಗೆ ನಾನು ಮತ್ತು ತಂದೆ ಟೀಕಾಕಾರಾಗಿದ್ದೆವು ಎಂದು ಕುಟುಂಬವನ್ನು ಗುರಿ ಮಾಡಲಾಗುತ್ತಿದೆ.

ಪ್ರತಿಭಟನೆಯ ಸೂತ್ರದಾರ ತಂದೆ ಎಂಬ ವಾದವನ್ನು ಅಫ್ರೀನ್ ನಿರಾಕರಿಸುತ್ತಾರೆ. ಹಾಗಿದ್ದರೆ ವಾರೆಂಟ್,ನೋಟಿಸು ಇಲ್ಲದೆ ಜನರನ್ನು ಬಂಧಿಸುವುದು ಮತ್ತು ಮಹಿಳೆಯರನ್ನು ಮಧ್ಯ ರಾತ್ರೆ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗುವುದು ಕಾನೂನಿಗೆ ವಿರುದ್ಧವಾಗಿದೆ.

ಜಾವೇದ್ ಮುಹಮ್ಮದ್ ಅಕ್ರಮಗಳಿಗೆ ಮುಖ್ಯ ಸಂಚುಕೋರ. ಭಾರತ್ ಬಂದ್ , ಅಟಾಲದಲ್ಲಿ ಒಟ್ಟು ಸೇರಲು ಕರೆ ನೀಡಿದ್ದರು ಎಂದು ಪ್ರಾಯಾಗ್ ರಾಜ್ ಎಸ್ಪಿ ಸಂಜಯ್ ಕುಮಾರ್ ಹೇಳಿದ್ದರು. ಜೆಎನ್‍ಯುನಲ್ಲಿ ಕಲಿಯುವ ಅಫ್ರಿನ್ ಫಾತಿಮ ಕಾನೂನು ಬಾಹಿರ ಚಟುವಟಿಕೆಗಳ ಭಾಗವಾಗಿದ್ದಾರೆ. ತಂದೆ-ಮಗಳು ಸೇರಿ ಹಲವು ಪ್ರಚಾರಗಳನ್ನು ನಡೆಸುತ್ತಿದ್ದರು ಎಂದು ಈ ಎಸ್ಪಿ ಹೇಳಿದರು.

ಪ್ರಯಾಗ್ ರಾಜ್‌ನ ಪ್ರತಿಭಟನೆಯಲ್ಲಿ ಹಿಂಸಾಚಾರ, ಕಲ್ಲೆಸತ, ಬೆಂಕಿ ಹಚ್ಚುವಿಕೆ ಆಗಿದೆ ಎಂದು ಮತ್ತು ಪೊಲೀಸರಿಗೆ ಗಾಯವಾಗಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡುತ್ತಿವೆ. ನಗರಗಳಲ್ಲಿ ಪರಿಸ್ಥಿತಿ ಕೆಡುವುದಕ್ಕೆ ಸಮಾಜ ವಿರೋಧಿ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವೆವು ಎಂದು ಹೇಳಿದ ಮುಖ್ಯಮಂತ್ರಿ ಆದಿತ್ಯನಾಥ್ ಸಮಾಜ ವಿರೋಧಿಗಳಿಗೆ ಪರಿಷ್ಕೃತ ಸಮಾಜದಲ್ಲಿ ಸ್ಥಾನವಿಲ್ಲ ಆದರೆ ತೊಂದರೆಯಿಲ್ಲದವರಿಗೆ ತೊಂದರೆ ಕೊಡುವುದಿಲ್ಲ ಎಂದಿದ್ದರು. ಆದರೆ, ಯಾವುದೇ ಅಪರಾಧಿಯನ್ನು ಹಾಗೆ ಬಿಡುವುದಿಲ್ಲ ಎಂದು ಘೋಷಿಸಿದ್ದರು. ಪ್ರತೀ ಶುಕ್ರವಾರ ನಂತರ ಶನಿವಾರ ಕೂಡ ಬರುತ್ತದೆ ಎಂದು ಕಟ್ಟಡ ಕೆಡವಿದ ಬುಲ್ಡೋಝರಿನ ಚಿತ್ರ ಸಹಿತ ಮುಖ್ಯಮಂತ್ರಿಯ ಮಾಧ್ಯಮ ಸಲಹೆಗಾರ ಮೃತ್ಯುಂಜಯ ಕುಮಾರ್ ಟ್ವೀಟ್ ಮಾಡಿದರು.

ಶುಕ್ರವಾರ ರಾತ್ರೆ ಅಮ್ಮ,ತಂಗಿ, ಅತ್ತೆ ಮಕ್ಕಳ ಜೊತೆ ಕುಟುಂಬದ ಮನೆಯಲ್ಲಿ ಅಫ್ರಿನಾ ಇದ್ದರು. ವಿಚಾರಣೆಗೆಂದು ಬಂದ ಪೊಲೀಸರು ಅತ್ಯಂತ ಸೌಮ್ಯದೊಂದಿಗೆ ವರ್ತಿಸಿದರು. ತಂದೆ ಸ್ವಂತ ಸ್ಕೂಟರ್‌ನಲ್ಲಿ ಠಾಣೆಗೆ ಹೋದರು. ಅಪರಾಧಗಳ ಸುತ್ರಧಾರಿ ಸ್ವಂತ ವಾಹನದಲ್ಲಿ ಹೋಗಲು ಬಿಡುತ್ತಾರಾ! ಎಂದು ಅಫ್ರೀನ್ ಕೇಳುತ್ತಾರೆ.

ನಂತರ ಫೋನ್‌ ಮಾಡಿ ತಾಯಿ ಹಾಗೂ ಸಹೋದರಿಯನ್ನು ವಿಚಾರಣೆಗೆ ಕರೆಯಿಸಿಕೊಂಡರು. ಮೂರು ಗಂಟೆಗಳ ನಂತರ ಬಂದ ಪೊಲೀಸ್ ಅಫ್ರೀನ್‍ಳನ್ನು ಜೊತೆಗೆ ಬರಲು ಹೇಳಿದರು. ಆದರೆ, ವಯಸ್ಸಾದ ಅತ್ತೆ ಮತ್ತು ಮಕ್ಕಳನ್ನು ಬಿಟ್ಟು ಬರಲು ಆಗುವುದಿಲ್ಲ ಎಂದು ಗಟ್ಟಿಯಾಗಿ ಅಫ್ರೀನ್ ಹೇಳಿದರು. ನೀವು ಬರದಿದ್ದರೆ ನಿಮ್ಮ ಮನೆ ಕೆಡವುತ್ತೇವೆ. ಅದು ಹಿಟ್‍ಲೀಸ್ಟ್‌ನಲ್ಲಿದೆ ಎಂದು ಆಗಲೇ ಪೊಲೀಸರಲ್ಲಿ ಒಬ್ಬ ಹೇಳಿದ್ದಾನೆ. ನಂತರ ಅದು ನಿಜವಾಯಿತು.

ಸಾಮಾಜಿಕ ಮಾಧ್ಯಮಗಳ ಮೂಲಕ ಬಹಳ ಮಂದಿ ಬೆಂಬಲಿಸಿದ್ದಾರೆ. ಅವರಿಗೆ ಕೃತಜ್ಞತೆಗಳು.  ಈಗಿನ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆ ಆಗುತ್ತದೆ ಎಂಬುದಕ್ಕೆ ಈ ಬೆಂಬಲದಿಂದ ಸಾಧ್ಯವಿದೆ ಎಂದನಿಸುವುದಿಲ್ಲ. ಈ ರೀತಿ ಜೀವನ ನಡೆಸುವುದು ಸ್ವಲ್ಪ ಭಯಾನಕವಾಗಿದೆ.

ಆದರೆ, ಇದು ನನ್ನ ಮಾತ್ರ ಕತೆಯಲ್ಲ. ಭಾರತದ ಪ್ರತಿಯೊಬ್ಬ ಮುಸ್ಲಿಂ ಕುಟುಂಬದ ಕತೆಯಾಗಿದೆ. “ವಿರೋಧಿಸುವವರನ್ನು ಮನೆಗೆ ನುಗ್ಗಿ ಹಿಡಿದುಕೊಂಡು ಹೋಗುತ್ತದೆ ಎಂಬ ಅವಸ್ಥೆ ಇದು” ಎಂದು ಅಫ್ರೀನ್ ಹೇಳಿದರು.