ವಿದೇಶಿಯರಿಗೆ ಸೌದಿ ಅರೇಬಿಯಾದಿಂದ ಹೊರಗೆ ಪ್ರಯಾಣಿಸಲು ಅವಕಾಶ

0
520

ಸನ್ಮಾರ್ಗ ವಾರ್ತೆ

ರಿಯಾದ್,ಡಿ.28: ಸೌದಿ ಅರೇಬಿಯದಲ್ಲಿರುವ ವಿದೇಶಿಯರು ದೇಶದಿಂದ ಹೊರಗೆ ಹೋಗಲು ಪ್ರಯಾಣ ಅನುಮತಿಯನ್ನು ನೀಡಲಾಗಿದೆ ಎಂದು ಸೌದಿ ಸಿವಿಲ್ ಎವಿಯೇಶನ್ ಜನರಲ್ ಅಥಾರಿಟಿ ತಿಳಿಸಿದೆ. ರವಿವಾರ ಹೊರಡಿಸಿದ ಸಕ್ರ್ಯುಲರ್‌ನಲ್ಲಿ ವಿದೇಶಗಳಿಗೆ ಮಾತ್ರ ಹೊರ ದೇಶಗಳಿಗೆ ಪ್ರಯಾಣಿಸಲು ಅನುಮತಿ ನೀಡಲಾಗಿದೆ. ಈಗ ಸೌದಿಯಲ್ಲಿರುವ ಸೌದಿ ಪ್ರಜೆಗಳಲ್ಲದ ಎಲ್ಲರೂ ಕೊರೋನ ಪ್ರತಿರೋಧ ಮಾರ್ಗಸೂಚಿಯನ್ನು ಪಾಲಿಸಿ ಪ್ರಯಾಣಿಕರನ್ನು ಕರೆದುಕೊಂಡು ಹೋಗಲು ವಿಮಾನ ಕಂಪೆನಿಗಳಿಗೆ ಅನುಮತಿ ನೀಡಲಾಗಿದೆ. ಆದರೆ, ಸೌದಿಗೆ ಬರಲು ಮಾತ್ರ ಅನುಮತಿ ಇಲ್ಲ. ಹೊಸದಾಗಿ ಕಂಡು ಬಂದ ಕೊರೋನ ಕೆಲವು ರಾಜ್ಯಗಳಲ್ಲಿ ಹರಡುತ್ತಿದೆ. ಈ ಪರಿಸ್ಥಿತಿಯಲ್ಲಿ ಒಂದು ವಾರ ಮೊದಲು ಎಲ್ಲ ಅಂತಾರಾಷ್ಟ್ರೀಯ ವಿಮಾನ ಯಾನಗಳನ್ನು ಸೌದಿ ಗೃಹ ಸಚಿವಾಲಯ ನಿಷೇಧಿಸಿತ್ತು.

ಒಂದು ವಾರದ ತಾತ್ಕಾಲಿಕ ನಿಷೇಧ ಹೇರಲಾಗಿದ್ದು, ರವಿವಾರಕ್ಕೆ ಸಮಯ ಮುಗಿದಿತ್ತು. ಆದ್ದರಿಂದ ಪ್ರಜೆಗಳಲ್ಲದವರಿಗೆ ಹೊರ ದೇಶಗಳಿಗೆ ಪ್ರಯಾಣಿಸುವ ಅನುಮತಿಯನ್ನು ನೀಡಲಾಗಿದೆ. ವಿದೇಶಿ ವಿಮಾನ ಕಂಪೆನಿಗಳಿಗೆ ಕೂಡ ಈ ಅಗತ್ಯಕ್ಕಾಗಿ ಸರ್ವಿಸ್ ನಡೆಸಲು ಅನುಮತಿ ನೀಡಲಾಗಿದೆ.

ಆದರೆ, ವಿಮಾನ ಬಂದ ಮೇಲೆ ಸೌದಿ ವಿಮಾನ ನಿಲ್ದಾಣದಲ್ಲಿ ಇಳಿದು ವಿಮಾನ ಸಿಬ್ಬಂದಿ ಇತರರೊಂದಿಗೆ ಬೆರೆಯಬಾರದು. ಈ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಕೊರೋನದ ಎರಡನೆ ಪ್ರಭೇದ ಕಂಡು ಬಂದ ದೇಶಗಳಿಗೆ ಪ್ರಯಾಣಿಸುವ ಅನುಮತಿ ನೀಡಲಾಗಿಲ್ಲ.