ದೇಶಕ್ಕೆ ನೇತೃತ್ವ ನೀಡಲು ಅವಕಾಶ ಪಡೆದ ಉತ್ತಮ ಮನುಷ್ಯ ಬೈಡನ್- ಜಾರ್ಜ್ ಬುಶ್

0
556

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್,ನ.9: ಅಮೆರಿಕ ಅಧ್ಯಕ್ಷರಾಗಿ ಚುನಾಯಿತರಾದ ಜೊ ಬೈಡನ್‍ರನ್ನು ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ಡಬ್ಲ್ಯೂ ಬುಶ್ ಅಭಿನಂದಿಸಿದ್ದಾರೆ. ದೇಶಕ್ಕೆ ನೇತೃತ್ವ ನೀಡಲು ಅವಕಾಶ ದೊರೆತ ಉತ್ತಮ ವ್ಯಕ್ತಿ ಎಂದು ಅವರನ್ನು ಬುಶ್ ಹೊಗಳಿದರು.

ಚುನಾವಣೆಯಲ್ಲಿ ಏಳು ಕೋಟಿ ಮತಗಳನ್ನು ಪಡೆದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‍ರನ್ನೂ ಅವರು ಅಭಿನಂದಿಸಿದರು. ಡೊನಾಲ್ಡ್ ಅಸಾಧಾರಣ ಸಾಧನೆ ಮಾಡಿದ್ದಾರೆ ಎಂದು ಡಲ್ಲಾಸ್‍ನ ಪ್ರೆಸಿಡೆನ್ಸಿಯಲ್ ಸೆಂಟರ್‌ನಿಂದ ಹೊರಡಿಸಿದ ಹೇಳಿಕೆಯಲ್ಲಿ ಬುಶ್ ತಿಳಿಸಿದ್ದಾರೆ. ಟ್ರಂಪ್ ಸೋಲೊಪ್ಪಲು ಸಿದ್ಧರಿಲ್ಲದಿದ್ದರೂ ಟ್ರಂಪ್ ಸೋಲನ್ನು ಒಪ್ಪಿದ ಪ್ರಮುಖ ರಿಪಬ್ಲಿಕನ್ ನಾಯಕರಾಗಿ ಬುಶ್ ಗಮನಸೆಳೆದಿದ್ದಾರೆ.

ಜಾರ್ಜ್ ಬುಶ್ ಸಹೋದರ ಜೇಬ್ ಬುಶ್ ಬೈಡನ್‍ರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ನಿಮಗೂ ನಿಮ್ಮ ವಿಜಯಕ್ಕೂ ನಾನು ಪ್ರಾರ್ಥಿಸುತ್ತೇನೆ. ಆಳದಲ್ಲಾದ ಗಾಯಗಳನ್ನು ಗುಣಪಡಿಸುವ ಸಮಯ ಇದು. ಧಾರಾಳ ಮಂದಿ ನಿಮ್ಮ ನಾಯಕತ್ವವವನ್ನು ಬಯಸಿದ್ದಾರೆ ಎಂದು ಜೇಬ್ ಬುಶ್ ಹೇಳಿದ್ದಾರೆ. 2016ರಲ್ಲಿ ರಿಪಬ್ಲಿಕನ್ ಪಾರ್ಟಿಯ ಅಧ್ಯಕ್ಷ ಅಭ್ಯರ್ಥಿಯಾಗಿ ಕೇಳಿ ಬಂದಿದ್ದ ಹೆಸರು ಜೇಬ್ ಬುಶ್‍ರದ್ದಾಗಿತ್ತು. ನಂತರ ಡೊನಾಲ್ಡ್ ಟ್ರಂಪ್ ಬಂದುದರಿಂದ ಅವರ ಸಾಧ್ಯತೆ ಇಲ್ಲದಾಗಿತ್ತು.