ತಮಿಳುನಾಡಿನಲ್ಲಿ ಟಿವಿ ಪತ್ರಕರ್ತನ ಹತ್ಯೆ

0
629

ಸನ್ಮಾರ್ಗ ವಾರ್ತೆ

ಚೆನ್ನೈ,ನ.9: ತಮಿಳ್ನಾಡಿನಲ್ಲಿ ಪತ್ರಕರ್ತರೊಬ್ಬರನ್ನು ಇರಿದು ಕೊಲೆ ಮಾಡಲಾಗಿದೆ. ಕಾಂಚಿಪುರಂನ ತಮಿಳು ಟಿವಿ ವರದಿಗಾರ ಜಿ.ಮೋಸಸ್(26) ರವಿವಾರ ಮಧ್ಯರಾತ್ರೆ ಕೆಲಸ ಮುಗಿಸಿಕೊಂಡು ಮನೆಗೆ ಬರುತ್ತಿದ್ದಾಗ ತಲವಾರಿನಿಂದ ಮಾರಣಾಂತಿಕ ಹಲ್ಲೆ ನಡೆದಿದ್ದು ಘಟನೆಯಲ್ಲಿ ಮೋಸೆಸ್ ಮೃತಪಟ್ಟಿದ್ದಾರೆ.

ಸರಕಾರಿ ಜಮೀನನ್ನು ಅನಧಿಕೃತವಾಗಿ ಮಾರಲು ಶ್ರಮಿಸಿದ್ದನ್ನು ಮೋಸೆಸ್ ಪ್ರಶ್ನಿಸಿದ್ದು ಇದು ಅವರ ಕೊಲೆಗೆ ಕಾರಣವೆಂದು ಹೇಳಲಾಗುತ್ತಿದ್ದು ಅವರು ಕಾಂಚಿಪುರಂನ ಭೂ ಮಾಫಿಯಾ, ಡ್ರಗ್ಸ್ ಮಾಫಿಯಾ ಮತ್ತು ರಾಜಕೀಯ ನಾಯಕರ ನಡುವಿನ ಸಂಬಂಧದ ಕುರಿತು ವರದಿ ಮಾಡಿದ್ದು, ಅವರ ವರದಿಗಾರಿಕೆ ತಮಿಳ್ನಾಡಿನಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಯನ್ನು ಸೃಷ್ಟಿಸಿತ್ತು.

ಮೋಸೆಸ್ ಸೊಮಂಗಲಂ, ನಲ್ಲೂರು ನಿವಾಸಿಯಾಗಿದ್ದು ಅವರ ತಂದೆ ಜ್ಞಾನ ರಾಜು ಮಾಲೈ ತಮಿಳಗಂ ಎಂಬ ಪತ್ರಿಕೆಯ ವರದಿಗಾರರಾಗಿದ್ದಾರೆ. ರಾಜಕೀಯ ಗೂಂಡಾ ಗ್ಯಾಂಗ್ ಕೊಲೆಯ ಹಿಂದಿದೆ ಎಂದು ಮೋಸೆಸ್ ಕುಟುಂಬ ಆರೋಪಿಸಿದೆ.