ಗೋಮಾಂಸದ ಹೆಸರಲ್ಲಿ ಎಷ್ಟು ರಾಜಕೀಯವೋ ಅಷ್ಟೇ ಗೋಮಾಂಸ ರಫ್ತಾಗುತ್ತದೆ

0
2361

ಬೀಫ್ ಎಕ್ಸ್ ಪೋರ್ಟ್ (ಗೋಮಾಂಸ ರಫ್ತು) ಭಾರತವು ದಾಪುಗಾಲು ಹಾಕಿ ಒಂದನೇ ಸ್ಥಾನವನ್ನು ಪಡೆದುಕೊಂಡಿದೆಯೆಂದರೆ ನಂಬಲಿಕ್ಕಾಗುವುದಿಲ್ಲ. ಏಕೆಂದರೆ ಗೋಹತ್ಯೆ ಮತ್ತು ಸ್ಮಗ್ಲಿಂಗ್‍ನ ಹೆಸರಲ್ಲಿ ಇಲ್ಲಿ ನಡು ರಸ್ತೆಯಲ್ಲಿ ಜನರನ್ನು ಥಳಿಸಿ ಕೊಲ್ಲಲಾಗುತ್ತದೆ. ದೇಶದಲ್ಲಿ ಗೋಹತ್ಯೆಗೆ ನಿಷೇಧ ಹೇರುವ ಮಾತಾಡುತ್ತಿರುವ ಬಿ.ಜೆ.ಪಿ. ಸರಕಾರದಲ್ಲಿ ಇಷ್ಟು ದೊಡ್ಡ ಕ್ರಾಂತಿ ಆಗಿದೆ. ಅನೇಕ ರಾಜ್ಯಗಳಲ್ಲಿ ಈ ಬಗ್ಗೆ ಕಾನೂನು ಕೂಡಾ ರಚಿಸಲಾಗಿದೆ. ಎಲ್ಲಿಯ ವರೆಗೆ ಗೋ ಹತ್ಯೆ ನಿಲ್ಲುವುದಿಲ್ಲವೋ ಲಿಂಚಿಂಗ್ (ಗುಂಪು ದಾಳಿ) ನಿಲ್ಲದು ಎಂದು ಅದರ ನಾಯಕರು ಹೇಳಿಕೆ ಕೊಡುತ್ತಿದ್ದಾರೆ. ಹಾಗಾದರೆ ಗೋ ಮಾಂಸದ ವ್ಯಾಪಾರ ಇಷ್ಟು ಹೆಚ್ಚಾಗಿರುವುದು ಹೇಗೆ? ಗೋವುಗಳನ್ನು ಎಲ್ಲಿ ಕಡಿಯಲಾಗುತ್ತದೆ. ಹೇಗೆ ಮಾಂಸ ರಫ್ತಾಗುತ್ತದೆಯೆಂಬುದು ಯಕ್ಷ ಪ್ರಶ್ನೆ. ಮೋದಿ ಸರಕಾರದ ಅನುಮತಿ ಇಲ್ಲದೆ ರಫ್ತಾಗುವುದು ಸಾಧ್ಯವಿಲ್ಲ. ಕಳೆದ ವರ್ಷ ಗೋ ಮಾಂಸ ರಫ್ತಿನಲ್ಲಿ 3ನೇ ಸ್ಥಾನದಲ್ಲಿದ್ದ ಭಾರತ 2018 ಆಗುವಾಗ ಒಂದನೇ ಸ್ಥಾನವನ್ನು ಪಡೆ ಯಿತು. ಅದೂ ಮೌನವಾಗಿ! ಅಮೆರಿಕಾದ ಎಗ್ರಿ ಕಲ್ಚರಲ್ ಎಕ್ಸ್ ಪೋರ್ಟ್ ಡಿಪಾರ್ಟ್‍ಮೆಂಟ್‍ನ ವರದಿ ಹೊರ ಬೀಳದಿರುತ್ತಿದ್ದರೆ, ಮೋದಿ ಸರಕಾರದಲ್ಲಿ ಗೋಮಾಂಸ ರಫ್ತು ವ್ಯಾಪಾರದಲ್ಲಿ ತೀವ್ರ ಏರಿಕೆ ಮಾಡಲಾಗುತ್ತದೆಯೆಂದು ಜನರಿಗೆ ತಿಳಿಯುತ್ತಿರಲಿಲ್ಲ. ವರದಿಯ ಪ್ರಕಾರ, ಕಳೆದ ವರ್ಷ ಅಕ್ಟೋಬರ್‍ನಲ್ಲಿ ಗೋಮಾಂಸ ರಫ್ತಿನಲ್ಲಿ 5% ಏರಿಕೆಯಾಗಿದೆ. ಇದು ಸಾಮಾನ್ಯ ಏರಿಕೆಯಲ್ಲ. 20 ಲಕ್ಷ ಟನ್ ಗೋಮಾಂಸ ರಫ್ತಾಗುತ್ತದೆಯೆಂದು ಇದರ ಅರ್ಥ.
ಭಾರತದಲ್ಲಿ ಗೋಮಾಂಸದ ವಾರ್ಷಿಕ ವ್ಯಾಪಾರವು ರೂ. 27,000 ಕೋಟಿಯಾಗಿದೆ. ದೇಶದೊಳಗೆ ಗೋಮಾಂಸ ಭಕ್ಷಿಸುವವರ ಕುರಿತೂ ವರದಿ ಹೇಳುತ್ತದೆ. ದೇಶದ ಜನಸಂಖ್ಯೆಯಲ್ಲಿ ಮುಸಲ್ಮಾನರು 18% ಇದ್ದಾರೆ. ಅದರ ಅಂಕಿ ಅಂಶದ ಪ್ರಕಾರ 14%. ಆದರೆ ದೇಶದಲ್ಲಿ ಗೋಮಾಂಸ ತಿನ್ನುವವರ ಪ್ರಮಾಣ 71% ಆಗಿದೆ. ಇತರ ಸಂಸ್ಥೆಗಳು ಈ ಪ್ರಮಾಣ ಇನ್ನೂ ಹೆಚ್ಚಿದೆಯೆಂದು ತೋರಿಸುತ್ತಿವೆ. ಮುಸ್ಲಿಮರಿಗಿಂತ ಮುಸ್ಲಿಮೇತರ ಬಾಂಧವರೇ ಹೆಚ್ಚು ತಿನ್ನುತ್ತಿದ್ದಾ ರೆಂದು ಇದರರ್ಥ. ದುರಂತವೇನೆಂದರೆ ಒಂದೆಡೆ ಯಲ್ಲಿ ಗೋವುಗಳನ್ನು ಸಾಗಾಟ ಮಾಡುವ ಮುಸಲ್ಮಾನರನ್ನು ಹಿಡಿದು ಕೊಲ್ಲಲಾಗುತ್ತದೆ. ಕೊಲೆಗಡುಕರ ಬಗ್ಗೆ ಸರಕಾರ ಏನೂ ಮಾಡುವುದಿಲ್ಲ. ಮಾತ್ರವಲ್ಲ ಕೊಲೆಗೀಡಾದವರ ವಿರುದ್ಧವೇ ಕಾನೂನು ಕ್ರಮ ಕೈಗೊಳ್ಳುತ್ತದೆ. ಇನ್ನೊಂದೆಡೆಯಲ್ಲಿ ಸರಕಾರದ ಮೇಲ್ನೋಟದಲ್ಲಿ ಗೋಮಾಂಸ ರಫ್ತು ಮತ್ತದರ ವ್ಯಾಪಾರವನ್ನು ವ್ಯಾಪಕಗೊಳಿಸಲಾಗುತ್ತಿದೆ. ಈಗಿನ ಪರಿಸ್ಥಿತಿಯೇ ನೆಂದರೆ ಭಾರತ ಮತ್ತು ಬ್ರೆಝಿಲ್‍ಗಳ ನಡುವೆ ಗೋಮಾಂಸ ರಫ್ತಿನಲ್ಲಿ ಒಂದು ರೀತಿಯ ಪೈಪೋಟಿ ನಡೆಯುತ್ತಿದೆ. ಈ ಮೊದಲು ಬ್ರೆಝಿಲ್ ಒಂದನೇ ಸ್ಥಾನದಲ್ಲಿತ್ತು. ಈಗ ಭಾರತ ಅದನ್ನು ಹಿಂದಿಕ್ಕುವುದರಲ್ಲಿದೆ. ಎರಡೂ ದೇಶಗಳಲ್ಲಿ ಒಂದು ವ್ಯತ್ಯಾಸವಿದೆ. ಬ್ರೆಝಿಲ್‍ನಲ್ಲಿ ಗೋವಿನ ಹೆಸರಲ್ಲಿ ದ್ವೇಷದ ರಾಜಕಾರಣವಾಗಲಿ, ಗುಂಪು ಹಿಂಸೆ ಅಥವಾ ಜನರನ್ನು ಥಳಿಸಿ ಕೊಲ್ಲುವುದಾಗಲಿ ನಡೆಯುವುದಿಲ್ಲ. ಆದರೆ ಭಾರತದಲ್ಲಿ ಗೋ ಮಾಂಸದ ಮೇಲೆ ನಿಷೇಧ ಮತ್ತು ಅದರ ವ್ಯಾಪಾರ ಒಟ್ಟೊಟ್ಟಿಗೆ ನಡೆಯುತ್ತಿದೆ. ಇಲ್ಲಿ ರಾಜಕೀಯ ಬಹಿರಂಗವಾಗಿ ನಡೆಯುತ್ತಿದೆ. ಅದರಿಂದಾಗಿ ಜನರನ್ನು ಕೊಲ್ಲಲಾಗುತ್ತದೆ. ವ್ಯಾಪಾರವಾದರೋ ಮೌನವಾಗಿ ನಡೆಯುತ್ತಿದೆ. ಭಾರತವು ಜಗತ್ತಿನ ಅಗತ್ಯದ 19.60% ಮಾಂಸ ರಫ್ತು ಮಾಡುತ್ತದೆ. ಇದು ಸಾಮಾನ್ಯ ವಿಷಯವಲ್ಲ. ವಿಚಿತ್ರವೇನೆಂದರೆ ಅತಿ ಹೆಚ್ಚು ಗೋಮಾಂಸವನ್ನು ಯೋಗಿ ಆದಿತ್ಯನಾಥರ ಉತ್ತರ ಪ್ರದೇಶದಿಂದ ರಫ್ತು ಮಾಡಲಾಗುತ್ತದೆ. ಅವರು ಕೆಲವೊಮ್ಮೆ ಗೋಮಾಂಸದಂಗಡಿಗಳನ್ನು ಮುಚ್ಚಿಸಿದರೆ, ಇನ್ನು ಕೆಲವೊಮ್ಮೆ ಗೋವುಗಳಿಗಾಗಿ ಅಂಬುಲೆನ್ಸ್ ಸೇವೆಯ ವ್ಯವಸ್ಥೆ ಮಾಡುತ್ತಾರೆ. ಇವೆಲ್ಲ ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಿಗೆ ತಿಳಿದಿಲ್ಲವೆಂದಲ್ಲ. ಅವರಿಗೆ ಎಲ್ಲವೂ ತಿಳಿದಿದೆ. ಏಕೆಂದರೆ ಗೋಮಾಂಸ ರಫ್ತಿನ ಲೈಸೆನ್ಸ್ ಸರಕಾರವೇ ನೀಡುತ್ತದೆ. ಅದರ ಮೂಲಕ ಭಾರೀ ಮೊತ್ತದ ಕರವನ್ನು ವಸೂಲು ಮಾಡುತ್ತದೆ. ಇನ್ನು ವಿಪಕ್ಷಗಳ ಸರಕಾರಗಳಿರುವ ರಾಜ್ಯಗಳಿಂದ ಮಾತ್ರ ಗೋಮಾಂಸ ರಫ್ತಾಗು ತ್ತದೆಂದೂ ಹೇಳುವಂತಿಲ್ಲ. ಏಕೆಂದರೆ 19 ರಾಜ್ಯಗಳಲ್ಲಿ ಬಿ.ಜೆ.ಪಿ. ಮತ್ತದರ ಮಿತ್ರ ಪಕ್ಷಗಳ ಸರಕಾರಗಳಿವೆ. ಗೋಹತ್ಯೆ ಮತ್ತು ಗೋವುಗಳ ಅಕ್ರಮ ಸಾಗಾಟದ ಹೆಸರಲ್ಲಿ ಅತಿ ಹೆಚ್ಚು ದಾಳಿಗಳೂ ಬಿಜೆಪಿ ಸರಕಾರಗಳಿರುವ ರಾಜ್ಯಗಳಲ್ಲಿ ನಡೆಯುತ್ತದೆಯೆಂಬುದು ಇನ್ನೂ ಸೋಜಿಗ. ಈ ದಾಳಿಗಳು (ಕಳೆದ ವರ್ಷ ಸುಪ್ರೀಮ್ ಕೋರ್ಟು) ದಾಳಿಗಳನ್ನು ತಡೆಗಟ್ಟಲು ಮತ್ತು ದಾಳಿಕೋರರ ಮೇಲೆ ಕಠಿಣ ಕ್ರಮಕೈಗೊಳ್ಳಲು ಆದೇಶಿಸಿದ ಬೆನ್ನಿಗೇ ನಡೆಯುತ್ತಿವೆ. ಎಲ್ಲಿಯವರೆಗೆಂದರೆ ಮೂರು ರಾಜ್ಯಗಳ ಮೇಲೆ ನ್ಯಾಯಾಂಗ ನಿಂದನೆಯ ಕೇಸುಗಳೂ ನಡೆಯುತ್ತಿವೆ. ಆದರೂ ದಾಳಿಗಳು ನಿಲ್ಲುತ್ತಿಲ್ಲ. ಈ ಕುರಿತು ಕೇಂದ್ರದೊಂದಿಗೆ ಕೇ ಳಿದಾಗಲೆಲ್ಲ ಕಾನೂನು ಮತ್ತು ಶಿಸ್ತು ಪಾಲನೆಯು ರಾಜ್ಯಗಳ ಹೊಣೆಗಾರಿಕೆಯಾಗಿದೆ ಯೆಂದು ಹೇಳಿ ನುಣುಚಿಕೊಳ್ಳುತ್ತಿದೆ. ರಾಜ್ಯಗಳಲ್ಲಿ ಕಾನೂನು ಮತ್ತು ಶಿಸ್ತು ಪಾಲನೆ ಕೆಡುತ್ತಿದೆಯಾದರೆ ಕೇಂದ್ರಕ್ಕೆ ಯಾವುದೇ ಹೊಣೆಗಾರಿಕೆಯಿಲ್ಲವೇ? ಹಾಗಿರುವಾಗ ಅದು ಆದೇಶ ಹೊರಡಿಸುವುದಿಲ್ಲ ವೇಕೆ? ದೇಶದಲ್ಲಿ ಎಷ್ಟೆಲ್ಲಾ ಗೋಮಾಂಸ ಮಾರಾಟಗಾರರು ಮತ್ತು ಗೋಮಾಂಸ ರಫ್ತು ಕಂಪೆನಿಗಳಿವೆಯೋ ಅವೆಲ್ಲವನ್ನೂ ಮುಸ್ಲಿಮೇತರ ಬಾಂಧವರೇ ನಡೆಸುತ್ತಾರೆ. ಅವುಗಳ ಪೈಕಿ ಕಂಪೆನಿಗಳ ಹೆಸರು ಮುಸ್ಲಿಮರಂತೆಯೇ ಇದ್ದರೂ ಅವುಗಳ ಮಾಲಕರು ಮುಸ್ಲಿಮೇತರರೇ ಆಗಿದ್ದಾರೆ. ಅವುಗಳ ವಿರುದ್ಧ ಗೋವುಗಳ ಹೆಸರಲ್ಲಿ ರಾಜ ಕೀಯ ನಡೆಸುವವರಾಗಲಿ ಗೋ ರಕ್ಷಕದಳದವ ರಾಗಲೀ ಮಾತಾಡುವುದೂ ಇಲ್ಲ. ಅವುಗಳ ಮೇಲೆ ದಾಳಿ ನಡೆಸುವುದೂ ಇಲ್ಲ. ಕೆಲವು ದಿವಸಗಳ ಹಿಂದೆ ದ.ಕ. ಜಿಲ್ಲೆಯ ವಿಟ್ಲ ಎಂಬಲ್ಲಿ ಪೊಲೀಸರು ಶಶಿ ಕಿರಣ್ ಎಂಬ ಹೆಸರಿನ ಬಜರಂಗದಳದ ಕಾರ್ಯಕರ್ತನನ್ನು ಬಂಧಿಸಿದರು. ಆತ ಗೋವುಗಳ ಕಳ್ಳಸಾಗಾಟ ನಡೆಸುತ್ತಿದ್ದ. ತನಿಖೆ ನಡೆಸಿದಾಗ, ಆತ ಹಗಲಲ್ಲಿ ಗೋ ರಕ್ಷಾದಳದಲ್ಲಿ ಕೆಲಸ ಮಾಡುತ್ತಿದ್ದಾನೆ, ರಾತ್ರಿ ಹೊತ್ತು ಜಾನುವಾರುಗಳ ಕಳ್ಳ ಸಾಗಾಟ ನಡೆಸುತ್ತಾನೆ ಎಂಬ ಸತ್ಯ ಬಯಲಾಯಿತು.
ಗೋಮಾಂಸ ಮಾರಾಟ ಮತ್ತು ರಫ್ತು ಮಾಡುವ ಹಿಂದೂ ಕಂಪೆನಿಗಳಿಗೆ ಹಿಂದುಗಳೇ ಕಳ್ಳಸಾಗಾಣಿಕೆ ಮಾಡುತ್ತಿರಬಹುದೆಂಬುದು ಸ್ಪಷ್ಟ. ಅದು ಕೂಡಾ ದೊಡ್ಡ ಪ್ರಮಾಣದಲ್ಲಿ. ಇವೆಲ್ಲವೂ ಸರಕಾರದ ಆಶ್ರಯವಿಲ್ಲದೆ ನಡೆಯಲು ಸಾಧ್ಯವಿಲ್ಲ. ಆದರೂ ಒಂದು ದನವನ್ನು ಸಾಕಲು ಮತ್ತು ಹಾಲು ಮಾರಾಟಕ್ಕಾಗಿ ಕೊಂಡು ಹೋಗುವ ಮುಸಲ್ಮಾನರನ್ನು ಥಳಿಸಿ ಕೊಲ್ಲಲಾಗುತ್ತದೆ. ಆದರೆ ದಿನಂಪ್ರತಿ ನೂರಾರು ಸಂಖ್ಯೆಯಲ್ಲಿ ಗೋವು ಒದಗಿಸುವವರ ಮತ್ತು ಕಡಿಯುವವರ ವಿರುದ್ಧ ಯಾವುದೇ ದಾಂಧಲೆ ನಡೆಯುವುದಿಲ್ಲ. ಅವರ ಮೇಲೆ ಯಾವುದೇ ನಿರ್ಬಂಧ ಹೇರಲಾಗುವುದಿಲ್ಲ, ಇದಕ್ಕೇನೆನ್ನಬೇಕು? ದೇಶದಲ್ಲಿ ಗೋಮಾಂಸ ಮಾರಾಟ ಮಾಡುವ ಅಥವಾ ಅದನ್ನು ತಿನ್ನು ವವರ ಮೇಲೆ ಬಿ.ಜೆ.ಪಿ. ಸರಕಾರಗಳು ನಿಷೇಧ ಹೇರಿವೆ ಮತ್ತು ವಿದೇಶಗಳಿಗೆ ರಫ್ತು ಮಾಡುವವರಿಗೆ ಮುಕ್ತ ಸ್ವಾತಂತ್ರ್ಯ ನೀಡಿ ಬಿಟ್ಟಿವೆಯೆಂದು ಭಾವಿಸಬೇಕೆ? ಈ ವರೆಗೆ ದೇಶದಲ್ಲಿ 85 ಕ್ಕಿಂತಲೂ ಹೆಚ್ಚು ಗುಂಪು ಹಿಂಸೆಯ ಪ್ರಕರಣ ನಡೆದಿದ್ದು 30-40 ಮಂದಿ ತಮ್ಮ ಪ್ರಾಣ ಕಳಕೊಂಡಿದ್ದಾರೆ. ಆದರೂ ಅದರ ಹೆಸರಲ್ಲಿ ರಾಜಕೀಯ ನಡೆಯುತ್ತಾ ಇದೆ. ದಾಳಿಗಳನ್ನು ಸಮರ್ಥಿಸಲಾಗುತ್ತದೆ. ಇದೇ ಸ್ಥಿತಿ ಮುಂದು ವರಿದರೆ ಗುಂಪು ಹಿಂಸೆಯು ಇಡೀ ದೇಶದಲ್ಲಿ ಅಂಟು ರೋಗದಂತೆ ವ್ಯಾಪಿಸಬಹುದು. ಅನಂತರ ಅದನ್ನು ನಿಯಂತ್ರಿಸುವುದು ಕಷ್ಟವಾಗಬಹುದು. ಹಾಗೆಂದು ದೇಶದಲ್ಲಿ ಅಸಂಖ್ಯ ಯುವಕರು ಉದ್ಯೋಗವಿಲ್ಲದೆ ಅಲೆದಾಡುತ್ತಿದ್ದಾರೆ. ಅವರನ್ನು ದುರುಪಯೋಗಪಡಿಸಿ ಗುಂಪು ದಾಳಿಗೆ ಬಳಸ ಲಾಗುತ್ತಿದೆ. ಅವರು ಸರಕಾರದೊಂದಿಗೆ ಉದ್ಯೋಗ ಕೇಳದಿರಲೆಂದು ಹೀಗೆ ಮಾಡಲಾಗುತ್ತಿದೆ. ಗೋಮಾಂಸದ ಹೆಸರಲ್ಲಿ ರಾಜಕೀಯ, ಗುಂಪು ಹಿಂಸೆ ಮತ್ತು ಗೋಮಾಂಸ ರಫ್ತಿಗೆ ಪ್ರೋತ್ಸಾಹ- ಈ ರೀತಿಯಲ್ಲಿ ಎಲ್ಲಿಯವರೆಗೆ ಜನಸಾಮಾನ್ಯರ ಕಣ್ಣಿಗೆ ಮಣ್ಣೆರಚಲಾಗುತ್ತದೋ?
(ಕೃಪೆ: ದಾವತ್)