ರೈತ ಪ್ರತಿಭಟನೆ| ಇಂದು ಕೇಂದ್ರ ಸರಕಾರದೊಂದಿಗಿನ ಆರನೆ ಸುತ್ತಿನ ಚರ್ಚೆಗೆ ರೈತ ನಾಯಕರಿಂದ ನಿರಾಕರಣೆ

0
456

ಸನ್ಮಾರ್ಗ ವಾರ್ತೆ

ನವದೆಹಲಿ: ಕೇಂದ್ರ ಸರಕಾರ ಜಾರಿಗೆ ತಂದಿರುವ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಯ ಹಿನ್ನೆಲೆಯಲ್ಲಿ, ಮಂಗಳವಾರ ರೈತರ ಭಾರತ್ ಬಂದ್ ಕರೆಗೆ ವ್ಯಾಪಕ ಬೆಂಬಲ ಲಭಿಸಿದ ಬೆನ್ನಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ರೈತರ ನಡುವೆ ನಡೆದ ಮಾತುಕತೆಯು ವಿಫಲವಾಗಿದೆ.

ಮಸೂದೆಯಲ್ಲಿ ತಿದ್ದುಪಡಿ ತರಲಾಗುವುದು ಎಂಬ ಗೃಹ ಸಚಿವರ ಪ್ರಸ್ತಾಪವನ್ನು ರೈತರು ತಿರಸ್ಕರಿಸಿದ್ದು, ಇಂದು ನಡೆಯಲಿರುವ ಮತ್ತೊಂದು ಸುತ್ತಿನ ಮಾತುಕತೆಗೆ ರೈತರು ನಿರಾಕರಿಸಿದ್ದರಿಂದಾಗಿ ಸರಕಾರ ಚರ್ಚೆಯನ್ನು ರದ್ದು ಪಡಿಸಿದೆ ಎಂಬುದಾಗಿ ವರದಿಯಾಗಿದೆ. ಅಲ್ಲದೇ, ರೈತರೊಂದಿಗಿನ ಮಾತುಕತೆಗೆ ಹೊಸ ಆಹ್ವಾನವನ್ನು ಸರಕಾರ ಕಳುಹಿಸಬಹುದು ಎಂದೂ ಹೇಳಲಾಗುತ್ತಿದೆ.

ಭಾರತ್ ಬಂದ್ ಘೋಷಿಸಿದ ಬೆನ್ನಿಗೆ ಗೃಹವಸಚುವರಿಂದ ಬಂದ ಚರ್ಚೆಯ ಆಹ್ವಾನವನ್ನು ರೈತರು ತಿರಸ್ಕರಿಸಿದ್ದರು. ಆದರೆ, ರಾತ್ರಿ ಅಮಿತ್ ಶಾ ಮತ್ತು ರೈತ ಮುಖಂಡರ ನಡುವೆ ನಡೆದ ಸಭೆಯಲ್ಲಿ, ಕೃಷಿ ಕಾನೂನನ್ನು ಸರಕಾರದ ಹಿಂಪಡೆಯುವಿಕೆಯ ಕುರಿತು ಹೌದು/ಇಲ್ಲ ಎಂಬ ನೇರ ಮಾತುಗಳಲ್ಲಿ ಉತ್ತರವನ್ನು ಬಯಸುವುದಾಗಿ ರೈತರು ಮಾಧ್ಯಮಗಳಿಗೆ ತಿಳಿಸಿದ್ದರು. ಆದರೆ, ಸರಕಾರದ ತಿದ್ದುಪಡಿ ಭರವಸೆಯನ್ನು ರೈತರು ಮತ್ತೊಮ್ಮೆ ತಿರಸ್ಕರಿಸಿದ್ದಾರೆ.