ಅಮೆರಿಕಾದ ಕದನ ವಿರಾಮ ಪ್ರಸ್ತಾಪಕ್ಕೆ ಬಹುತೇಕ ಒಪ್ಪಿಕೊಂಡ ಹಮಾಸ್

0
385

ಸನ್ಮಾರ್ಗ ವಾರ್ತೆ

ಅಮೆರಿಕ ಮುಂದಿಟ್ಟಿರುವ 60 ದಿನಗಳ ಕದನ ವಿರಾಮ ಪ್ರಸ್ತಾಪಕ್ಕೆ ಹಮಾಸ್ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದೆ. ಇಸ್ರೇಲ್ ಪತ್ರಿಕೆಗಳು ಈ ಕುರಿತಂತೆ ವರದಿ ಮಾಡಿವೆ. ಹಮಾಸ್ ನ ಜೊತೆಗೆ ಸಂಬಂಧ ಇರುವ ಇಸ್ಲಾಮಿಕ್ ಜಿಹಾದ್ ಈ ಕುರಿತಂತೆ ಚರ್ಚೆಗೆ ತನ್ನ ಆಸಕ್ತಿಯನ್ನು ವ್ಯಕ್ತಪಡಿಸಿದೆ ಇಸ್ರೇಲ್ ಪತ್ರಿಕೆಗಳು ಬರೆದಿವೆ.

ಈ ಕದನ ವಿರಾಮದ ಪ್ರಸ್ತಾಪವು ಸಂಪೂರ್ಣ ಕದನ ವಿರಾಮದೆಡೆಗೆ ಸಾಗಬೇಕು ಎಂಬ ಷರತ್ತನ್ನು ಹಮಾಸ್ ಮುಂದಿಟ್ಟಿದೆ. ಮಧ್ಯಸ್ಥಿಕೆದಾರರ ಮುಖಾಂತರ ಹಮಾಸ್ ಈ ಷರತ್ತನ್ನು ಮುಂದಿಟ್ಟಿದೆ ಎಂದು ಹೇಳಲಾಗಿದೆ.

ಇಸ್ರೇಲ್ ಮತ್ತು ಇರಾನ್ ನಡುವಿನ 12 ದಿನಗಳ ಯುದ್ಧಕ್ಕೆ ಮಧ್ಯಸ್ಥಿಕೆ ವಹಿಸಿ ಯಶಸ್ವಿಯಾದ ಅಮೆರಿಕ ಅದರ ಪ್ರೇರಣೆಯಿಂದಲೇ ಈ ಕದನ ವಿರಾಮದಕ್ಕೂ ಮಧ್ಯಸ್ಥಿಕೆ ವಹಿಸಲು ಮುಂದಾಗಿದೆ. ಒಂದು ವಾರದಲ್ಲಿ ಗಾಝಾದಲ್ಲಿ ಕದನ ವಿರಾಮ ಏರ್ಪಡಿಸುವುದಾಗಿ ಟ್ರಂಪ್ ಘೋಷಿಸಿದ್ದಾರೆ. ಜೂನ್ 6 ರಂದು ಇಸ್ರೇಲ್ ಪ್ರಧಾನಿ ನೆತನ್ಯಾಹು ಅಮೆರಿಕಕ್ಕೆ ಭೇಟಿ ನೀಡಲಿದ್ದಾರೆ.

ಇದೇ ವೇಳೆ ಗಾಝಾದಲ್ಲಿ ಹಮಾಸ್ ನ ಕೋರಿಕೆಯಂತೆ ಸಂಪೂರ್ಣ ಕದನ ವಿರಾಮಕ್ಕೆ ತಾನು ಸಿದ್ಧ ಇಲ್ಲ ಎಂದು ನೆತನ್ಯಾಹು ಈಗಾಗಲೇ ಹೇಳಿದ್ದಾರೆ.