ಸನ್ಮಾರ್ಗ ವಾರ್ತೆ-
ಕೇರಳ, ಡಿ. 10: ಮಲಪ್ಪುರಂ ಸಮೀಪ ರಸ್ತೆ ಬದಿ ಒಣಗಲು ಹಾಕಿದ್ದ ಈರುಳ್ಳಿಯ ಮೇಲೆ ಕಾರು ಹರಿಸಿದ ನಗರಸಭೆ ಕೌನ್ಸಿಲರಿಗೆ ಥಳಿಸಲಾಗಿದೆ. ಮಲಪ್ಪುರಂ ತಿರೂರಂಗಾಡಿ ನಗರಸಭೆಯ ಕೌನ್ಸಿಲರ್ ಮೊಯ್ದಿನ್‍ರ ಕಾರು ಈರುಳ್ಳಿ ಮೇಲೆ ಹರಿದು ಹೋಗಿತ್ತು. ಸೋಮವಾರ ಹತ್ತೂವರೆ ಗಂಟೆಗೆ ಚೆಮ್ಮಾಡ್ ನಗರದಲ್ಲಿ ಘಟನೆ ನಡೆಯಿತು. ಕೌನ್ಸಿಲರ್ ತನ್ನ ಕಾರನ್ನು ರಸ್ತೆ ಬದಿ ಪಾರ್ಕ್‍ಮಾಡಿದ್ದರು. ಅಲ್ಲಿಗೆ ಓಡಿ ಬಂದ ಅಂಗಡಿಯಾತ ಮತ್ತಿಬ್ಬರು ಸೇರಿ ಕೌನ್ಸಿಲರ್ ಗೆ ಹೊಡೆದರು. ಈ ತರಕಾರಿ ಹೋಲ್‍ಸೇಲ್ ವ್ಯಾಪಾರಿ ಈರುಳ್ಳಿ ಒಣಗಲು ಹಾಕಿದ್ದರು.
ವಾಹನ ಸಂಚಾರ ದಟ್ಟಣೆಯಾದಾಗ ಕೌನ್ಸಿಲರ್ ಕಾರನ್ನು ರಸ್ತೆ ಬದಿ ಪಾರ್ಕ್ ಮಾಡಲು ಬಂದಾಗ ಈರುಳ್ಳಿ ಅವರ ಗಮನಕ್ಕೆ ಬಂದಿರಲಿಲ್ಲ. ನಷ್ಟ ಪರಿಹಾರ ಕೊಡಬೇಕೆಂದು ಅಂಗಡಿಯಾತ ಕೌನ್ಸಿಲರ್ ರನನ್ನು ನಿಂದಿಸಿದ್ದರು. ನಂತರ ಅಂಗಡಿಯ ಇಬ್ಬರು ಮತ್ತು ಆಟೊಚಾಲಕ ಕೌನ್ಸಿಲರ್ ಗೆ ಪೆಟ್ಟುಕೊಟ್ಟಿದ್ದಾರೆ ಎಂದು ಕೌನ್ಸಿಲರ್ ದೂರಿನಲ್ಲಿ ತಿಳಿಸಿದ್ದಾರೆ. ಕೌನ್ಸಿಲರ್ ದೂರಿನಲ್ಲಿ ಹಲ್ಲೆ ನಡೆಸಿದವರನ್ನು ಪೊಲೀಸರು ಬಂಧಿಸಿದ್ದಾರೆ.












