ಸನ್ಮಾರ್ಗ ವಾರ್ತೆ
ಹಾಸನ: ಜಮಾಅತೆ ಇಸ್ಲಾಮೀ ಹಿಂದ್ ಹಾಸನ ಶಾಖೆಯ ವತಿಯಿಂದ ಸುಮಾರು 600 ಕ್ಕೂ ಹೆಚ್ಚು ಕುಟುಂಬಗಳಿಗೆ 1000 ರೂ ಬೆಲೆಯುಳ್ಳ ದಿನಸಿ ವಸ್ತುಗಳನ್ನು ಹೊಂದಿರುವ ರಮಝಾನ್ ಕಿಟ್ ಗಳನ್ನು ಅರ್ಹ ಬಡ ಕುಟುಂಬಗಳಿಗೆ ವಿತರಿಸಲಾಯಿತು.
ಜಮಾಅತೆ ಇಸ್ಲಾಮೀ ಹಿಂದ್ ಹಾಸನದ ಸ್ಥಾನೀಯ ಅಧ್ಯಕ್ಷರಾದ ಸದ್ರುಲ್ಲಾ ಖಾನ್, ಸೋಲಿಡಾರಿಟಿ ಯೂಥ್ ಮೂಮೆಂಟ್ ಹಾಸನ ಅಧ್ಯಕ್ಷ ಫರೀದ್ ಅಹ್ಮದ್ ಖಾನ್, ಹೆಚ್.ಆರ್.ಎಸ್ ಹಾಸನದ ಗ್ರೂಪ್ ಲೀಡರ್ ತನ್ವೀರ್ ಪಾಷ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದು, ಸಹಕಾರ ನೀಡಿದರು.













