ಹಥ್ರಾಸ್: ಪ್ರತಿಭಟನೆಗೆ ಕರೆ ನೀಡಿದ ಪ್ರತಿಪಕ್ಷ: ಇಂಡಿಯಾ ಗೇಟಿನಲ್ಲಿ ನಿಷೇಧಾಜ್ಞೆ

0
491

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಅ.2: ಉತ್ತರ ಪ್ರದೇಶ ಹಥ್ರಾಸ್‍ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಕೊಲೆಯನ್ನು ವಿರೋಧಿಸಿ ದಿಲ್ಲಿಯಲ್ಲಿಯೂ ಪ್ರತಿಭಟನೆ ತೀವ್ರಗೊಂಡಿದೆ. ಗುಜರಾತ್ ಶಾಸಕ, ಸಾಮಾಜಿಕ ಕಾರ್ಯಕರ್ತ ಜಿಗ್ನೇಶ್ ಮೇವಾನಿ ಇಂಡಿಯ ಗೇಟಿನಲ್ಲಿ ಒಗ್ಗಟ್ಟಿನ ಪ್ರತಿಭಟನೆಗೆ ಕರೆ ನೀಡಿದ್ದಾರೆ. ‘ವಿದ್ ಪೀಪಲ್ ಆಫ್ ಇಂಡಿಯಾ’ ಎಂಬ ಸಂಘಟನೆಯ ಅಧೀನದಲ್ಲಿ ಸಂಜೆ ಐದು ಗಂಟೆಗೆ ಪ್ರತಿಭಟನಾ ಸಂಗ ನಡೆಯಲಿದೆ ಎಂದು ತಿಳಿಸಿದ್ದಾರೆ. ಕಾಂಗ್ರೆಸ್, ಎಎಪಿ ನಾಯಕರೂ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ.

ಆದರೆ, ಇಂಡಿಯಾ ಗೇಟಿನಲ್ಲಿ ನಿಷೇಧಾಜ್ಞೆ ಹೇರಲಾಗಿದ್ದು, ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಹಾಗೂ ಯಾವುದೇ ಪ್ರತಿಭಟನೆಗಳನ್ನು ನಡೆಸದಂತೆ ಇಲ್ಲಿ ಆದೇಶ ಹೊರಡಿಸಲಾಗಿದೆ.

ಬಾಲಕಿಯ ಕುಟುಂಬಕ್ಕೆ ಸರಕಾರ ಬೆದರಿಕೆ ಹಾಕುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ. ನಿಷೇಧಾಜ್ಞೆ ಘೋಷಿಸಿ, ಕುಟುಂಬವನ್ನು ಮೂಲೆಗೊತ್ತಿ ಕೇಸನ್ನು ಇಲ್ಲದಂತೆ ಮಾಡಲು ಉತ್ತರ ಪ್ರದೇಶ ಸರಕಾರ ಮತ್ತು ಪೊಲೀಸರು ಯತ್ನಿಸುತ್ತಿದ್ದಾರೆ ಎಂದು ಪ್ರತಿಪಕ್ಷಗಳು ಟೀಕಿಸಿವೆ.

ಬಾಲಕಿ ಅತ್ಯಾಚಾರಕ್ಕೊಳಗಾಗಿಲ್ಲ ಎಂದು ಉತ್ತರ ಪ್ರದೇಶ ಪೊಲೀಸ ಅಡಿಶನಲ್ ಡೈರಕ್ಟರ್ ಜನರಲ್ ಹೇಳುತ್ತಿದ್ದಾರೆ. ಮಾಧ್ಯಮಗಳು ಮತ್ತು ಉಳಿದೆಲ್ಲರೂ ಹೋಗುತ್ತಾರೆ. ನಾವು ಮಾತ್ರ ಇರುತ್ತೇವೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಬಾಲಕಿಯ ಕುಟುಂಬದವರಿಗೆ ಬೆದರಿಕೆ ಹಾಕಿದ್ದು ವರದಿಯಾಗಿತ್ತು.

ಕಾನೂನು ನೆರವಿಗೆ ಮುಂದೆ ಬಂದ ನಿರ್ಭಯಾ ಪ್ರಕರಣದ ವಕೀಲೆ ಸೀಮಾ ಕುಶ್ವಾಹರನ್ನು ಕೂಡ ಹಥ್ರಾಸ್‍ಗೆ ಹೋಗಲು ಪೊಲೀಸರು ಬಿಟ್ಟಿಲ್ಲ. ಇಂಡಿಯಾ ಗೇಟಿನ ಪ್ರತಿಭಟನೆಯಲ್ಲಿ ವಿದ ಪೀಪಲ್ ಆಫ ಇಂಡಿಯ ಸಂಘಟನೆಯ ಅಡಿಯಲ್ಲಿ ಪ್ರತಿಪಕ್ಷ ನಾಯಕರು ಭಾಗವಹಿಸುತ್ತಾರೆ ಎನ್ನಲಾಗಿದೆ. ಆದುದರಿಂದ ಇಂಡಿಯಾ ಗೇಟಿನಲ್ಲಿ ನಿಷೇಧಾಜ್ಞೆ ಘೋಷಿಸಲಾಗಿದೆ. ಜಂತರ್‌ಮಂತರ್‌ನಲ್ಲಿ ಧರಣಿ ನಡೆಸುವುದಾಗಿ ಪ್ರಿಯಾಂಕಾ ಗಾಂಧಿ ಹೇಳಿದರೂ ಪೊಲೀಸರು ಅನುಮತಿ ನೀಡಿಲ್ಲ.