ಹಿಂದೂಗಳ ಅಸ್ತಿತ್ವಕ್ಕಾಗುವ ಹಾನಿಯನ್ನು ತಡೆಯಲು 2-3 ಮಕ್ಕಳನ್ನು ಹೆರಬೇಕು: ವಿಹೆಚ್‌ಪಿ ನಾಯಕ ಮಿಲ್ಲಿಂದ್ ಪರಾಂಡೆ

0
15

ಸನ್ಮಾರ್ಗ ವಾರ್ತೆ

ಮಧ್ಯಪ್ರದೇಶ: ದೇಶದಲ್ಲಿ ಹಿಂದೂಗಳ ಸಂಖ್ಯೆ ಕಡಿಮೆಯಾಗುತ್ತಿದ್ದು ಹಿಂದೂಗಳು ಕನಿಷ್ಠ ಎರಡರಿಂದ ಮೂರು ಮಕ್ಕಳನ್ನು ಹೊಂದಲೇಬೇಕು ಎಂದು ವಿಶ್ವ ಹಿಂದೂ ಪರಿಷದ್ ನಾಯಕ ಮಿಲ್ಲಿಂದ್ ಪರಾಂಡೆ ಕರೆ ನೀಡಿದ್ದಾರೆ. ಹಿಂದೂಗಳ ಜನಸಂಖ್ಯೆ ಕುಸಿತವಾಗುವುದು ಅಸ್ತಿತ್ವಕ್ಕೆ ಅಪಾಯ ಎಂದವರು ಹೇಳಿದ್ದಾರೆ. ಮಧ್ಯಪ್ರದೇಶದ ಖಂಡ್ವಾದಲ್ಲಿ ವಿಶ್ವ ಹಿಂದೂ ಪರಿಷದ್ ಹಾಗೂ ಭಜರಂಗದಳ ಆಯೋಜಿಸಿದ ಹಿಂದೂ ಯುವಜನ ಸಮ್ಮೇಳನದಲ್ಲಿ ಅವರು ಮಾತಾಡುತ್ತಿದ್ದರು.

ಮದುವೆಯಾದ ಮೇಲೆ ಒಂದು ಕುಟುಂಬದಲ್ಲಿ ಎರಡು ಮೂರು ಮಕ್ಕಳಿರಬೇಕು ಎಂಬುದನ್ನು ಪ್ರತಿಯೊಬ್ಬ ಹಿಂದೂ ಯುವಕರು ನೆನಪಿಡಬೇಕು. ಹಿಂದೂಗಳ ಸಂಖ್ಯೆ ಕಡಿಮೆಯಾದರೆ ಸಮಸ್ಯೆಯಾಗಬಹುದು. ವ್ಯಕ್ತಿಗೆ ಮಾತ್ರವಲ್ಲ ಸಮಾಜದ ಸುರಕ್ಷೆಗೆ ಕೂಡ ಸಮಸ್ಯೆಯಾಗುತ್ತದೆ ಆದುದರಿಂದ ಪ್ರತಿಯೊಂದೂ ಹಿಂದೂ ಕುಟುಂಬ ಎರಡ್ಮೂರು ಮಕ್ಕಳನ್ನು ಹೊಂದಬೇಕಾಗಿದೆ ಎಂದು ಅವರು ಹೇಳಿದರು. ಕಾಲನಿ ಸಂಪ್ರದಾಯ ತಮ್ಮ ಪೂರ್ವಿಕರ ಬಗ್ಗೆ ಲಜ್ಜೆ ಉಂಟು ಮಾಡಲು ಕಾರಣವಾಯಿತು. ದೇಶದಲ್ಲಿ ಹಿಂದೂ ಜನಸಂಖ್ಯೆ ಕಡಿಮೆಯಾಗುವುದು ದೇಶದ ಅಖಂಡತೆಗೆ ಹಾನಿಕರ ಎಂದು ಅವರು ಹೇಳಿದರು.

LEAVE A REPLY

Please enter your comment!
Please enter your name here