ಹ್ಯುಮಾನಿಟೇರಿಯನ್ ರಿಲೀಫ್ ಸೊಸೈಟಿಯಿಂದ ವಿಪತ್ತು ನಿರ್ವಹಣಾ ತರಬೇತಿ ಶಿಬಿರ

0
523

ಸನ್ಮಾರ್ಗ ವಾರ್ತೆ

ಕೋಲಾರ: ಜಮಾಅತೆ ಇಸ್ಲಾಮಿ ಹಿಂದ್ ಹ್ಯುಮಾನಿಟೇರಿಯನ್ ರಿಲೀಫ್ ಸೊಸೈಟಿ ವತಿಯಿಂದ ದಿನಾಂಕ 19, 20 ಮತ್ತು 21 ಮಾರ್ಚ್ 2021ರಂದು ಬೆಂಗಳೂರು ಮತ್ತು ಕೋಲಾರ ವಲಯದ ಸದಸ್ಯರಿಗಾಗಿ ಮೊದಲನೇ ಹಂತದ ಮೂರು ದಿನಗಳ ವಿಪತ್ತು ನಿರ್ವಹಣಾ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.

ಈ ಶಿಬಿರದಲ್ಲಿ ಕೋಲಾರ, ಮೈಸೂರು ರಸ್ತೆ ಬೆಂಗಳೂರು, ಯಶವಂತಪುರ, ಎಂ.ಎಸ್. ಪಾಲ್ಯ ಮುಂತಾದ ಸ್ಥಳಗಳಿಂದ 25 ಸದಸ್ಯರು ಪಾಲ್ಗೊಂಡಿದ್ದರು. ಈ ಮೂರು ದಿನದ ಶಿಬಿರದಲ್ಲಿ ಭಾಗವಹಿಸಿದವರಿಗೆ ನುರಿತ ತರಬೇತುದಾರರಾದ ಅಮೀರ್ ಸಿದ್ದೀಕ್, ಮುನೀರ್ ಪದ್ರೆಂಗಿ, ಅಬ್ರಾರ್ ಅಹ್ಮದ್ ಅರೇಹಳ್ಳಿ ಮತ್ತು ಅಮೀರ್ ಜಾನ್ ತೀರ್ಥಹಳ್ಳಿರವರ ನೇತೃತ್ವದಲ್ಲಿ ಎಕ್ಯೂಪ್‌ಮೆಂಟ್ಸ್ ನಾಟ್ಸ್, ರೋಪ್ ಲ್ಯಾಡರ್ ಕ್ಲೆಂಬಿಂಗ್, ಕೇವ್ ರೆಸ್ಕ್ಯೂ, ರ್ಯಾ‌‌ಪ್ಲಿಂಗ್ ಮುಂತಾದ ವಿಷಯದಲ್ಲಿ ತರಬೇತಿ ನೀಡಲಾಯಿತು.