ಕ್ಷಮೆ ಯಾಚಿಸುವುದಿಲ್ಲ, ನನ್ನ ಹೆಸರು ರಾಹುಲ್ ಸಾವರ್‍ಕರ್ ಎಂದಲ್ಲ- ರಾಹುಲ್ ಗಾಂಧಿ

0
691

ಸನ್ಮಾರ್ಗ ವಾರ್ತೆ-

ಹೊಸದಿಲ್ಲಿ, ಡಿ.14: ರೇಪ್ ಇನ್ ಇಂಡಿಯ ಹೇಳಿಕೆಗೆ ಕ್ಷಮೆ ಯಾಚಿಸುವುದಿಲ್ಲ ಎಂದು ರಾಹುಲ್ ಗಾಂಧಿ ಪುನರುಚ್ಚರಿಸಿದ್ದಾರೆ. ನನ್ನ ಹೆಸರು ರಾಹುಲ್ ಸಾವರ್‍ಕರ್ ಎಂದಲ್ಲ ಎಂದು ಅವರು ಹೇಳಿದರು. ಮೋದಿ ದೇಶದೊಂದಿಗೆ ಕ್ಷಮೆ ಯಾಚಿಸಬೇಕೆಂದು ರಾಹುಲ್ ಆಗ್ರಹಿಸಿದರು. ಬ್ರಿಟಿಷರೊಂದಿಗೆ ಕ್ಷಮೆ ಯಾಚಿಸಿದ ಪಿಡಿ ಸಾವರ್‍ಕರ್ ರ ಚರಿತ್ರೆಯನ್ನು ರಾಹುಲ್ ನೆನಪಿಸುವಂತೆ ರಾಮ್ ಲೀಲ ಮೈದಾನದಲ್ಲಿ ನಡೆದ ಕಾಂಗ್ರೆಸ್‍ನ ಭಾರತ್ ಬಚಾವೊ ರಾಲಿಯಲ್ಲಿ ಹೇಳಿದರು.

ಧರ್ಮಗಳನ್ನು ಪರಸ್ಪರ ವಿಭಜಿಸುವುದು ಕೇಂದ್ರ ಸರಕಾರದ ಯತ್ನವಾಗಿದೆ. ಅಸ್ಸಾಂ ,ಮಿಝೋರಂ, ಮಣಿಪುರ, ನಾಗಲೆಂಡ್, ಅರುಣಾಚಲ ಪ್ರದೇಶಗಳಲ್ಲಿ ಹೋದರೆ ಮೋದಿ ಏನು ಮಾಡಿದ್ದಾರೆ ಎನ್ನುವುದು ಗೊತ್ತಾಗುತ್ತದೆ. ಈ ಪ್ರದೇಶ ಉರಿಯುತ್ತಿದೆ ಎಂದು ರಾಹುಲ್ ಆರೋಪಿಸಿದರು. ದೇಶದ ಜಿಡಿಪಿ ಬೆಳವಣಿಗೆ ಶೇ. 4ಕ್ಕೆ ಕುಸಿದಿದೆ. ಮೋದಿ ಭಾರತದ ಅರ್ಥವ್ಯವಸ್ಥೆಯನ್ನು ನಾಶಪಡಿಸಿದರು. ಅರ್ಥವ್ಯವಸ್ಥೆಯ ಕುಸಿತವನ್ನು ಇನ್ನೂ ಪರಿಹರಿಸಲು ಆಗಿಲ್ಲ ಎಂದು ರಾಹುಲ್ ಆರೋಪಿಸಿದರು.