ಇಂಡಿಯ ಸಖ್ಯಕ್ಕೆ ಬೇರೆ ಹೆಸರು ಸೂಚಿಸಿದ್ದೆ ಯಾರೂ ಕ್ಯಾರ್ ಮಾಡಲಿಲ್ಲ; ನಿತೀಶ್ ಕುಮಾರ್

0
125

ಸನ್ಮಾರ್ಗ ವಾರ್ತೆ

ಪಟ್ನಾ, ಜ. 31: ಇಂಡಿಯ ಕೂಟದಿಂದ ಹೊರಬಂದ ಕಾರಣವನ್ನು ನಿತೀಶ್ ಕುಮಾರ್ ಹೇಳಿದ್ದಾರೆ. ಅದರಲ್ಲಿ ಅವರು ರಾಹುಲ್ ಗಾಂಧಿ ಮತ್ತು ಇಂಡಿಯ ಸಖ್ಯದ ವಿರುದ್ಧ ದೊಡ್ಡ ದಾಳಿ ಮಾಡಿದ್ದಾರೆ.

ಪ್ರತಿಪಕ್ಷ ಸಖ್ಯಕ್ಕೆ ಇಂಡಿಯ ಎಂಬ ಹೆಸರು ಬೇಡ ಎಂದು ಹೇಳಿದ್ದೆ. ಸಖ್ಯಕ್ಕಾಗಿ ಇನ್ನೊಂದು ಹೆಸರನ್ನು ಸೂಚಿಸಿದ್ದೆ. ಆದರೆ ಅವರು ಇಂಡಿಯ ಹೆಸರಿನಲ್ಲಿ ಗಟ್ಟಿಯಾಗಿ ನಿಂತರು ಎಂದು ನಿತೀಶ್ ಕುಮಾರ್ ಹೇಳಿದರು.

“ನಾನು ಕಠಿಣ ಪ್ರಯತ್ನ ಮಾಡಿದೆ. ಆದರೆ ಅವರು ಏನೂ ಮಾಡಲಿಲ್ಲ. ಸಖ್ಯದ ಸದಸ್ಯ ಪಾರ್ಟಿಗಳು ಎಷ್ಟು ಸೀಟಿನಲ್ಲಿ ಸ್ಪರ್ಧಿಸಬೇಕೆಂಬ ವಿಷಯದಲ್ಲಿ ಇದುವರೆಗೆ ತೀರ್ಮಾನ ಮಾಡಲಿಲ್ಲ. ಆದುದರಿಂದ ಇಂಡಿಯ ಸಖ್ಯ ಬಿಟ್ಟು ಬಂದೆ. ಬಿಹಾರ ಜನರಿಗಾಗಿ ಪುನಃ ಕೆಲಸ ಮಾಡುವೆ ಎಂದು ನಿತೀಶ್ ಕುಮಾರ್ ಹೇಳಿದರು.

ರಾಹುಲ್ ಗಾಂಧಿ ಬಿಹಾರದ ಜಾತಿ ಜನಗಣತಿಯ ನಕಲಿ ಕ್ರೆಡಿಟ್ ಎತ್ತಲು ಪ್ರಯತ್ನಿಸುತ್ತಿದ್ದಾರೆ ಎಂದು ನಿತೀಶ್ ಆರೋಪಿಸಿದರು. ಜಾತಿ ಜನಗಣತಿ ನಡೆಸಿದ್ದನ್ನು ಅವರು ಮರೆತರು. 2019-20ರಲ್ಲಿ ಒಂಬತ್ತು ಪಾರ್ಟಿಯ ಉಪಸ್ಥಿತಿಯಲ್ಲಿ ನಾನಿದು ಶುರುಮಾಡಿದ್ದು. ನಡೆದು ಹೋದ ಒಂದು ವಿಷಯದಲ್ಲಿ ಕ್ರೆಡಿಟ್ ತೆಗೆಯುವ ಅವರ ಕುರಿತು ಏನು ಹೇಳುವುದು ಎಂದು ನಿತೀಶ್ ಪ್ರಶ್ನಿಸಿದರು.

ಇದರ ನಡುವೆ ನಿತೀಶ್ ಕುಮಾರ್ ಬಿಜೆಪಿಗೆ ಸೇರಿ ಬಿಹಾರದಲ್ಲಿ ಸರಕಾರ ಮಾಡಿದ್ದಕ್ಕೆ ಜೆಡಿಯು ಕಾಂಗ್ರೆಸನ್ನು ಧೂಷಿಸುತ್ತಿದೆ. ಇಂಡಿಯ ಸಖ್ಯದಲ್ಲಿ ಪ್ರಧಾನಿಯಾಗಿ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಲ್ಲಿಕಾರ್ಜುನ ಖರ್ಗೆಯವರನ್ನ ಸೂಚಿಸಿದ್ದು ಸಖ್ಯದ ಸಂಚನ್ನು ಹೊರತಂದಿತು ಎಂದು ಜೆಡಿಯುನ ಕೆಸಿ ತ್ಯಾಗಿ ಆರೋಪಿಸಿದರು. ನಿತೀಶ್‍ರ ರಾಜಕೀಯ ನಿಲುವನ್ನು ಓತಿಕ್ಯಾತನಂತೆ ಬಣ್ಣ ಬದಲಾಯಿಸಿದ್ದು ಎಂದು ಕಾಂಗ್ರೆಸ್ ಹೇಳಿದೆ.