ಫೆಲೆಸ್ತೀನಿ ಶಾಲೆಗಳಲ್ಲಿ ಇಸ್ರೇಲ್ ಪಠ್ಯಕ್ರಮ ತುರುಕುವ ಯತ್ನ: ಅಧಿಕಾರಿಗಳಿಂದ ಶಾಲೆ ಮುಚ್ಚುವ ಬೆದರಿಕೆ!

0
25

ಸನ್ಮಾರ್ಗ ವಾರ್ತೆ

ಜೆರುಸಲೇಮ್:ಫೆಲೆಸ್ತೀನಿನಲ್ಲಿ ಹೊಸ ಶೈಕ್ಷಣಿಕ ವರ್ಷ ಸೆಪ್ಟೆಂಬರ್ ಒಂದರಿಂದ ಆರಂಭವಾಗಲಿದ್ದು, ಪೂರ್ವ ಜೆರುಸಲೇಮ್‌ನ 6 ಶಾಲೆಗಳಲ್ಲಿ ಇಸ್ರೇಲ್ ತನ್ನ ಪಠ್ಯಪುಸ್ತಕವನ್ನು ಹೇರುವ ಪ್ರಯತ್ನ ನಡೆಸುತ್ತಿದೆ ಎಂಬ ಆರೋಪ ಕೇಳಿಬಂದಿದೆ. 6 ಫೆಲೆಸ್ತೀನಿಯನ್ ಶಾಲೆಗಳಲ್ಲಿ ಇಸ್ರೇಲಿ ಪಠ್ಯವನ್ನು ಅಳವಡಿಸಲು ಬಲವಂತಪಡಿಸುತ್ತಿರುವ ಪ್ರಯತ್ನಗಳು ನಡೆಯುತ್ತಿದೆ.

ತಮ್ಮ ಪಠ್ಯಕ್ರಮವನ್ನು ಒಪ್ಪಿಕೊಳ್ಳದಿದ್ದರೆ ಶಾಲೆಗಳನ್ನು ಮುಚ್ಚುವ ಅಥವಾ ವಿದ್ಯಾರ್ಥಿಗಳಿಗೆ ನೀಡುವ ಸ್ಕಾಲರ್‌ಶಿಪ್ ನಂತಹ ಸೌಲಭ್ಯಗಳನ್ನು ಕಡಿತಗೊಳಿಸುವುದಾಗಿ ಇಲ್ಲಿನ ಇಸ್ರೇಲಿ ಅಧಿಕಾರಿಗಳು ಬೆದರಿಕೆ ಹಾಕುತ್ತಿದ್ದಾರೆ. ‘ಅಲ್ ಈಮಾನ್’ ಎಂಬ ಹೆಸರಲ್ಲಿ 5 ಶಾಲೆಗಳಿದ್ದು ಇನ್ನೊಂದು ‘ಅಬ್ರಹಮಿಕ್’ ಕಾಲೇಜು ಆಗಿದೆ. ಈವರೆಗೆ ಈ ಶಾಲೆಗಳಿಗೆ ಶಾಶ್ವತ ಪರ್ಮಿಷನ್ ನೀಡಲಾಗಿತ್ತು. ಇದೀಗ ಈ ಪರ್ಮಿಷನ್ ಅವಧಿಯನ್ನು ಒಂದು ವರ್ಷಕ್ಕೆ ಮಿತಿ ಗೊಳಿಸಲಾಗಿದೆ. ಒಂದು ವೇಳೆ ಇಸ್ರೇಲಿ ಪಠ್ಯನೀತಿಯನ್ನು ಅಳವಡಿಸದಿದ್ದರೆ ಅನುಮತಿಯನ್ನು ರದ್ದುಗೊಳಿಸುವುದಾಗಿ ಬೆದರಿಕೆ ಹಾಕಲಾಗುತ್ತಿದೆ.

ಫೆಲೆಸ್ತೀನಿಯನ್ ಪಠ್ಯಕ್ರಮದ ಬದಲು ಇಸ್ರೇಲ್ ಪಠ್ಯಕ್ರಮವನ್ನು ಅಳವಡಿಸಿಕೊಳ್ಳಬೇಕು ಎಂದು ಒತ್ತಡ ಹೇರಲಾಗುತ್ತಿದೆ. ಇದೀಗ ಈ ಶಾಲೆಗಳಿಗೆ ಒಂದೋ ಇಸ್ರೇಲ್ ಸಿಲೆಬಸ್ ಅಳವಡಿಸುವ ಅಥವಾ ಶಾಲೆಗಳನ್ನೇ ಮುಚ್ಚುವ ಭೀತಿ ಎದುರಾಗಿದೆ.