ಮೋದಿ ನೇತೃತ್ವದಲ್ಲಿ ರಾಷ್ಟ್ರೀಯ ಗಂಗಾ ಕೌನ್ಸಿಲ್ ಒಂದು ಬಾರಿಯೂ ಸಭೆ ಸೇರಿಲ್ಲ: ಆರ್ ಟಿ ಐ ಬಹಿರಂಗ, ಕೇಂದ್ರಕ್ಕೆ ತೀವ್ರ ಮುಖಭಂಗ

0
1041

ಕನ್ನಡಕ್ಕೆ: ಆಯಿಷತುಲ್ ಅಫೀಫಾ

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ರಾಷ್ಟ್ರೀಯ ಗಂಗಾ ಕೌನ್ಸಿಲ್ (ಏನ್ ಜಿ ಸಿ)ನ ಒಂದು ಸಭೆಯು ಇದುವರೆಗೆ ನಡೆದಿಲ್ಲ . ದಿ ವೈರ್ ಸಲ್ಲಿಸಿದ ಮಾಹಿತಿ ಹಕ್ಕು ಪ್ರಶ್ನೆಯಡಿಯಲ್ಲಿ ಇದು ಬಹಿರಂಗವಾಗಿದೆ. ನಿಯಮಾವಳಿಗಳ ಪ್ರಕಾರ, ಏನ್ ಜಿ ಸಿ ಪ್ರತಿವರ್ಷ ಒಮ್ಮೆಯಾದರೂ ಸಭೆ ನಡೆಸಬೇಕು.

ಅಕ್ಟೋಬರ್ 2016 ರಲ್ಲಿ ಎನ್ ಜಿ ಸಿ ಸ್ಥಾಪನೆಯಾಯಿತು. ಗಂಗಾ ನದಿ ನೀರನ್ನು ಕಾಪಾಡಿಕೊಳ್ಳುವುದು, ರಕ್ಷಿಸುವುದು ಮತ್ತು ನಿರ್ವಹಿಸುವುದು ಇದರ ಉದ್ದೇಶವಾಗಿದೆ. 2016 ರ ಅಕ್ಟೋಬರ್ 7 ರಂದು, ಜಲ ಸಂಪನ್ಮೂಲ ಸಚಿವಾಲಯ ಹೊರಡಿಸಿದ ಪ್ರಕಟಣೆ ಪ್ರಕಾರ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರ್ನಿರ್ಮಾಣವು ಪ್ರತಿ ವರ್ಷ ಒಂದು ಅಥವಾ ಹೆಚ್ಚು ಸಭೆಗಳನ್ನು NGC ನಡೆಸಬೇಕು ಎಂದು ಹೇಳಿದೆ,

ಆದರೂ, ಗಂಗಾ ರಾಷ್ಟ್ರೀಯ ಸ್ವಚ್ಛತಾ ಮಿಷನ್, ಜಲ ಸಚಿವಾಲಯದ ಅಡಿಯಲ್ಲಿರುವ ಸಂಸ್ಥೆಯಿಂದ ಪಡೆದ ಮಾಹಿತಿಯು ಅದರ ರಚನೆಯಾದ ನಂತರ ಎರಡು ವರ್ಷಗಳಿಗೂ ಹೆಚ್ಚು ಕಾಲ ಏನ್ ಜಿ ಸಿ ಒಂದು ಸಭೆಯೂ ನಡೆಸಲಿಲ್ಲ ಎಂದು ಬಹಿರಂಗಪಡಿಸಿದೆ. ಆದರೆ ಏನ್ ಜಿ ಸಿ ಯು ಗಂಗಾವನ್ನು ಶುಚಿಗೊಳಿಸುವ ಕಾರ್ಯದ ಮೇಲ್ವಿಚಾರಣೆಯನ್ನು ವಹಿಸಿರುವ ಅತಿದೊಡ್ಡ ಸಮಿತಿಯಾಗಿದೆ. ಏನ್ ಜಿ ಸಿ ಯ ರಚನೆಯೊಂದಿಗೆ, ರಾಷ್ಟ್ರೀಯ ಗಂಗಾ ನದಿ ಜಲಾನಯನ ಪ್ರಾಧಿಕಾರವನ್ನು ರದ್ದುಮಾಡಲಾಯಿತು. ರಾಷ್ಟ್ರೀಯ ಗಂಗಾ ನದಿ ಜಲಾನಯನ ಪ್ರಾಧಿಕಾರದ ಕಾರ್ಯನಿರ್ವಹಣೆಯು ಏನ್ ಜಿ ಸಿ ಯನ್ನು ಹೋಲುತ್ತದೆ ಮತ್ತು ಪ್ರಧಾನ ಮಂತ್ರಿಯು ಅದರ ಅಧ್ಯಕ್ಷರಾಗಿದ್ದರು.

2009 ನೇ ಇಸವಿಯಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಷ್ಟ್ರೀಯ ಗಂಗಾ ನದಿ ಜಲಾನಯನ ಪ್ರಾಧಿಕಾರ ರಚನೆಯಾಯಿತು. ಇದರ ಮೊದಲ ಸಭೆಯು 2009 ರ ಅಕ್ಟೋಬರ್ 5 ರಂದು ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರ ನೇತೃತ್ವದಲ್ಲಿ ನಡೆಯಿತು.

2009 ರಿಂದ 2012 ರವರೆಗೂ, ಮನಮೋಹನ್ ಸಿಂಗ್ ನೇತೃತ್ವದಲ್ಲಿ ರಾಷ್ಟ್ರೀಯ ಗಂಗಾ ನದಿ ಜಲಾನಯನ ಪ್ರಾಧಿಕಾರದ ಮೂರು ಸಭೆಗಳು ನಡೆದವು. ಇದರ ನಂತರ, 2014 ಮತ್ತು 2016 ರ ನಡುವೆ ಮೂರು ಸಭೆಗಳು ನಡೆದಿವೆ, ಅದರಲ್ಲಿ ಎರಡು ಸಭೆಗಳಿಗೆ ಸಚಿವೆ ಉಮಾಭಾರತಿ ಅವರು ಅಧ್ಯಕ್ಷತೆ ವಹಿಸಿದ್ದರು. ಮಾರ್ಚ್ 26, 2015 ರಂದು ಪ್ರಾಧಿಕಾರದ ಸಭೆಯ ಅಧ್ಯಕ್ಷತೆಯನ್ನು ಮೋದಿ ವಹಿಸಿದ್ದರು.

ಗಂಗಾ ಶುಚಿತ್ವದಲ್ಲಿ ಕೆಲಸ ಮಾಡಿದ ಪರಿಸರವಿಜ್ಞಾನಿ ರವಿ ಚೋಪ್ರಾ,ಹೇಳುತ್ತಾರೆ, “ಇದು ಗಂಗಾದ ಕುರಿರು ಅಂತಿಮ ನಿರ್ಧಾರದ ಮಾಡುವ ಅಂಗವಾಗಿದೆ. ಇದು ಒಂದು ವರ್ಷದಲ್ಲಿ ಕನಿಷ್ಟ ಎರಡು ಸಭೆಗಳನ್ನುನಡೆಸಬೇಕಿತ್ತು. ಪ್ರಧಾನ ಮಂತ್ರಿಯವರಿಗೆ ಒಂದು ಸಭೆ ನಡೆಸಲು ಸಾಧ್ಯವಾಗದಿದ್ದರೆ, ಅದು ನಿಜವಾಗಿಯೂ ನಿರ್ಣಾಯಕ ಅಂಗವೇ ಅಥವಾ ತದ್ರೂಪ ಮಾತ್ರವೇ ಎಂಬ ಪ್ರಶ್ನೆಯು ಉದ್ಭವಿಸುತ್ತದೆ.

ಡಿಸೆಂಬರ್ 2017 ರಲ್ಲಿ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ಗಂಗಾ ರಾಷ್ಟೀಯ ಸ್ವಚ್ಛತಾ ಮಿಷನ್ (ಎನ್ಎಂಸಿಜಿ) ಬಗ್ಗೆ ಬಿಡುಗಡೆಗೊಳಿಸಿದ ಆಡಿಟ್ ವರದಿಯಲ್ಲಿ , ಸರಕಾರವನ್ನು ಖಂಡಿಸಲಾಗಿದೆ. ನದಿ ಸ್ವಚ್ಛಗೊಳಿಸುವ , ಕೊಳಚೆನೀರಿನ ಸಂಸ್ಕರಣಾ ಘಟಕಗಳ ಸ್ಥಾಪನೆ ಮತ್ತು ಮನೆಗಳಲ್ಲಿ ಶೌಚಾಲಯಗಳ ನಿರ್ಮಾಣದ ವಿಳಂಬವನ್ನು ವರದಿ ಎತ್ತಿ ತೋರಿಸಿದೆ. ಅದೇ ಸಮಯದಲ್ಲಿ, ಬಿಜೆಪಿ ನಾಯಕ ಮುರಳಿ ಮನೋಹರ್ ಜೋಶಿ ಅಧ್ಯಕ್ಷತೆ ವಹಿಸಿದ್ದ ಸಂಸದೀಯ ಸಮಿತಿಯು ಗಂಗಾ ಶುಚಿಗೊಳಿಸುವ ಬಗ್ಗೆ ಸರಕಾರದ ಪ್ರಯತ್ನದಲ್ಲಿ ಭಾರೀ ನಿರಾಶೆಯನ್ನು ವ್ಯಕ್ತಪಡಿಸಿತು.

ಇದಕ್ಕೆ ಪ್ರತಿಕ್ರಿಯೆಯಾಗಿ, ಗಂಗಾವನ್ನು ಶುಚಿಗೊಳಿಸುವ ಉದ್ದೇಶದಿಂದ, ರಾಷ್ಟ್ರೀಯ, ರಾಜ್ಯ ಮತ್ತು ಜಿಲ್ಲೆಯ ಮಟ್ಟಗಳಲ್ಲಿ ಐದು ಹಂತದ ಯಾಂತ್ರಿಕ ವ್ಯವಸ್ಥೆಯನ್ನು ಜಲ ಸಚಿವಾಲಯ ಸಿದ್ಧಪಡಿಸಿದೆ ಎಂದು ಸರ್ಕಾರ ಹೇಳಿದೆ. ಈ ಕಾರ್ಯವಿಧಾನಗಳಲ್ಲಿ ಏನ್ ಜಿ ಸಿ ಅತ್ಯಂತ ಪ್ರಮುಖವಾದುದು. ವಾಸ್ತವದಲ್ಲಿ ಸಿಎಜಿ ಮತ್ತು ಸಂಸದೀಯ ಸಮಿತಿಗಳೆರಡರ ಕಳವಳದ ಹೊರತಾಗಿಯೂ ಒಂದೇ ಒಂದು ಸಭೆಯು ನಡೆಸಲಿಲ್ಲ ಎಂಬ ಅಂಶವು ಗಂಗಾವನ್ನು ಶುಚಿಗೊಳಿಸುವ ನಿಟ್ಟಿನಲ್ಲಿ ಮೋದಿ ಸರಕಾರದ ಗಂಭೀರತೆ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಸಮಿತಿ ಅದರ ವರದಿಯಲ್ಲಿ , ನಗರಾಭಿವೃದ್ಧಿ, ಕೈಗಾರಿಕೀಕರಣ ಮತ್ತು ಜನಸಂಖ್ಯೆಯ ಹೆಚ್ಚಳದಿಂದ ಗಂಗಾದಲ್ಲಿನ ಮಾಲಿನ್ಯವು ಹಲವು ವರ್ಷಗಳಿಂದ ಶೀಘ್ರವಾಗಿ ಹೆಚ್ಚುತ್ತಿದೆ ಎಂದು ಹೇಳಿದೆ. ನೀರಾವರಿ, ಕೈಗಾರಿಕಾ ಉದ್ದೇಶಗಳಿಗಾಗಿ, ಕುಡಿಯುವ ನೀರು ಮತ್ತು ಇನ್ನಿತರ ಕಡೆಗೆ ನೀರು ತಿರುಗಿರುವುದರಿಂದ ನದಿಯ ಹರಿವು ಅಡಚಣೆಯಾಗಿದೆ.

“ಗಂಗಾದ ಮುಖ್ಯವಾಹಿನಿ ಮಾತ್ರವಲ್ಲ, 11 ರಾಜ್ಯಗಳ ಮೂಲಕ ಹಾದುಹೋಗುವ ಸಂಪೂರ್ಣ ಗಂಗಾ ಜಲಾನಯನ ಪ್ರದೇಶದಲ್ಲಿನ ಕೊಳಚೆನೀರಿನ ಸಂಸ್ಕರಣೆಯ (ಶುದ್ಧೀಕರಣ) ಸಾಮರ್ಥ್ಯದ ಕೊರತೆಯಿದೆ. ಗಂಗಾದ ಮುಖ್ಯವಾಹಿನಿಯಲ್ಲಿ, ಐದು ರಾಜ್ಯಗಳಲ್ಲಿ (ಉತ್ತರಾಖಂಡ್, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳ) ದಿನಕ್ಕೆ 7,301 ದಶಲಕ್ಷ ಲೀಟರ್ಗಳಷ್ಟು(ಎಮ್ಎಲ್ಡಿ) ಕೊಳಚೆ ಸೃಷ್ಟಿಯಾಗುತ್ತಿದೆ, ಆದರೆ ದಿನಕ್ಕೆ 2,126 ದಶಲಕ್ಷ ಲೀಟರ್ ಕೊಳಚೆಯನ್ನು ಮಾತ್ರ ಸಂಸ್ಕರಿಸುವ ಸೌಲಭ್ಯಗಳಿವೆ.

ದಿನಕ್ಕೆ 1,188 ದಶಲಕ್ಷ ಲೀಟರ್ ವರೆಗೆ ಕೊಳಚೆಯನ್ನು ತೆರವುಗೊಳಿಸಲು ಕೊಳಚೆನೀರಿನ ಸಂಸ್ಕರಣ ಘಟಕ ನಿರ್ಮಾಣ ಹಂತದಲ್ಲಿದೆ ಎಂದು ಅಂದಾಜು ಸಮಿತಿ ಹೇಳಿದೆ. ಇದರ ಪ್ರಕಾರ, ಕೊಳಚೆನೀರಿನ ಸಂಸ್ಕರಣಾ ಘಟಕವನ್ನು ನಿರ್ಮಿಸಿದ ನಂತರವೂ ಪ್ರತಿ ದಿನ 3,987 ದಶಲಕ್ಷ ಲೀಟರ್ ಕೊಳಚೆ ನೀರು ಶುಚಿಗೊಳಿಸುವ ವ್ಯವಸ್ಥೆ ಇಲ್ಲ. ಇದಲ್ಲದೆ, ಏಳು ಐಐಟಿಗಳು ಗಂಗಾ ನದಿ ಜಲಾನಯನ ನಿರ್ವಹಣೆ ಯೋಜನೆಯನ್ನು ಜಂಟಿಯಾಗಿ ಸಿದ್ಧಪಡಿಸಿದ್ದು, ಅದರ ಪ್ರಕಾರ, 11 ರಾಜ್ಯಗಳಲ್ಲಿ ದಿನಕ್ಕೆ 12,051ದಶಲಕ್ಷ ಲೀಟರ್ ಕೊಳಚೆ ಸೃಷ್ಟಿಯಾಗುತ್ತಿದೆ, ಆದರೆ 5,717 ದಶಲಕ್ಷ ಲೀಟರ್ ಮಾತ್ರವೇ ಸಂಸ್ಕರಿಸಲಾಗುತ್ತದೆ . ಅಂದರೆ, ದಿನಕ್ಕೆ 6,334 ದಶಲಕ್ಷ ಲೀಟರ್ ಕೊಳಚೆಯು ಸಂಸ್ಕರಿಸದೆಯೇ ನದಿ ಅಥವಾ ಇತರ ನೀರಿನ ಸಂಪನ್ಮೂಲಗಳಿಗೆ ಸೇರಲ್ಪಡುತ್ತಿದೆ.

ಸಂಸದೀಯ ಸಮಿತಿಯು ಹೇಳಿದೆ, “ಜಗತ್ತಿನ ಅತ್ಯಂತ ಹತ್ತು ಕಲುಷಿತ ನದಿಗಳಲ್ಲಿ ಗಂಗಾ ಒಂದಾಗಿದೆ. ಇದು ಬಹಳ ಕಳವಳಕಾರಿ ವಿಷಯವಾಗಿದೆ. ಅನಿಯಂತ್ರಿತ ನಗರೀಕರಣ, ನದಿಯಲ್ಲಿ ಅಪಾಯಕಾರಿ ತ್ಯಾಜ್ಯ ಸೇರ್ಪಡೆ ಮತ್ತು ಒಳಚರಂಡಿಯಿಂದಾಗಿ ಗಂಗಾ ಸ್ವಚ್ಛತೆಯು ಭಾರೀ ಹಿನ್ನಡೆಯನ್ನು ಅನುಭವಿಸಿದೆ. ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಸಂಸ್ಥೆಗಳ ಮತ್ತು ಮಧ್ಯಸ್ಥಗಾರರ ನಡುವಿನ ಪರಿಣಾಮಕಾರಿ ಹೊಂದಾಣಿಕೆಯ ಕೊರತೆಯಿಂದಾಗಿ, ನದಿಯ ಸ್ವಚ್ಛತೆಗಾಗಿ ಸಮಗ್ರ ಅಧಿಕಾರವನ್ನು ಹೊಂದಿರುವ ಸಮಿತಿಯನ್ನು ರಚಿಸಲು ಸೂಚಿಸುತ್ತದೆ”

ಈ ಶಿಫಾರಸು ನಂತರ, ಸರ್ಕಾರವು ಏನ್ ಜಿ ಸಿ ಯನ್ನು ರಚಿಸಿತು. ಆದರೆ ಸಭೆ ನಡೆಸದ ಕಾರಣ, ಸರ್ಕಾರದ ಗಂಭೀರತೆಯನ್ನು ಪ್ರಶ್ನಿಸುವಂತಾಗಿದೆ.

ರದ್ದುಮಾಡಲ್ಪಟ್ಟ ರಾಷ್ಟ್ರೀಯ ಗಂಗಾನದಿ ಜಲಾನಯನ ಪ್ರಾಧಿಕಾರದ ಸದಸ್ಯ ಮತ್ತು ಸಾಮಾಜಿಕ ಕಾರ್ಯಕರ್ತ, ಜಲ ಪುರುಷರೆಂದೇ ಕರೆಯಲ್ಪಡುವ ರಾಜೇಂದ್ರ ಸಿಂಗ್ ನಿರಾಶೆ ವ್ಯಕ್ತಪಡಿಸಿ ಮೋದಿ ಪೊಳ್ಳುತನವನ್ನು ಪ್ರದರ್ಶಿಸುತ್ತಿದ್ದಾರೆ ಎಂದು ಹೇಳಿದರು ಮತ್ತು ಗಂಗಾವನ್ನು ಉಳಿಸುವ ಬದಲು ಈ ದೇಶದ ಜನರಿಗೆ ಸುಳ್ಳು ಭರವಸೆಗಳನ್ನು ನೀಡುತ್ತಿದ್ದಾರೆ.

ನದಿಯ ರಕ್ಷಣೆಗಾಗಿ ಕೇಂದ್ರವು ಮೇ 2015ರಲ್ಲಿ ನಮಮಿ ಗಂಗೆ ಕಾರ್ಯಕ್ರಮವನ್ನು ಅನುಮೋದಿಸಿದೆ. ಇದರ ಅಡಿಯಲ್ಲಿ, ಗಂಗಾವನ್ನು ಸ್ವಚ್ಛಗೊಳಿಸಲು ಮಾರ್ಗಸೂಚಿಗಳನ್ನು ರಚಿಸಲಾಗಿದೆ.ಇದು ನಗರಗಳು ಮತ್ತು ಕೈಗಾರಿಕಾ ಮಾಲಿನ್ಯದಿಂದ ಕೊಳಚೆನೀರಿನ ಸಂಸ್ಕರಣೆ, ನದಿ ಮೇಲ್ಮೈ ಶುದ್ಧೀಕರಣ ,ಗ್ರಾಮೀಣ ನಿರ್ಮಲೀಕರಣ, ನದಿಮುಖದ ಅಭಿವೃದ್ಧಿ, ಸ್ಮಶಾನ ಮತ್ತು ಸಮಾಧಿ ಮೈದಾನ ನಿರ್ಮಾಣ, ಮರಗಳ ತೋಪು ಮತ್ತು ಜೀವವೈವಿಧ್ಯ ಸಂರಕ್ಷಣೆಯನ್ನು ಒಳಗೊಂಡಿದೆ.

ಈ ಕಾರ್ಯಕ್ರಮಕ್ಕೆ ಅಂದಾಜು 24,672 ಕೋಟಿ ರೂ. ವೆಚ್ಚದ ಒಟ್ಟು 254 ಯೋಜನೆಗಳನ್ನು ಅಂಗೀಕರಿಸಲಾಗಿದೆ. ಅದರಲ್ಲಿ, ನವೆಂಬರ್ 30, 2018,ಅವಧಿಗೆ 131 (105 ಗಂಗಾ ಮತ್ತು ಉಪನದಿಗಳ ಮೇಲೆ 26) ಚರಂಡಿ ಸಂಸ್ಕರಣ ಯೋಜನೆಗಳು 19,772 ಕೋಟಿ ವೆಚ್ಚದಲ್ಲಿವೆ.ಕೇವಲ 31 ಯೋಜನೆಗಳು ಮಾತ್ರ ಪೂರ್ಣಗೊಂಡಿವೆ.

ಉಳಿದ 4,930 ಕೋಟಿ ರೂಪಾಯಿಗಳನ್ನು 123 ಯೋಜನೆಗಳಿಗೆ ಮೀಸಲಿರಿಸಲಾಗಿದೆ, ನದಿಮುಖಿ ಅಭಿವೃದ್ಧಿ, ಶ್ಮಶಾನ ಮತ್ತು ಸಮಾಧಿ ಮೈದಾನಗಳ ನಿರ್ಮಾಣ , ನದಿ ಮೇಲ್ಮೈಯನ್ನು ಸ್ವಚ್ಛಗೊಳಿಸುವಿಕೆ, ಮರ ನೆಡುವಿಕೆ, ಗ್ರಾಮೀಣ ಶುದ್ಧೀಕರಣ ಇತ್ಯಾದಿ.

ಮೋದಿ ಪ್ರಾರಂಭಿಸಿದ ಗಂಗಾ ಯೋಜನೆಗಳು ಇದಕ್ಕೂ ಮೊದಲು ವಿವಾದವನ್ನು ಕಂಡಿದೆ. ದಿವಂಗತ ಪರಿಸರವಾದಿ ಜಿ.ಡಿ. ಅಗರ್ವಾಲ್ ಪ್ರಧಾನಮಂತ್ರಿಗೆ ಪತ್ರಗಳನ್ನು ಬರೆದಿದ್ದು , ಗಂಗಾವನ್ನು ಶುಚಿಗೊಳಿಸುವ ಸರ್ಕಾರದ ಅನುಮೋದನೆಯ ಯೋಜನೆಗಳು ಕಾರ್ಪೊರೇಟ್ ವಲಯ ಮತ್ತು ವ್ಯಾಪಾರೀ ಕುಟುಂಬಗಳಿಗೆ ಮಾತ್ರ ಲಾಭದಾಯಕವೆಂದು ಹೇಳಿದ್ದಾರೆ.

112 ದಿನಗಳವರೆಗೆ ಉಪವಾಸ ಸತ್ಯಾಗ್ರಹ ಮಾಡಿದ ಅವರು ಮರಣದ ಮೊದಲು ಗಂಗಾ ಬಗ್ಗೆ ಮೋದಿಗೆ ಮೂರು ಪತ್ರಗಳನ್ನು ಬರೆದಿದ್ದರು. ಅವೆಲ್ಲವೂ ಉತ್ತರವಿಲ್ಲದೆ ಹೋಗಿದೆ.

ಕಳೆದ ವರ್ಷ ಅಕ್ಟೋಬರ್ನಲ್ಲಿ,ಯಾವುದೇ ಪ್ರದೇಶದಲ್ಲಿ ಗಂಗಾ ಶುಭ್ರವಾಗಿಲ್ಲ ಎಂದು ದಿ ವೈರ್ ವರದಿ ಮಾಡಿದೆ, ಆದರೆ ವಾಸ್ತವವಾಗಿ, 2013 ಕ್ಕೆ ಹೋಲಿಸಿದರೆ ಅನೇಕ ಸ್ಥಳಗಳಲ್ಲಿ ಹೆಚ್ಚು ಕಲುಷಿತವಾಗಿದೆ. 2014 ರಿಂದ ಜೂನ್ 2018 ರ ನಡುವೆ ಗಂಗಾವನ್ನು ಸ್ವಚ್ಛಗೊಳಿಸಲು 5,523 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಅದರಲ್ಲಿ 3,867 ಕೋಟಿ ರೂ.ವ್ಯಯಿಸಲಾಗಿದೆ.

ಇದಲ್ಲದೆ, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆಯ ಸಚಿವಾಲಯದ ಅಡಿಯಲ್ಲಿರುವ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಯ ಅಧ್ಯಯನದಲ್ಲಿ, ಗಂಗಾವು ಹಾದುಹೋಗುವ 39 ಸ್ಥಳಗಳಲ್ಲಿ , 2018 ರ ಮಳೆಗಾಲದ ನಂತರ ನದಿಯು ಕೇವಲ ಒಂದು ಪ್ರದೇಶದಲ್ಲಿ ಮಾತ್ರ ಸ್ವಚ್ಛವಾಗಿದೆ ಎಂದು ಹೇಳಲಾಗಿದೆ.

ಸುಪ್ರೀಂ ಕೋರ್ಟ್ ಸೂಚನೆಗಳನ್ನು ಅನುಸರಿಸಿ, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ‘ಗಂಗಾ ನದಿ ಜೈವಿಕ ನೀರಿನ ಗುಣಮಟ್ಟ ಮಾಪನ (2017-18)’ ಎಂಬ ಶೀರ್ಷಿಕೆಯಡಿಯಲ್ಲಿ ವರದಿಯನ್ನು ಬಿಡುಗಡೆಗೊಳಿಸಿದೆ. ಅದರಲ್ಲಿ ಹೇಳಲಾಗಿದೆ ಗಂಗಾ ಹಾದುಹೋಗುವ 41 ಸ್ಥಳಗಳಲ್ಲಿ 37ರಲ್ಲಿ , ಮಳೆಗಾಲಕ್ಕೆ ಮುಂಚೆ ಮಧ್ಯಮ-ತೀವ್ರ ಮಟ್ಟದಲ್ಲಿ ನೀರಿನ ಮಾಲಿನ್ಯವು ಕಂಡುಬಂದಿದೆ.